RBI: ಟಮೋಟೋ ರೇಟ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಿಸರ್ವ್ ಬ್ಯಾಂಕ್ – ಅರರೇ.. RBIಗೂ ತಟ್ಟಿತಾ ಇದರ ಬೆಲೆ ಏರಿಕೆ ಬಿಸಿ?!
Latest news tomato rate news RBI gives update on tomato rate
ಟೊಮ್ಯಾಟೋ(Tomato) ಬೆಲೆ ಗಗನಕ್ಕೇರುತ್ತಿರುವುದು ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿದೆ. ಟೊಮ್ಯಾಟೋ ಬೆಲೆಯು ಭಾರತೀಯ ಅಡುಗೆಮನೆಗಳ(Indian kitchen) ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಗ್ರಾಹಕರ ಜೇಬಿನನ್ನು ಸುಡುತ್ತಿದೆ. ಆದರೀಗ ಈ ನಡುವೆ ಈ ಬೆಲೆ ಏರಿಕೆ ಕುರಿತು RBI ಕೆಲವೊಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ.
ಹೌದು, ದೇಶದ ವಿವಿಧ ಭಾಗಗಳಲ್ಲಿ ಟೊಮ್ಯಾಟೊ ಬೆಲೆಗಳು ಕೆಜಿಗೆ 250 ರೂ.ಗೆ ತಲುಪಿದ್ದು ಕೊಳ್ಳುವ ಜನರಿಗೆ ಬರೆ ಎಳೆದಂತಾಗಿದೆ. ಈ ನಡುವೆ ಅನೇಕ ವರ್ಷಗಳಿಂದ ನಷ್ಟ ಅನುಭವಿಸಿದ ರೈತ(Formers) ಇದೀಗ ಒಟ್ಟಿಗೇ ಎಲ್ಲವನ್ನೂ ಸಂಪಾದನೆ ಮಾಡುತ್ತಾ ಖುಷಿ ಪಡುತ್ತಿದ್ದಾನೆ ಅನ್ನೋದು ಒಂದು ಕಡೆಯಾದರೆ ಹಲವೆಡೆ ಮಧ್ಯವರ್ತಿಗಳು(Broker’s)ಇದರ ಲಾಭ ಗಳಿಸುತ್ತಿದ್ದಾರೆ ಅನ್ನೋದು ವಿಪರ್ಯಾಸ. ಅದೇನೆ ಇರಲಿ ಸದ್ಯ ಈ ಟಮೋಟೋ ರೇಟ್ ಬಿಸಿ RBI ಗೂ ಮುಟ್ಟಿದ್ದು, ಸದ್ಯ ರಿಸರ್ವ್ ಬ್ಯಾಂಕ್ ಈ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ಒಮ್ಮೆಲೆ ಬೆಲೆ ಏರಿಕೆ ಯಾಕೆ?
ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿನ ಕೆಟ್ಟ ಹವಾಮಾನ(Whether)ಮತ್ತು ಕೀಟಗಳಿಂದ ಉಂಟಾದ ಬೆಳೆ ಹಾನಿಯಿಂದಾಗಿ ಟೊಮ್ಯಾಟೊ ಬೆಲೆಯಲ್ಲಿ ಇತ್ತೀಚೆಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್(RBI) ಇಂಡಿಯಾ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಟೊಮ್ಯಾಟೊ ದರ ಕುರಿತಂತೆ, ಸುಮಾರು 2.6 ರಷ್ಟು ಫೋರ್ಟ್ ನೈಟ್ ಅವಧಿ (ಅಂದರೆ ಒಟ್ಟಾರೆ 39 ದಿನಗಳು) ಟೊಮ್ಯಾಟೊ ಬೆಲೆ ಸರಾಸರಿ 40 ರೂ.ಗಿಂತ ಹೆಚ್ಚಿರುತ್ತದೆ ಹಾಗೂ 10 ರಷ್ಟು ಫೋರ್ಟ್ ನೈಟ್ ಅವಧಿಯಲ್ಲಿ (ಅಂದರೆ ಒಟ್ಟಾರೆ 150 ದಿನಗಳು) ಟೊಮೆಟೊ (Tometo) ಬೆಲೆ ಸರಾಸರಿ 20 ರೂ.ಗಿಂತ ಕಡಿಮೆ ಇರುತ್ತದೆ ಎಂದು ಉಲ್ಲೇಖಿಸಿದೆ.
