Urfi Viral Video: ಕುರ್ಕುರೆ ಮತ್ತು ಚಿಪ್ಸ್ ನೀರಿನಲ್ಲಿ ತೊಳೆದು ತಿಂದ ಉರ್ಫಿ ಜಾವೇದ್: ಈ ಕಣ್ಣುಇರೋದೇ ತಪ್ಪಾಗಿದೆ ಎಂದ ನೋಡುಗ !

Urfi Javed:ಊರ್ಫಿ ಜಾವೇದ್ ಬಗ್ಗೆ ನಿಮಗೆ ಪೀಠಿಕೆ ಬೇಕಿಲ್ಲ. ದಿನಕ್ಕೊಂದು ಬಾರಿ ಸುದ್ದಿಯಲ್ಲಿರುತ್ತ, ಚಿತ್ರ ವಿಚಿತ್ರ ವಿಭಿನ್ನ ವಿಶಿಷ್ಟ ಜೊತೆಗೆ ವಿಕ್ಷಿಪ್ತ ವಿಕಲ್ಪ ಉಡುಗೆ ತೊಡುಗೆಗಳನ್ನು ಹಾಕುತ್ತಾ ತೆಗೆಯುತ್ತ ಹರಿಯುತ್ತಾ ಸುದ್ದಿಯಲ್ಲಿರುವ ಮಹಿಳೆಯ ಹೆಸರು ಊರ್ಫಿ ಜಾವೇದ್!(Urfi Javed)

 

ಈ ಬಾರಿ, ಈ ವಿಚಿತ್ರ ವ್ಯಕ್ತಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾಳೆ. ಅಂಗಡಿಯಲ್ಲಿ ಸಿಗುವ ಚಿಪ್ಸ್ ಮತ್ತು ಕುರ್ ಕುರೆ ಅನ್ನು ನೀರಿನಲ್ಲಿ ತೊಳೆದು ತಿಂದು ವಿಶೇಷ ಸಾಧನೆ ಮಾಡಿದ್ದಾಳೆ !! ಆಕೆಯ ಅಭಿಮಾನಿಗಳು ಈ ಕೃತ್ಯ ನೋಡಿ ಪಾವನರಾಗಿದ್ದಾರೆ.!!!

 

ಹೌದು, ಉರ್ಫಿ ಜಾವೇದ್ ಅಡುಗೆ ಮನೆಗೆ ಹೋಗಿ ಅಲ್ಲಿ ಕುರ್ಕುರೆ ಪ್ಯಾಕೆಟ್ ಅನ್ನು ತೆರೆದು, ಅದನ್ನು ನೀರಲ್ಲಿ ವಾಸ್ ಮಾಡಿ ತಿಂದಿದ್ದೇ ಅಲ್ಲದೆ, ತಾನು ಚಿಕ್ಕಂದಿನಿಂದಲೂ ಇದೇ ರೀತಿ ಮಾಡುತ್ತಿದ್ದು ಈ ರೀತಿ ಮಾಡುವುದರಿಂದ ಅನಗತ್ಯ ಮಸಾಲ ಪದಾರ್ಥಗಳು ಹೊಟ್ಟೆ ಸೇರದಂತೆ ನೋಡಿಕೊಳ್ಳಬಹುದು ಎಂದು ಆರೋಗ್ಯದ ಟಿಪ್ಸ್ ನೀಡಿದ್ದಾಳೆ ಉರ್ಫಿ. ನೋಡುವ ತಾಳ್ಮೆ ನಿಮಗಿದ್ದರೆ ಇಲ್ಲಿದೆ ಆ ವಿಡಿಯೋ.

I am not a Urfi hater but this is too much
by u/just-some–gal in InstaCelebsGossip

ಈಕೆಯ ಈ ಟಿಪ್ಸ್ ಕೇಳಿದ ಜನರು, ಇದೆಲ್ಲಾ ಪ್ರಚಾರದ ಸರಕು ಕೇವಲ ಪ್ರಚಾರಕ್ಕೋಸ್ಕರ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದಿದ್ದಾರೆ. ಮತ್ತೊಬ್ಬರು, ‘ದುರದೃಷ್ಟವಶಾತ್ ಈ ಕಣ್ಣು ಇರೋದೆ ತಪ್ಪಾಗಿದೆ ‘ ಎಂದಿದ್ದಾರೆ. ಇನ್ನೂ ಅದೇನೇನೋ ನೋಡಬೇಕು ಈ ಕಣ್ಣುಗಳಲ್ಲಿ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ :ಇಂತವರಿಗೆ ಯಾವುದೇ ಗ್ಯಾರಂಟಿ ಸ್ಕೀಮ್ ಇಲ್ಲ !!ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟ ರಾಜ್ಯ ಸರ್ಕಾರ !!

Leave A Reply

Your email address will not be published.