Good news for farmers: ರೈತರೇ ಈ 3 ದಾಖಲೆ ಇದ್ರೆ ಸಾಕು, ನಿಮಗೆ ಸಿಗುತ್ತೆ 50 ಸಾವಿರ !! ಹೊಸ ಘೋಷಣೆ ಮಾಡಿದ ಕೇಂದ್ರ ಸರ್ಕಾರ !!

Modi Government :ದೇಶದ ಬೆನ್ನೆಲುಬಾದ ರೈತರ ಏಳಿಗೆಗಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಲವಾರು ಯೋಜನೆಗಳನ್ನು ತರುತ್ತಿವೆ. ಹತ್ತಾರು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಅಂತೆಯೇ ಇದೀಗ ಮೋದಿ ಸರ್ಕಾರವು(Modi Government) ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

 

ಹೌದು, ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸುವ ಕೇಂದ್ರ ಸರ್ಕಾರವೀಗ(Central Government)ದೇಶದ ಪ್ರತಿ ರೈತರಿಗೂ 50 ಸಾವಿರ ರೂಪಾಯಿಯ ಲಾಭ ಗಳಿಸುವಂತಹ ಯೋಜನೆಯನ್ನು ಪ್ರಾರಂಭಿಸಿದೆ. ಹಾಗಿದ್ದರೆ ಇದು ಯಾವ ರೂಪದಲ್ಲಿ ರೈತರ ಖಾತೆ ಸೇರಲಿದೆ ಗೊತ್ತಾ?

 

ಬೆಂಬಲ ಬೆಲೆ ಯೋಜನೆ:

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕಳೆದ 9 ವರ್ಷಗಳಿಂದ 15 ಲಕ್ಷ ಕೋಟಿ ರೂ. ವೆಚ್ಚ ಮಾಡಿ ರೈತರು(Formers) ಬೆಳೆದ ಉತ್ಪನ್ನ ಖರೀದಿಸಲಾಗಿದೆ. ರಸಗೊಬ್ಬರ(Fertilizers) ಸಹಾಯಧನಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ ಮತ್ತು PM ಕಿಸಾನ್‌ ಸಮ್ಮಾನ್‌(Kisan samman) ನಿಧಿ ಯೋಜನೆಯಡಿ ಪ್ರತಿ ರೈತರ ಖಾತಗೆ ವಾರ್ಷಿಕ 6 ಸಾವಿರವನ್ನು 3 ಸಮಾನ ಕಂತುಗಳಲ್ಲಿ ನೇರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಪ್ರತಿ ವರ್ಷ 2.5 ಲಕ್ಷ ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ರೈತರ ಖಾತೆಗೆ ಪ್ರತಿ ವರ್ಷ 50 ಸಾವಿರ ರೂ. ಹಣ ಸಂದಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

 

ಅಲ್ಲದೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಂದ ಪ್ರತಿ ವರ್ಷ ದೇಶದ ಎಲ್ಲಾ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ರೈತರ ಕಲ್ಯಾಣವೇ ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ. ಅಂತಾರಾಷ್ಟ್ರೀಯ (International) ಸಹಕಾರ ದಿನದ ಕಾರ್ಯಕ್ರಮದಲ್ಲಿ ಕ್ಷೀರ, ಸಕ್ಕರೆ ಉತ್ಪಾದನೆಗೆ ಸಹಕಾರ ಸಂಘಗಳ ಪಾತ್ರ ದೊಡ್ಡದು, ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ದಿಗೆ ಮತ್ತು ರೈತರ ಆರ್ಥಿಕ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ 6.5 ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ ಎಂದು ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ.

 

ಪಿಎಂ ಕಿಸಾನ್ ಯೋಜನೆ:

ಈ ಯೋಜನೆಗೆ ನೋಂದಾವಣಿ ಹೇಗೆ?

ಈ ಯೋಜನೆಯ ಲಾಭ ಪಡೆಯಲಿಚ್ಛಿಸುವ ಕುಟುಂಬವು, ತಮ್ಮ ತಾಲೂಕು ವ್ಯಾಪ್ತಿಯ ಕಂದಾಯ ಅಧಿಕಾರಿಗಳನ್ನು ಅಥವಾ ಪಿಎಂ ಕಿಸಾನ್ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಪಿಎಂ ಕಿಸಾನ್ ನೋಡಲ್ ಅಧಿಕಾರಿಗಳನ್ನು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿಯೋಜಿಸಿರುತ್ತವೆ. ಆ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ದಾಖಲೆಗಳನ್ನು ನೀಡಿ ಈ ಯೋಜನೆಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಹೆಸರುಗಳನ್ನು ನೋಂದಾಯಿಸಬೇಕು.

