Electric Pole Rules: ರೈತರೇ ನಿಮ್ಮ ಜಮೀನಲ್ಲಿ ಕರೆಂಟ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಇದೆಯಾ? ಹಾಗಿದ್ರೆ ನಿಮಗಿದೋ ಗುಡ್ ನ್ಯೂಸ್ !!
Latest Karnataka news electricity transformers subsidy for farmers new scheme updates
Electricity transformers subsidy: ರೈತರೆ ನಿಮ್ಮ ಕೃಷಿ ಭೂಮಿಯ(Agriculture Land) ಲ್ಲಿ ಟ್ರಾನ್ಸ್ಫರ್(Transformer)ಕಂಬಗಳು ಇದ್ದರೆ ಇದರಿಂದ ತೊಂದರೆ ಎಂದು ಭಾವಿಸಬೇಡಿ. ಯಾಕೆಂದ್ರೆ ಇದರಿಂದ ನೀವು ಸಾಕಷ್ಟು ಲಾಭಗಳನ್ನು ಗಳಿಸುತ್ತೀರಾ. ಈ ಬಗ್ಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಹೌದು, ನಮ್ಮ ಭಾರತ ದೇಶದ ಮೂಲ ಕೃಷಿ, ನಮ್ಮ ದೇಶದಲ್ಲಿ ಈಗ ಬೇರೆ ಉದ್ಯೋಗಗಳು ಇಂಡಸ್ಟ್ರಿಗಳು ಹೆಚ್ಚಿರಬಹುದು. ಆದರೆ, ಭಾರತದ ಮೂಲ ಉದ್ಯಮ ಮತ್ತು ಉದ್ಯೋಗ ಕೃಷಿ (Agriculture), ರೈತನೆ ನಮ್ಮ ದೇಶದ ಬೆನ್ನೆಲುಬು. ಅಂತೆಯೇ ಸರ್ಕಾರ ಕೂಡ ರೈತರಿಗೆ ಹಲವಾರು ಯೋಜನೆ, ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ರೈತರಿಗೆ ಯಾವುದೆ ರೀತಿಯ ತೊಂದರೆ ಉಂಟಾದರೂ ಅದನ್ನು ಆ ಕೂಡಲೇ ಸರಿ ನಡೆಸುತ್ತದೆ. ಅಂತೆಯೇ ಇದೀಗ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬಗಳಿದ್ದರೆ ಆ ಬಗ್ಗೆ ಚಿಂತೆ ಪಡುವಂತಿಲ್ಲ. ಯಾಕೆಂದ್ರೆ ಈ ಬಗ್ಗೆ ನಿಮಗೊಂದು ಗುಡ್ ನ್ಯೂಸ್ ಇದೆ.
ನೀವು ಕೃಷಿಕರಾಗಿದ್ದು, ಹಾಗೂ ನಿಮ್ಮ ಕೃಷಿ ಭೂಮಿಯ(Agriculture Land) ಮೇಲೆ ಟ್ರಾನ್ಸ್ಫರ್ ಕಂಬಗಳು ಇದ್ದರೆ ನೀವು ಸಾಕಷ್ಟು ಲಾಭಗಳನ್ನು( Electricity transformers subsidy) ಗಳಿಸುತ್ತೀರಾ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಅಂದಹಾಗೆ ವಿದ್ಯುತ್ ಕಂಬ, ಟ್ರಾನ್ಸ್ಫರ್ ನಿಮ್ಮ ಜಮೀನಿನಲ್ಲಿದ್ದರೆ ವಿದ್ಯುತ್ ಕಾಯ್ದೆ 2003ರ ಸೆಕ್ಷನ್ 57 ರ ಪ್ರಕಾರ ನೀವು ಸಾಕಷ್ಟು ಲಾಭಾನಾ ಗಳಿಸ್ತೀರಾ.
ಏನಿದು ಯೋಜನೆ?
ನಿಮ್ಮ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಡಿಪಿ(DP) ಹಾಗೂ ಟ್ರಾನ್ಸ್ ಫಾರ್ಮರ್ ಗಳು ಇದ್ದರೆ ಸರ್ಕಾರದಿಂದ ರೈತರಿಗೆ ತಿಂಗಳಿಗೆ ಉಚಿತ 5 ರಿಂದ 10 ಸಾವಿರ ಹಣ ಸಿಗುತ್ತದೆ. ಸರ್ಕಾರವೇ ಅದರ ನಿರ್ವಹಣೆ ಕೂಡ ಮಾಡುತ್ತದೆ. 5 ರಿಂದ 10 ಸಾವಿರ ಹಣದ ಜೊತೆಗೆ ಟಿಸಿಗಳ ನಿರ್ವಹಣೆಯನ್ನು ಕೂಡ ಉಚಿತವಾಗಿ ಮಾಡುತ್ತದೆ. ಇದರಿಂದ ರೈತರಿಗೆ ಯಾವುದೇ ರೀತಿಯ ನಷ್ಟಗಳು ಸಂಭವಿಸುವುದಿಲ್ಲ. Noc ಪ್ರಮಾಣಪತ್ರ ಕೂಡ ಸಿಗುತ್ತದೆ.
