Maha mythree : ಸಭೆಗೂ ಮುನ್ನ ವಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಪ್ರಕಟ !! ಉಹಿಸಲಾಗದ ಹೆಸರಿನ ಘೋಷಣೆಯಿಂದ ಮೈತ್ರಿಯಲ್ಲಿ ಆಕ್ರೋಶ ಸ್ಪೋಟ !!

Congress :ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election)ಮಹಾಘಟಬಂದ್ ಮಾಡಿಕೊಂಡಿರುವರು ವಿಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್(Congress)ನಾಯಕ ರಾಹುಲ್ ಗಾಂಧಿ(Rahul gandhi) ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್(Karnataka congress)ಘೋಷಣೆ ಮಾಡಿದೆ.

 

ಹೌದು, ಪ್ರಧಾನಿ ಮೋದಿಯವರನ್ನು ಮಣಿಸಲು ರಾಷ್ಟ್ರದ ವಿಪಕ್ಷಗೆಳೆಲ್ಲವೂ ಒಟ್ಟಾಗಿದ್ದು, ಈ ವಿಪಕ್ಷಗಳ 2ನೇ ಹಂತದ ಸಭೆಯನ್ನು ಇಂದು ಬೆಂಗಳೂರಿನಲ್ಲಿ(Benglore) ಆಯೋಜಿಸಲಾಗಿದೆ. ಸಭೆಗೆ ಸುಮಾರು 24 ಪಕ್ಷಗಳ ಘಟಾನುಘಟಿ ನಾಯಕರು ಆಗಮಿಸಿದ್ದಾರೆ. ಆದರೀಗ ಈ ಸಭೆಗೂ ಮುನ್ನವೇ ಕಾಂಗ್ರೆಸ್ ಹೊಸ ಉರುಳಿಸಿದ್ದು, ರಾಹುಲ್ ಗಾಂಧಿಯೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ. ಇದರಿಂದ ಮಹಾಮೈತ್ರಿಯಲ್ಲಿ ಸಭೆಗೂ ಮುನ್ನವೇ ಆಕ್ರೋಶ ಭುಗಿಲೆದ್ದಿದೆ.

 

‘ರಾಹುಲ್ ಗಾಂಧಿ(Rahul gandhi) ಮಾರ್ಗದರ್ಶನದಲ್ಲಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇದೇ ರೀತಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಅದ್ವಿತೀಯ ಗೆಲುವು ವಿಪಕ್ಷಗಳ ಪಾಲಾಗಲಿದೆ. ಹೀಗಾಗಿ ರಾಹುಲ್ ಗಾಂಧಿ ಪ್ರಧಾನಿ ಮಂತ್ರಿಯಾಗಲಿದ್ದಾರೆ’ ಎಂದು ಕಾಂಗ್ರೆಸ್ ನಾಯಕ, ಸಚಿವರಾದ ಈಶ್ವರ್ ಖಂಡ್ರೆ(Eshwar khandre) ಹೇಳಿದ್ದಾರೆ. ಹೀಗಾಗಿ ಈ ಹೇಳಿಕೆ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಬಿರುಕು ಮೂಡಿಸುವ ಮುನ್ಸೂಚನೆ ಇದ್ದು, ಖಂಡ್ರೆಯವರ ಈ ಸ್ಫೋಟಕ ಹೇಳಿಕೆ ಮೈತ್ರಿ ಸಭೆಯ ಮಿತ್ರ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 

ವಿಪಕ್ಷಗಳ ಮೊದಲ ಸಭೆಯು ಬಿಹಾರ(Bihar) ಮುಖ್ಯಮಂತ್ರಿ ನಿತೀಶ್ ಕುಮಾರ್(Nitish kumar) ಅವರ ನೇತೃತ್ವದಲ್ಲಿ ಪಾಟ್ನಾದಲ್ಲಿ ನಡೆದಿತ್ತು. ಮುಂದಿನ ಸಭೆಯು ಹಿಮಾಚಲ ಪ್ರದೇಶದಲ್ಲಿ ನಡೆಯಬೇಕಾಗಿತ್ತು. ಆದರೆ ಅದು ಬೆಂಗಳೂರಿಗೆ ವರ್ಗಾವಣೆ ಆಯಿತು. ಮೈತ್ರಿ ಮಾತುಕತೆ ಆರಂಭಗೊಂಡ ದಿನದಿಂದ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆ ಹಲವು ಬಾರಿ ಮುನ್ನಲೆಗೆ ಬಂದಿದೆ. ಆದರೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಎಲ್ಲಾ ಪಕ್ಷಗಳು ಹೇಳಿವೆ. ಇಷ್ಟಾದರೂ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಕೆಲ ನಾಯಕರು ವಿಪಕ್ಷಗಳ ನೇತೃತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅನ್ನೋ ಹೇಳಿಕೆಯಿಂದ ಇದೀಗ ಕೆಲ ನಾಯಕರಿಗೆ ಹಿನ್ನಡೆಯಾಗಿದೆ.

 

ಇನ್ನು 20ಕ್ಕೂ ಹೆಚ್ಚು ಪಕ್ಷಗಳ ಘಟನಾನುಘಟಿ ನಾಯಕರು ಭಾಗವಹಿಸುವ ಸಭೆ ನಡೆಯಲಿರುವ ನಗರದ ರೇಸ್‌ಕೋರ್ಸ್‌ ರಸ್ತೆಯ ತಾಜ್‌ ವೆಸ್ಟೆಂಡ್‌ ತಾರಾ(Taj wrstend tara hotel)ಹೋಟೆಲ್‌ನಲ್ಲಿ ಭಾರೀ ತಯಾರಿ ನಡೆಸಲಾಗಿದೆ. ಸಭೆಗೆ ಆಗಮಿಸುವ ನಾಯಕರಿಗೆ ಭರ್ಜರಿ ಸ್ವಾಗತಕ್ಕಾಗಿ ರೇಸ್‌ ಕೊರ್ಸ್‌ ರಸ್ತೆ, ಕುಮಾರಕೃಪಾ ರಸ್ತೆಯಲ್ಲಿ ಬೃಹತ್‌ ಫ್ಲೆಕ್ಸ್‌ ಬ್ಯಾನರ್‌ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇನ್ಮುಂದೆ ಏಕಕಾಲದಲ್ಲಿ ಪಡಿಬೋದು ಎರಡೆರಡು ಡಿಗ್ರಿ

Leave A Reply

Your email address will not be published.