 

ಪಿಎಂ- ಕಿಸಾನ್ ಸಮ್ಮಾನ್ ನ ಅಧಿಕೃತ ವೆಬ್ ಸೈಟ್ ನಲ್ಲಿಯೂ ಈ ಯೋಜನೆಗೆ ನೋಂದಾವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ pmkisan.gov.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ NEW FARMER REGISTRATION ಎಂಬ ಐಕಾನ್ ಕ್ಲಿಕ್ ಮಾಡಿ, ಆಗ ತೆರೆಯಲ್ಪಡುವ NEW FARMER REGISTRATION FORM ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಹೆಸರನ್ನು ನೋಂದಾಯಿಸಬಹುದು.

 

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ:

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ಸಕಾಲಕ್ಕೆ ಸಾಲ ಪಡೆಯುತ್ತಾರೆ. ರೈತರಿಗೆ ಅಲ್ಪಾವಧಿಯ ಸಾಲವನ್ನು ಸಕಾಲಕ್ಕೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಇದನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಆರಂಭಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಈಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN) ಯೊಂದಿಗೆ ಲಿಂಕ್ ಮಾಡಲಾಗಿದೆ. ರೈತರು 4 ಶೇಕಡಾ ಬಡ್ಡಿಯಲ್ಲಿ KCC ಯಿಂದ 3 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಪಿಎಂ ಕಿಸಾನ್ ನ ಫಲಾನುಭವಿಯು ಕೆಸಿಸಿಗೆ ಅರ್ಜಿ ಸಲ್ಲಿಸುವುದು ಸುಲಭವಾಗಿದೆ.

 

ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ :

ಮಳೆ, ಚಂಡಮಾರುತ, ಚಂಡಮಾರುತ, ಆಲಿಕಲ್ಲು, ಭೂಕಂಪದಂತಹ ನೈಸರ್ಗಿಕ ವಿಕೋಪಗಳಲ್ಲಿ ಬೆಳೆಗಳಿಗೆ ಉಂಟಾದ ಹಾನಿಯಿಂದ ರೈತರಿಗೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಲಾಯಿತು. PMFBY ಅಡಿಯಲ್ಲಿನ ವಿಮಾ ಮೊತ್ತವನ್ನು ರೂ. 40,700 ಕ್ಕೆ ಏರಿಸಲಾಗಿದೆ. PMFBY ಪೂರ್ವ ಯೋಜನೆಗಳ ಸಮಯದಲ್ಲಿ ಪ್ರತಿ ಹೆಕ್ಟೇರ್‌ಗೆ 15,100 ರೂ ಪರಿಹಾರ ನಿಗದಿಯಾಗಿತ್ತು. ಈ ಯೋಜನೆಯು ಬಿತ್ತನೆ ಪೂರ್ವದಿಂದ ಕಟಾವಿನ ನಂತರದ ಸಂಪೂರ್ಣ ಬೆಳೆ ಚಕ್ರವನ್ನು ಒಳಗೊಂಡಿದೆ.

 

ಪ್ರಧಾನ ಮಂತ್ರಿ ಜನ್ ದನ್ ಯೋಜನೆ:

ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಬಡವರ ಖಾತೆಯನ್ನು ಶೂನ್ಯ ಬ್ಯಾಲೆನ್ಸ್‌ನಲ್ಲಿ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೆರೆಯಲಾಗುತ್ತದೆ. ಇದು ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಹಣಕಾಸು ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ, ಬಡ ವ್ಯಕ್ತಿಯು ಸುಲಭವಾಗಿ ತನ್ನ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ ತೆರೆಯಲಾದ ಖಾತೆಯಲ್ಲಿ ಖಾತೆದಾರರು ಒಟ್ಟು 1.30 ಲಕ್ಷ ಲಾಭ ಪಡೆಯುತ್ತಾರೆ. ಇದಲ್ಲದೇ ಅಪಘಾತ ವಿಮೆ ಕೂಡ ಇದರಲ್ಲಿ ಲಭ್ಯವಿದೆ. ಖಾತೆದಾರ ರೂ 1,00,000 ಅಪಘಾತ ವಿಮೆ ಜೊತೆಗೆ ರೂ .30,000 ಸಾಮಾನ್ಯ ವಿಮೆ ಪಡೆಯುತ್ತಾನೆ.

ಇದನ್ನೂ ಓದಿ :ಚಾರಿಟಿಗೆ ದೇಣಿಗೆ ಕೊಟ್ರೆ ಎಲ್ರಿಗೂ ‘ಆ’ ತರದ ಗಿಫ್ಟ್ ಕೊಡ್ತೇನೆ !!

Leave A Reply

Your email address will not be published.