ಈ ಯೋಜನೆಯ ಲಾಭಗಳೇನು?
• ಈ ಯೋಜನೆಯ ಲಾಭ ಪಡೆಯಲು ರೈತರು KEB ಗೆ ಕೈ ಬರವಣಿಗೆಯಲ್ಲಿ ಒಂದು ಅರ್ಜಿಯನ್ನು ಸಲ್ಲಿಸಬೇಕು
• ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಸಂಪರ್ಕ ಸಿಗದೆ ಹೋದರೆ, ಒಂದು ವಾರಕ್ಕೆ 100 ರೂಪಾಯಿ ಪರಿಹಾರ ನೀಡಬೇಕು ಎಂದು ಕಾನೂನಿನ ನಿಯಮ (Law) ಸಹ ಇದೆ.
• ರೈತರ ನೆಲದಲ್ಲಿ ಇರುವ ಟ್ರಾನ್ಸ್ಫಾರ್ಮರ್ ಗಳಿಗೆ ತೊಂದರೆ ಉಂಟಾದರೆ 48 ಗಂಟೆಗಳ ಒಳಗೆ ಕಂಪನಿಯವರು ಬಂದು ಅದನ್ನು ಸರಿ ಮಾಡಬೇಕು.
• ರೈತರು ತಮ್ಮ ನೆಲದಲ್ಲಿ DP ಅಥವಾ POL ಇಟ್ಟುಕೊಂಡಿರುತ್ತಾರೆ, ಇದರ ವೆಚ್ಚ ₹15,000 ರೂಪಾಯಿ, ಕೃಷಿಗೆ ಬಳಸುವ ಪಂಪ್, ಕಂಬ ಮತ್ತು ಇನ್ನಿತರ ವೆಚ್ಚಗಳನ್ನು KEB ಭರಿಸಬೇಕು.
• ಕೃಷಿ ನೆಲದಲ್ಲಿರುವ DP ಮತ್ತು POL ಗಾಗಿ ರೈತರಿಗೆ MSEB ಇಂದ ತಿಂಗಳಿಗೆ 2000 ಇಂದ 5000 ರೂಪಾಯಿಯವರೆಗು ವಿದ್ಯುತ್ ಸೌಲಭ್ಯ ಕೊಡಲಾಗುತ್ತದೆ. ಒಂದು ವೇಳೆ ಕಂಪನಿಯ ನಿರ್ಧಾರದಿಂದ ಒಂದು ನೆಲದಿಂದ ಮತ್ತೊಂದು ಕಡೆಗೆ ವರ್ಗಾಯಿಸಬೇಕು ಎಂದರೆ, MSEB ಎಲೆಕ್ಟ್ರಿಸಿಟಿ ವರ್ಗಾಯಿಸಲು ಸ್ಟೇಶನ್, ಟ್ರಾನ್ಸ್ಫಾರ್ಮರ್, ಡಿಪಿ, ಕಂಬ ಎಲ್ಲವನ್ನು ಕೂಡ ಚೇಂಜ್ ಮಾಡಬೇಕಾಗುತ್ತದೆ.
ಜಮೀನಿನಲ್ಲಿ ಕಂಬವಿಡಲು ಅಗ್ರಿಮೆಂಟ್:
ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಇಡಬೇಕು ಎಂದರೆ, ರೈತರ ಜೊತೆಗೆ ಕಂಪನಿಗಳು ಒಂದು ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಇದು ಬಾಡಿಗೆಯ ಅಗ್ರಿಮೆಂಟ್ ರೀತಿ ಆಗಿದ್ದು, ವಿದ್ಯುತ್ ಕಂಬ ಇಡುವುದಕ್ಕೆ, ಕಂಪನಿಯು ರೈತರಿಗೆ ₹5000 ಇಂದ ₹10,000 ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ.
ಆಕ್ಷೇಪಣಾ ಪತ್ರ ನೀಡದಿರಿ:
ಯಾವುದೇ ಕಾರಣಕ್ಕೂ ಕೂಡ ಕಂಪನಿಗೆ NOC(ಆಕ್ಷೇಪಣಾ ಪತ್ರ) ಪತ್ರವನ್ನು ನೀಡಲು ಹೋಗಬೇಡಿ. ಹೀಗೆ ಮಾಡಿದಲ್ಲಿ ನೀವು ಆ ಜಾಗದಿಂದ ಹಣವನ್ನು ಗಳಿಸುವಂತಹ ಸಂಪೂರ್ಣ ಅಧಿಕಾರವನ್ನು ಬಿಟ್ಟುಕೊಟ್ಟಂತಾಗುತ್ತದೆ. ಇಂತಹ ಮಾಹಿತಿಗಳು ಸಾಕಷ್ಟು ಕೃಷಿ ರೈತರಿಗೆ ತಿಳಿದಿರುವುದಿಲ್ಲ ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಇಂತಹ ಮಾಹಿತಿಗಳನ್ನು ಶೇರ್ ಮಾಡುವ ಮೂಲಕ ಜ್ಞಾನವನ್ನು ಮೂಡಿಸುವಂತಹ ಕೆಲಸವನ್ನು ಮಾಡಬಹುದಾಗಿದೆ.