CM Siddaramaiah: ಸಿದ್ದರಾಮಯ್ಯ, ‘ ಹೊರಗೆ ಮಾತ್ರ ಬಸಪ್ಪ ಒಳಗೆ ವಿಷಪ್ಪ ‘- ಹೇಳಿದ್ದು ಯಾರು ಗೊತ್ತಪ್ಪ ?

Latest news politics Who said Siddaramaiah 'Basappa only outside but Vishappa inside

CM Siddaramaiah: ಮುಖ್ಯಮಂತ್ರಿ ಅವರು ಹೊರಗೆ ಮಾತ್ರ ಬಸಪ್ಪ ಒಳಗಿಂದೊಳಗೆ ವಿಷಪ್ಪ. ಎದುರುಗಡೆ ದೊಡ್ಡದಾಗಿ ಭಾಷಣ ಮಾಡುತ್ತಾರೆ ಆದರೆ ಒಳಗೊಳಗೆ ವಿಷ ಕಾರುತ್ತಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಬಿಗ್ ಹೇಳಿಕೆ ನೀಡಿದ್ದಾರೆ.
ಏನು ಶಾಸಕರು ತಮ್ಮ ಹೋರಾಟವನ್ನು ಮಾಡುತ್ತಿದ್ದರು, ಯಾವ ಸರ್ಕಾರ ಗುಂಡಾ-ಲೋಚನೆಯನ್ನು ಮಾಡುತ್ತಿತ್ತು, ಅದನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಹತ್ತು ಜನರನ್ನು ಅಮಾನತು ಮಾಡಿದ್ದು ಒಂದು ಅಮಾನವೀಯ ಕೃತ್ಯ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ನಿನ್ನೆ ನಡೆದ ಈ ಹೋರಾಟ ನ್ಯಾಯಯುತವಾದ ಹೋರಾಟವಿತ್ತು. ಆದರೆ ಈ ಹೋರಾಟವನ್ನು ಮಾನ್ಯ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು(CM Siddaramaiah) , ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡರು ಮತ್ತು ಇತರ ಅನೇಕ ಕಾಂಗ್ರೆಸ್ ನಾಯಕರು ಮಾತಾಡುವ ರೀತಿಯಲ್ಲಿ ಹೋರಾಟವನ್ನು ಹತ್ತಿಕುವ ಉದ್ದೇಶ ಕಾಣುತ್ತಿದೆ.

ನಿನ್ನೆ 10 ಜನ ಬಿಜೆಪಿ ಶಾಸಕರನ್ನು ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಅಮಾನತುಗೊಳಿಸಿದ್ದರು.ಸದನದ ಬಾವಿಯ ಒಳಗೆ ಪ್ರತಿಭಟಿಸಿದ ಕಾರಣಕ್ಕಾಗಿ ಅವರೆಲ್ಲರ ಅಮಾನತ್ತು ಆಗಿತ್ತು.

ಉಪ ಸ್ಪೀಕರ್ ಅವರು ದಲಿತರು, ಅವರ ಎದುರು ಪ್ರತಿಭಟನೆ ಮಾಡಿದ್ದು ತಪ್ಪು ಎಂದಿದ್ದರು ಸಿಎಂ ಅವರು. ಸ್ಪೀಕರ್ ಅವರಿಗೆ ದಲಿತರು ಮೇಲ್ಜಾತಿ ಅವರು ಅನ್ನುವುದು ಇಲ್ಲ ಅದೊಂದು ಸಾಂವಿಧಾನಿಕ ಹುದ್ದೆ. ‘ ದಲಿತ ಸ್ಪೀಕರ್ ‘ ಅನ್ನುವ ಪದ ಸಿದ್ದರಾಮಯ್ಯನವರು ಬಳಸಿದ ವಿರುದ್ಧ ಇದೀಗ ಹಲವು ನಾಯಕರುಗಳು ಕಿಡಿ ಕಾರುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ದಲಿತರ ಬಗ್ಗೆ ಈ ಥರ ನೀವು ಪ್ರೀತಿ ತೋರಿಸುವುದು ಬೇಡ. ನೀವು ಕೆಳಗಿಳಿದು ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ದಲಿತರು ಆ ಸ್ಥಾನದಲ್ಲಿ ಕುಳಿತುಕೊಳ್ಳಬೇಕಿತ್ತು. ನೀವು ದಲಿತರನ್ನು ವಂಚಿಸಿ ಮುಖ್ಯಮಂತ್ರಿಯಾಗಿ ಕೂತಿದ್ದೀರಿ. ನೀವೀಗ ಕೂತಿರುವ ಜಾಗ ನಿಮ್ಮ ಜಾಗವಲ್ಲ, ಅದು ದಲಿತರ ಜಾಗ. ನೀವು ಮಾತಿಗೆ ದಲಿತರ ಬಗ್ಗೆ ಅನುಕಂಪದ ಮಾತನ್ನು ಆಡುತ್ತಿದ್ದೀರಿ. ಇದು ಖಂಡನೀಯ, ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.

 

ಇದನ್ನು ಓದಿ: Rakshith Shetty: ಹಾಸ್ಟೆಲ್’ನಲ್ಲಿ ಆ ದಿನಗಳಲ್ಲೇ ಅಂಥ ಚಿತ್ರ ನೋಡ್ತಿದ್ದರಂತೆ ರಕ್ಷಿತ್ ಶೆಟ್ಟಿ 

Leave A Reply

Your email address will not be published.