Sowjanya murder case: ಸೌಜನ್ಯಗೌಡ ಪ್ರಕರಣ ಮರು ತನಿಖೆಗೆ ಆದೇಶ ಬರ್ಬೋದು ಎಂಬ ಕಾರಣಕ್ಕೇ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಆಹ್ವಾನ ?!

Latest Karnataka news Is CM Siddaramaiah invited to Dharamsthala because of the order to re-investigate Sowjanya murder case

Share the Article

ಸೌಜನ್ಯ ಕೊಲೆ ಪ್ರಕರಣ: ಕಳೆದ ಹಲವು ದಿನಗಳ ಹಿಂದಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೊಗಳಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಗೂ ಈ ಬಜೆಟ್‌ನಲ್ಲಿ ಅಭಿನಂದಿಸಿ, ಬಿಡುವಿನ ವೇಳೆ ಬರುವಂತೆ ಕ್ಷೇತ್ರಕ್ಕೆ ಆಹ್ವಾನ ನೀಡಿದ ಪತ್ರವೊಂದು ಸುದ್ದಿ ಪ್ರಸಾರದ ಬಗ್ಗೆ ಈಗ ವ್ಯಾಪಕ ಟೀಕೆಗಳು ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಬೆನ್ನಲ್ಲೇ ಸೌಜನ್ಯ ನ್ಯಾಯದ( ಸೌಜನ್ಯ ಕೊಲೆ ಪ್ರಕರಣ) ಪರ ಹೋರಾಟಗಾರರ ಮುಖ್ಯಮಂತ್ರಿಗಳಲ್ಲಿ ನ್ಯಾಯದ ಮೊರೆ ಹೋಗುವ ಸೂಚನೆ ಸಿಕ್ಕಿದೆ.

ಒಡನಾಡಿ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮೊನ್ನೆ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡ, ಸೌಜನ್ಯ ನ್ಯಾಯದ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು, ಮಾನ್ಯ ಮುಖ್ಯಮಂತ್ರಿ ಸೌಜನ್ಯಾ ಗೌಡ ಅತ್ಯಾಚಾರ ಕೊಲೆ ಪ್ರಕರಣವನ್ನು ಮರು ತನಿಖೆಗೆ ವಹಿಸಬೇಕು ಹಾಗೂ ಆಕೆಗೆ ನ್ಯಾಯ ಒದಗಿಸಬೇಕು.

ಸೌಜನ್ಯ ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತು. ನ್ಯಾಯಕ್ಕಾಗಿ ಅದೆಷ್ಟೇ ಹೋರಾಟ ನಡೆಸಿದ್ದರೂ ನ್ಯಾಯದ ಕದ ತಟ್ಟುವಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಧೋರಣೆ ನಡೆಸಿತ್ತು. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರವು ತಾಲೂಕಿನ ಶಾಸಕ ವಸಂತ ಬಂಗೇರ ಅವರ ಸತತ ಪ್ರಯತ್ನದಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು.

ಅಲ್ಲದೇ, ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ” ಏನ್ ಬಂಗೇರರೇ, ನೀವೊಬ್ಬರೇ ಯಾಕೆ ಧ್ವನಿ ಎತ್ತುತ್ತಿದ್ದೀರಿ, ಬೇರೆ ಯಾವ ನಾಯಕರೂ ಅಲ್ಲಿಲ್ಲವೇ ? ” ಎಂದು ಪ್ರಶ್ನೆ ಹಾಕಿದ್ದರು. ತಮ್ಮ ಊರಿನ ಕರಾವಳಿಯ ಪರಿಸ್ಥಿತಿಗೆ ವಸಂತ ಬಂಗೇರರು ನೊಂದುಕೊಂಡಿದ್ದರು.

