Interesting Facts: ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಬಿಳಿ ಬಣ್ಣ ಯಾಕೆ ಹಚ್ಚೋದು ಗೊತ್ತಾ? ಇಂಟ್ರೆಸ್ಟಿಂಗ್ ಕಾರಣ ಇಲ್ಲಿದೆ

Interesting tree fact why does tree painted by white colour what is reason behind it

Interesting tree Facts: ಸಾಮಾನ್ಯವಾಗಿ ನೀವು ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆಯ ಪಕ್ಕದಲ್ಲಿ ಮರಗಳನ್ನು ನೋಡಿರುತ್ತೀರಾ!!. ಹಾಗೇ ಅವುಗಳಿಗೆ ಬಿಳಿ ಬಣ್ಣವನ್ನು ಹಚ್ಚಿರುತ್ತಾರೆ, ನೀವು ಗಮನಿಸಿರಬಹುದು. ಕೆಲವರಿಗೆ ಮರಗಳಿಗೆ ಈ ಬಿಳಿ ಬಣ್ಣ (White Colour) ಯಾಕೆ ಹಚ್ಚುತ್ತಾರೆ? ಅಂತ ಪ್ರಶ್ನೆ ಮೂಡಿರಬಹುದು. ಆದರೆ ಉತ್ತರ ಸಿಕ್ಕಿರಲ್ಲ. ಇದರ ಉತ್ತರ ಇಲ್ಲಿದೆ. ಈ ಬಗ್ಗೆ ಇಂಟೆರೆಸ್ಟಿಂಗ್ ಮಾಹಿತಿ (Interesting tree Facts) ಇಲ್ಲಿದೆ.

ಮರಗಳಿಗೆ (Tree) ಬಣ್ಣ ಯಾಕೆ ಹಾಕುತ್ತಾರೆ ಅಂದ್ರೆ, ಸಂಚಾರವನ್ನು ಎಚ್ಚರಿಸುವ ಸಲುವಾಗಿ. ಬಿಳಿ ಬಣ್ಣ ರಾತ್ರಿಯಲ್ಲಿ ಪ್ರತಿಫಲಿಸುತ್ತದೆ.
ಮಧ್ಯರಾತ್ರಿಯ ವೇಳೆ ಅಥವಾ ಸುತ್ತಲೂ ಭಾರಿ ಕತ್ತಲು ತುಂಬಿದ್ದಾಗ ಸಂಚಾರ ಮಾಡಲು ಕಷ್ಟವಾಗಬಹುದು, ಹಾಗಾಗಿ ರಸ್ತೆಯ (road) ಬದಿಯಲ್ಲಿನ ಮರ ಎಲ್ಲಿ ಇದೆ. ಯಾವ ಸ್ಥಳಗಳಲ್ಲಿ ಮರಗಳಿವೆ ಎಂಬುದು ತಿಳಿಯುವುದಕ್ಕಾಗಿ ಮರಗಳಿಗೆ ಬಳಿ ಬಣ್ಣ ಹಚ್ಚಲಾಗುತ್ತದೆ. ಇವು ದಾರಿ, ದಿಕ್ಕು ತಿಳಿಸಲು ಸಹಕಾರಿಯಾಗಿದೆ.

ಬಿಳಿ ಬಣ್ಣ ಹಚ್ಚುವುದರಿಂದ ಮರಗಳಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬಿಳಿ ಬಣ್ಣ ಸುಣ್ಣದಿಂದ ಕೂಡಿದ್ದಾಗಿದ್ದು, ಇದರಿಂದ ಮರದ ಮೇಲೆ ಕೀಟಗಳು ಮತ್ತು ಗೆದ್ದಲುಗಳ ತೊಂದರೆ ಕಡಿಮೆಯಾಗುತ್ತದೆ. ಇದು ಸಸ್ಯಗಳ ಮೇಲಿನ ಕೀಟಗಳನ್ನು ನಾಶಪಡಿಸುತ್ತದೆ. ಹಾಗಾಗಿ ಸಸ್ಯದ ಬೇರು ದುರ್ಬಲವಾಗುವುದಿಲ್ಲ.

ಸಾಮಾನ್ಯವಾಗಿ ತಾಪಮಾನದ ಏರಿಳಿತದಿಂದ ಮರ ಒಣಗಿ ಬಿರುಕು ಬಿಡುತ್ತದೆ. ಇದರಿಂದ ಮರದ ತೊಗಟೆ ಕಾಂಡದಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಆದರೆ ಮರಗಳಿಗೆ ಈ ಬಿಳಿ ಬಣ್ಣವನ್ನು ಹಚ್ಚುವುದರಿಂದ ಸೂರ್ಯನ ಕಿರಣಗಳು ಅವುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಸೂರ್ಯನ ಕಿರಣಗಳು ಸ್ಪರ್ಶಿಸಲು ಆಗೋದಿಲ್ಲ. ಇದರಿಂದ ಸಸ್ಯವು ಆರೋಗ್ಯಕರವಾಗಿರುತ್ತದೆ. ಈ ಎಲ್ಲಾ ಕಾರಣದಿಂದಾಗಿಯೇ ಮರಗಳಿಗೆ ಬಿಳಿ ಬಣ್ಣವನ್ನು ಹಚ್ಚಲಾಗುತ್ತದೆ.

 

ಇದನ್ನೂ ಓದಿ: OK : ಓಕೆ ಎನ್ನುವ ಪದದ ಅರ್ಥ ನಿಮಗೆ ಗೊತ್ತಿದೆಯೇ? ಇಲ್ಲಿದೆ ಇದಕ್ಕೊಂದು ಮಹತ್ವದ ಅರ್ಥ!

 

Leave A Reply

Your email address will not be published.