Adhar card: ಆಧಾರ್ ಕಾರ್ಡಿನಲ್ಲಿ ಫೋನ್ ನಂಬರ್ ಬದಲಿಸ್ಬೇಕಾ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ, ರಿಸ್ಕ್ ಇಲ್ದೆ ಚೇಂಜ್ ಮಾಡ್ಕೊಳ್ಳಿ.

Latest news Follow these tips want to change phone number in Aadhaar card

Adhar card: ಇಂದು ಸರ್ಕಾರದ(Government)ಪ್ರತಿಯೊಂದು ಯೋಜನೆಗಳನ್ನು, ಸವಲತ್ತುಗಳನ್ನು ಪಡೆಯುವುದಾದರೆ ಆಧಾರ್ ಕಾರ್ಡ್(Adhar card) ತುಂಬಾ ಪ್ರಮುಖವಾದ ದಾಖಲೆಯಾಗಿದೆ. ಏನು ಮಾಡಿಸುವುದಿದ್ದರೂ ಆಧಾರ್ ಬೇಕೇ ಬೇಕು. ಹೀಗಾಗಿ ಸಮಯಕ್ಕೆ ಸರಿಯಾಗಿ ಇದರಲ್ಲಿರುವ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ. ಅಂತೆಯೇ ಆಧಾರ್ ಗೆ ಮೊಬೈಲ್ ನಂಬರ್(Mobile number)ಆಡ್ ಮಾಡುವುದೂ ಅಷ್ಟೇ ಮುಖ್ಯ. ಹಾಗಿದ್ರೆ ಆಧಾರ್ ಗೆ ನಿಮ್ಮ ಮೊಬೈಲ್ ನಂಬರ್ ಬದಲಾಯಿಸಲು ಅಥವಾ ಸೇರಿಸಲು ಏನು ಮಾಡ್ಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಹೌದು, ನಿಮ್ಮ ಆಧಾರ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡಬೇಕಾದಲ್ಲಿ ಮೊದಲಿಗೆ ಮೊಬೈಲ್ ನಂಬರ್ ಬೇಕಾಗುತ್ತದೆ. ಏಕೆಂದರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹಾಗು ಸಂದೇಶಗಳು ಬರುತ್ತವೆ. ಕೆಲವು ಬಾರಿ ಆಧಾರ್ ನಲ್ಲಿ ನಮ್ಮ ಹಳೇಯ ನಂಬರ್ ಅಥವಾ ತಪ್ಪು ಮೊಬೈಲ್ ನಂಬರ್ ಆ್ಯಡ್(Add) ಆಗಿರುತ್ತದೆ. ಹಾಗಿದ್ದರೆ, ಈ ಸಂದರ್ಭ ಆಧಾರ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ ಎಂಬುದನ್ನು ನೋಡೋಣ.

ಆಧಾರ್​ಗೆ ಮೊಬೈಲ್ ನಂಬರ್ ಸೇರಿಸುವುದು ಅಥವಾ ನಂಬರ್ ಅಪ್​ಡೇಟ್ ಮಾಡುವ ವಿಧಾನ
• ನಿಮ್ಮ ವಾಸಸ್ಥಳದ ಸಮೀಪ ಅಥವಾ ಯಾವುದೇ ಸ್ಥಳದಲ್ಲಿರುವ ಆಧಾರ್ ಸೇವಾ ಕೇಂದ್ರ(Adhar seva kendra) ಅಥವಾ ಎನ್​ರೋಲ್ಮೆಂಟ್ ಸೆಂಟರ್​ಗೆ(Enrolment center) ಹೋಗಿರಿ. ಈ ಆಧಾರ್ ಕೇಂದ್ರ ಎಲ್ಲಿದೆ ಎಂದು ಗೊತ್ತಾಗದೇ ಇದ್ದರೆ ಯುಐಡಿಎಐ(UIDAI) ವೆಬ್​ಸೈಟ್​ನಲ್ಲಿ ಲೊಕೇಟ್ ಎನ್ರೋಲ್ಮೆಂಟ್ ಸೆಂಟರ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಸಮೀಪದ ಆಧಾರ್ ಕೇಂದ್ರವನ್ನು ತೋರಿಸುತ್ತದೆ.
• ಆಧಾರ್ ಎನ್ರೋಲ್ಮೆಂಟ್ ಸೆಂಟರ್​ಗೆ ಹೋದರೆ ಅಲ್ಲಿರುವ ಸಿಬ್ಬಂದಿ ಮೂಲಕ ಆಧಾರ್ ತಿದ್ದುಪಡಿ ಸೇವೆ ಪಡೆಯಬಹುದು.

• ಜೊತೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಇತರ ಪೂರಕ ದಾಖಲೆಗಳನ್ನು ಇಟ್ಟುಕೊಂಡಿರಿ.
• ಮೊಬೈಲ್ ನಂಬರ್ ಅಪ್​ಡೇಟ್ ಮಾಡುವುದಾದರೆ ಅದಕ್ಕೆಂದು ಫಾರ್ಮ್ ಕೊಡಲಾಗುತ್ತದೆ. ಅದನ್ನು ಭರ್ತಿ ಮಾಡಬೇಕು.
• ಎಚ್ಚರಿಕೆಯಿಂದ ಅರ್ಜಿ ತುಂಬಿಸಿ, ಅಲ್ಲಿರುವ ಹೆಲ್ಪ್ ಎಕ್ಸಿಕ್ಯೂಟಿವ್​ಗೆ ಕೊಡಿ. ಫಾರ್ಮ್​ನಲ್ಲಿ ತುಂಬಿಸಲಾಗಿರುವ ಮಾಹಿತಿ ಎಲ್ಲವೂ ಸರಿ ಇದ್ದ ಬಳಿಕ ಶುಲ್ಕ ಕಟ್ಟಲು ತಿಳಿಸಲಾಗುತ್ತದೆ.
• ಮೊಬೈಲ್ ನಂಬರ್ ಅಪ್​ಡೇಟ್ ಮಾಡುವುದೂ ಸೇರಿ ಯಾವುದೇ ಸೇವೆಗೂ 50 ರೂ ಶುಲ್ಕ ಇರುತ್ತದೆ. ಕ್ಯಾಷ್ ಮೂಲಕ ಹಣ ಪಾವತಿಸಬಹುದು. ಅಥವಾ ಸಿಬ್ಬಂದಿ ಬೇರೆ ಪಾವತಿ ಆಯ್ಕೆಗಳನ್ನು ಕೊಡಬಹುದು.
• ಶುಲ್ಕ ಕಟ್ಟಿದ ಬಳಿಕ ನಿಮಗೆ ಅಪ್​ಡೇಟ್ ರಿಕ್ವೆಸ್ಟ್ ನಂಬರ್ (ಯುಆರ್​ಎನ್) ಸ್ಲಿಪ್ ಅನ್ನು ಕೊಡಲಾಗುತ್ತದೆ. ಈ ನಂಬರ್ ಮೂಲಕ ನಿಮ್ಮ ಮನವಿಯ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ತಿಳಿಯಬಹುದು.
• ಯುಐಡಿಎಐನ ಮೈ ಆಧಾರ್ ಪೋರ್ಟಲ್​ನಲ್ಲಿ ನೀವು ನಿಮ್ಮ ಮನವಿಯ ಸ್ಥಿತಿ ನೋಡಬಹುದು. ಪೋರ್ಟಲ್​ನಲ್ಲಿರುವ ‘ಚೆಕ್ ಎನ್ರೋಲ್ಮೆಂಟ್’ ಸೆಕ್ಷನ್​ಗೆ ಹೋಗಿ ಅಲ್ಲಿ ಯುಆರ್​ಎನ್ ನೀಡಿ ಸ್ಟೇಟಸ್ ಪರಿಶೀಲಿಸಬಹುದು.
• ನೀವು ಮೊಬೈಲ್ ನಂಬರ್ ಅಪ್​ಡೇಟ್​ಗೆ ಮನವಿ ಸಲ್ಲಿಸಿದ ಬಳಿಕ ಅದು ಡಾಟಾಬೇಸ್​ನಲ್ಲಿ ಯಶಸ್ವಿಯಾಗಿ ಅಪ್​ಡೇಟ್ ಆಗಲು 90 ದಿನ ಬೇಕಾಗಬಹುದು.

ಇನ್ನು ಈ ನಡುವೆ 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ . ಅಲ್ಲದೆ, ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಯುಐಡಿಎಐ 2023ರ ಸೆಪ್ಟೆಂಬರ್ 14ರ ತನಕ ಅವಕಾಶ ಕಲ್ಪಿಸಿದೆ.

 

ಇದನ್ನು ಓದಿ: Gruha jyoti scheme: ಫ್ರೀ ಕರೆಂಟ್ ಬೆನ್ನಲ್ಲೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್!! ‘ಗೃಹಜ್ಯೋತಿ’ಗೆ ಅರ್ಜಿ ಹಾಕಿ, ಈ 3 ಯೋಜನೆಯ ಲಾಭ ಪಡೆಯಿರಿ 

Leave A Reply

Your email address will not be published.