ಆ ಪ್ರಶ್ನೆ ಅವರಿಗೆ ಇತ್ತು ಬಾಡಿಗೆ ನಾಯಕರಿಗೆ, ಹೋರಾಟಗಾರರ ಮುಖಕ್ಕೆ ಹೊಡೆದಂತೆ ಇತ್ತು ಮತ್ತು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಸದ್ಯ ಇದ್ದ ಆರೋಪಿಯೂ ದೋಷಮುಕ್ತಗೊಂಡಿದ್ದು, ಮತ್ತೊಮ್ಮೆ ರಾಜ್ಯವ್ಯಾಪಿ ಬಿರುಸಿನ ಹೋರಾಟದ ಸೂಚನೆ. ಮೈಸೂರಿನ ಹಲವು ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ದನಿ ಎತ್ತರಿಸಿ ಮಾತಾಡಿದ್ದಾರೆ. ಸಾಹಿತಿ ಹೋರಾಟದ ಹೇಳಿಕೆಗಳ ಬ್ಯಾನರ್ ಗಳು ಅಲ್ಲಲ್ಲಿ ಕಂಡುಬರುತ್ತಿವೆ.

ಇದೇ ಕಾರಣಕ್ಕಾಗಿ, ಸೌಜನ್ಯ ಗೌಡ ಪ್ರಕರಣದಲ್ಲಿ ಮರು ತನಿಖೆ ನಡೆಯುತ್ತಿದೆ, ಯಾವುದಕ್ಕೂ ಯಾರಿಗೂ ಕೇರ್ ಮಾಡದ ನಾಸ್ತಿಕ ಮನಸ್ಸಿನ, ಸಮಾಜ ನಾಯಕ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರಕರಣವನ್ನು ತನಿಖೆಗೆ ಒಳಪಡಿಸುತ್ತಾರೆ, ಅವರು ಮತ್ತೆ ಭಯಪಡುವ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತಾರೆ, ಅವರ ಕಾರ್ಯವನ್ನು ಮೆಚ್ಚುವ ಮಾತುಗಳನ್ನು ಹೆಗ್ಗಡೆಯವರು ಆಡುತ್ತಿದ್ದಾರೆ ಎಂದು ತೋರಿಸಲಾಗುತ್ತಿದೆ. ಹೀಗಾಗಿ ಇದ್ಯಾವುದಕ್ಕೂ ಮುಖ್ಯಮಂತ್ರಿಗಳು ಕಿವಿಕೊಡಬಾರದು ಎಂದು ಹೋರಾಟಗಾರರ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ: ಉಚಿತ ಬಸ್‌ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ವ್ಯಕ್ತಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ !

 

ಇಡೀ ಪ್ರಕರಣದಲ್ಲಿ ಕಂಡುಬರುವ ಎಲ್ಲಾ ಸಾಕ್ಷ್ಯಗಳು ನಾಶವಾಗಿದ್ದು, ಇಂಥವರೇ ಆರೋಪಿಯಾಗಿದ್ದಾರೆ ಎಂಬ ವಿಚಾರ ಇಡೀ ಸಮಾಜಕ್ಕೆ ಇದೆ. ಆದರೂ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಇಲ್ಲಿರುವ ಹಿಂದೂ ಸಂಘಟನೆಗಳು, ಸೋ ಕಾಲ್ಡ್ ನಾಯಕರು ಎಲ್ಲರೂ ಬಾಡಿಗೆ ಹೋರಾಟಗಾರರು ಎಂದು ತಿಮರೋಡಿ ಕಿಡಿಕಾರಿದರು.

ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಹತ್ಯೆ: ಧರ್ಮಸ್ಥಳ ಸೌಜನ್ಯ ಕೊಲೆ ಆರೋಪಿ ಬಿಡುಗಡೆ, ಈ ಕೇಸಿನಲ್ಲಿ ದೈವ, ದೇವರೇ ಅಪರಾಧಿ !?

 

ಪತ್ರಿಕಾಗೋಷ್ಠಿಯಲ್ಲಿ ಒಡನಾಡಿ ಸಂಸ್ಥೆಯ ಪ್ರಮುಖರು ಹಾಜರಿದ್ದು, ಆಕೆಗೆ ನ್ಯಾಯ ಕೊಡಿಸುವ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು, ಅದಾದ ಬಳಿಕ ಅಲ್ಲಿಂದ ಕ್ಷೇತ್ರಕ್ಕೆ ಪಾದಯಾತ್ರೆ ಹಾಗೂ ಮತ್ತೊಮ್ಮೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ: ಈ ರಾಶಿಯವರು ದೂರ ಪ್ರಯಾಣ ಮುಂದುವರಿಸುವುದು ಉತ್ತಮ!

Leave A Reply