ಟೊಮ್ಯಾಟೊ ಬೆಲೆ ಏರಿಕೆಯು ಕೆಲ ಅಲ್ಪಾವದಿ ಮಾತ್ರ:
ಟೊಮ್ಯಾಟೊ, ಅತ್ಯಂತ ಕಡಿಮೆ ಅವಧಿಯೊಂದಿಗೆ ಹೆಚ್ಚು ಹಾಳಾಗುವ ಬೆಳೆಯಾಗಿದ್ದು, ಬೆಲೆಗಳಲ್ಲಿ ಗಣನೀಯವಾದ ಋತುಮಾನದ ವ್ಯತ್ಯಾಸವನ್ನು ಪ್ರದರ್ಶಿಸುತ್ತದೆ ಆದರೆ ಈ ಬೆಲೆಗಳು ಅಲ್ಪಕಾಲಿಕವಾಗಿರುತ್ತವೆ, ಅಂದರೆ ಕೆಲ ದಿನಗಳ ವರೆಗೆ ಮಾತ್ರ ಎಂದು ಕೇಂದ್ರ ಬ್ಯಾಂಕ್(Central bank) ಹೇಳಿದೆ.
ಹಣದುಬ್ಬರ ಚಂಚಲತೆಗೆ ಐತಿಹಾಸಿಕ ಕೊಡುಗೆ:
ಐತಿಹಾಸಿಕವಾಗಿ, ಟೊಮ್ಯಾಟೊ ಬೆಲೆಗಳು ಪ್ರಮುಖ ಹಣದುಬ್ಬರದಲ್ಲಿನ ಏರಿಳಿತಗಳಲ್ಲಿ ಪ್ರಮುಖ ಅಂಶವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜುಲೈ 2023 ರ ಪ್ರಕಟಣೆಯ ಪ್ರಕಾರ, ಅದರ ಚಂಚಲತೆಯು ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳಲ್ಲಿನ ಇತರ ತರಕಾರಿಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಸ್ಥಳಗಳಲ್ಲಿ ವಿಭಿನ್ನ ಸಮಯದ ಅವಧಿಯನ್ನು ಹೊಂದಿರುವ ಬಹು ಬೆಳೆ ಸೈಕಲ್‌ಗಳು ಒಂದೇ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬೆಲೆ ಏರಿಕೆಗೆ ಕಾರಣವಾಗುತ್ತವೆ ಎಂದು ಆರ್‌ಬಿಐ ಹೇಳಿದೆ.
ಟೊಮ್ಯಾಟೊ ಬೆಲೆ ಏರಿಕೆ ಇತರ ಸರಕುಗಳ ದರಗಳ ಮೇಲೆ ಪರಿಣಾಮ ಬೀರುತ್ತವೆ:
ಟೊಮ್ಯಾಟೊ ಬೆಲೆಗಳ ಏರಿಕೆಯ ಸ್ಪಿಲ್ ಓವರ್ ಪರಿಣಾಮಗಳು ಮತ್ತು ಹಣದುಬ್ಬರದ ನಿರೀಕ್ಷೆಗಳ ಮೇಲಿನ ಗೊಂದಲವು ಒಂದು ಪ್ರಮುಖ ಕಾಳಜಿಯಾಗಿ ಉಳಿದಿದೆ. ಇದು ಇತರ ಸರಕುಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ವರ್ಷಗಳಲ್ಲಿ ಹೆಚ್ಚಿದ ಬೆಲೆಯ ಏರಿಳಿತವು ಹಣದುಬ್ಬರವನ್ನು ತಡೆಯಲು ಸುಧಾರಿತ ಪೂರೈಕೆ ಸರಪಳಿಗಳಿಗೆ ಉತ್ತೇಜನ ನೀಡಿದೆ ಎಂದು ವರದಿ ಹೇಳಿದೆ.
ಇದನ್ನು ಓದಿ: Actress Taapsee Pannu: ಮದ್ವೆ ಆಗಲು ನಾನೇನು ಗರ್ಭಿಣಿ ಆಗಿದ್ದೀನಾ ? – ನಾಯಕಿ ನಟಿಯ ಹೇಳಿಕೆಗೆ ಫಿಲ್ಮ್ ಇಂಡಸ್ಟ್ರಿ ಶಾಕ್ !