ಹೊಸ ಕಾರು ಖರೀದಿಸುವವರಿಗೆ ಬಿಗ್ ಶಾಕ್ ! ಈ ಕಾರುಗಳ ಬೆಲೆಯಲ್ಲಿ ಹೆಚ್ಚಳ, ತಕ್ಷಣದಿಂದ ಜಾರಿ !
Car :ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಇದು ಬ್ಯಾಡ್ ನ್ಯೂಸ್. ಯಾಕೆಂದರೆ ಇದೀಗ ಈ ಕಾರುಗಳ ಬೆಲೆ ಹೆಚ್ಚಾಗಿದೆ. ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ ನ (Tata Motors) ಇತ್ತೀಚಿನ ಕಾರುಗಳ ಬೆಲೆ ಹೆಚ್ಚಾಗಿದೆ. ಇದು ಕಾರು(Car) ಖರೀದಿಸುವ ಆಲೋಚನೆಯಲ್ಲಿರುವವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಜುಲೈ 17 ರಿಂದ ಬೆಲೆ ಏರಿಕೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಿಸಿದೆ. ಅಂದರೆ ಇಂದಿನಿಂದಲೇ ಈ ಹೆಚ್ಚಳ ಜಾರಿಗೆ ಬಂದಿದೆ. ಎಲೆಕ್ಟ್ರಿಕ್ (Tata motors EV) ವಾಹನಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ. ವಾಹನಗಳ ಬೆಲೆಯಲ್ಲಿ ಸರಾಸರಿ ಶೇಕಡಾ 0.6 ರಷ್ಟು ಏರಿಕೆಯಾಗಲಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ವಾಹನಗಳ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ಕಂಪನಿ ಬಹಿರಂಗಪಡಿಸಿದೆ.
ಈ ಬೆಲೆ ಏರಿಕೆಯು ಜುಲೈ 16 ರವರೆಗೆ ಬುಕ್ ಮಾಡಿದ ಕಾರುಗಳಿಗೆ ಬೆಲೆ ಏರಿಕೆ ಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿದೆ. ನಿನ್ನೆ ತನಕ ಬುಕ್ ಮಾಡಿದ ವಾಹನಗಳಿಗೆ ಮತ್ತು ಜುಲೈ 31 ರವರೆಗೆ ವಿತರಿಸಲಾದ ಕಾರುಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅದು ಹೇಳಿದೆ. ಅಂದರೆ ಇದೀಗ ಬುಕ್ಕು ಮಾಡಿದ್ದರೂ, ಜುಲೈ 31ರ ತನಕ ಕಾರು ಡೆಲಿವರಿ ಸಿಗದೇ ಹೋದರೆ ಅಂತವರು ಕೂಡ ಈ ಎಕ್ಸ್ಟ್ರಾ ಬೆಲೆ ತೆರಬೇಕಾಗುತ್ತದೆ.
ಟಾಟಾ ಮೋಟರ್ಸ್ ಈಗ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಪಂಚ್, ಅಲ್ಟ್ರೋಜ್, ಹ್ಯಾರಿಯರ್, ಸಫಾರಿ, ಟಿಯಾಗೊ, ಟಿಗೋರ್ ಮುಂತಾದ ವಿವಿಧ ರೀತಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ ಮಾರಾಟದ ಬಗ್ಗೆ ಪ್ರಮುಖ ಪ್ರಕಟಣೆಯನ್ನು ಮಾಡಿದ್ದು, ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು 2,26,245 ಯುನಿಟ್‌ಗಳ ಮಾರಾಟ ದಾಖಲಾಗಿದೆ ಎಂದು ಟಾಟಾ ಮೋಟಾರ್ಸ್ ಬಹಿರಂಗಪಡಿಸಿದೆ.
ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಜೂನ್‌ನಲ್ಲಿ ವರ್ಷದಿಂದ ವರ್ಷಕ್ಕೆ 5 % ದಷ್ಟು ಹೆಚ್ಚಾಗಿದೆ. 45,197 ಯೂನಿಟ್‌ಗಳಿಂದ 47,235 ಯೂನಿಟ್‌ಗಳಿಗೆ ಅದು ಏರಿದೆ. ಎಲೆಕ್ಟ್ರಿಕ್ ವಾಹನಗಳ ವಿಭಾಗವೂ ಕೂಡಾ ಬೆಳವಣಿಗೆ ಕಂಡಿದೆ. ಒಟ್ಟು ಶೇಕಡಾ 105 ರಷ್ಟು ಹೆಚ್ಚಳ ದಾಖಲಾಗಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 19,346 ಯುನಿಟ್‌ಗಳು ಮಾರಾಟ ಆಗಿದ್ದವು. ಇನ್ನೊಂದು ಕಡೆ ಕಂಪನಿಯು ತನ್ನ ಸಿಎನ್‌ಜಿ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಉದ್ದೇಶಿಸಿದೆ. ಅಲ್ಲದೆ ಟಾಟಾ ಮೋಟಾರ್ಸ್ ಹ್ಯಾರಿಯರ್ ಇವಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಕಂಪನಿಯು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆಯುತ್ತಿದೆ. ಹೊಸ ಮಾದರಿಗಳನ್ನು ತಂದರೆ. ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ :ಸಭೆಗೂ ಮುನ್ನ ವಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಪ್ರಕಟ !! ಊಹಿಸಲಾಗದ ಹೆಸರಿನ ಘೋಷಣೆಯಿಂದ ಮೈತ್ರಿಯಲ್ಲಿ ಆಕ್ರೋಶ ಸ್ಪೋಟ !!