The Kerala Story: ಕೇರಳ ಸ್ಟೋರಿ ಸಕ್ಸಸ್ ತಡೆಯಲು ಯಾರಿಗೂ ಸಾಧ್ಯ ಆಗಲಿಲ್ಲ, ಅದಾ ಶರ್ಮಾ ಕಮಲ್ ಹಾಸನ್ ಗೆ ಟಾಂಟ್

Latest news No one could stop 'The Kerala Story' film success, Adaa Sharma taunt Kamal Haasan

The Kerala Story: ದಿ ಕೇರಳ ಸ್ಟೋರಿ’ (The Kerala Story) ಚಿತ್ರ ಭಾರೀ ವಿರೋಧದ ನಡುವೆಯೂ ಬಾಕ್ಸಾಫೀಸ್ ಭರ್ಜರಿಯಾಗಿ ಖಜಾನೆ ತುಂಬಿಸಿದೆ. ಹೌದು, ಸನ್‌ಲೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಅಮೃತ್‌ಲಾಲ್ ಶಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸಿದ್ದು, ಸುದಿಪ್ರೋ ಸೇನ್ ನಿರ್ದೇಶಿಸಿರುವ ದಿ ಕೇರಳ ಸ್ಟೋರಿ ಸಕತ್ ಹಿಟ್ ಆಗಿದೆ.

ಸದ್ಯ ‘ದಿ ಕೇರಳ ಸ್ಟೋರಿ’ ಚಿತ್ರ ಹಲವು ಭಾಷೆಗಳಲ್ಲಿ ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಮುಖ್ಯವಾಗಿ ಅದಾ ಶರ್ಮಾ ಬಿಟ್ಟರೆ ಚಿತ್ರದಲ್ಲಿ ಸ್ಟಾರ್ ನಟರು ಯಾರು ಇರಲಿಲ್ಲ. ಕಮಲ್ ಹಾಸನ್, ನಸೀರುದ್ದೀನ್ ಶಾ ಸೇರಿದಂತೆ ಹಲವರು ಈ ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

ಈಗಾಗಲೇ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತ್ತು. ತಮಿಳುನಾಡಿನಲ್ಲಿ ಪ್ರದರ್ಶಕರು ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು. ಆದರೆ ಹರ್ಯಾಣ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ತೆರಿಗೆ ವಿನಾಯಿತಿ ಘೋಷಿಸಿದ್ದವು. ನೈಜ ಘಟನೆ ಆಧರಿತ ಸಿನಿಮಾ ಎಂದು ಹೇಳಲಾದ ‘ದಿ ಕೇರಳ ಸ್ಟೋರಿ’ ಬಗ್ಗೆ ಭಾರೀ ಚರ್ಚೆ ಆಗಿತ್ತು. ಸದ್ಯ ಇನ್ನು ಸಿನಿಮಾ ಓಟಿಟಿಗೂ ಬಂದಿಲ್ಲ. ಸಿನಿಮಾ ಓಟಿಟಿ ಪ್ರಸಾರಕ್ಕೆ ಯಾವುದೇ ಡಿಜಿಟಲ್ ಸಂಸ್ಥೆ ಮುಂದೆ ಬರ್ತಿಲ್ಲ ಎನ್ನಲಾಗ್ತಿದೆ.

ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆ ಚಟುವಟಿಗಳಿಗೆ ದೂಡುತ್ತಿದ್ದಾರೆ ಎನ್ನಲಾಗುವ ವಿಚಾರದ ಬಗ್ಗೆ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಸಿನಿಮಾದಿಂದ ಅದಾ ಶರ್ಮ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದೀಗ ಸಿನಿಮಾ ಗೆಲುವಿನ ಬಗ್ಗೆ ನೀಡಿದ ಸಂದರ್ಶನದಲ್ಲಿ ಅದಾ ಶರ್ಮಾ ಮಾತನಾಡಿದ್ದಾರೆ.

ಅದಾ ಶರ್ಮಾ ಮಾತನಾಡಿ “ನಮ್ಮ ಭಾರತ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಸಿನಿಮಾ ನೋಡದೆ ಕೂಡ ಅದರ ಬಗ್ಗೆ ಈ ದೇಶದಲ್ಲಿ ಅಪಪ್ರಚಾರ ಮಾಡಬಹುದು. ಅದೇ ರೀತಿ ಜನರು ಸಿನಿಮಾ ನೋಡದಂತೆ ತಡೆಯಬಹುದು. ಯಾರು ಯಾರ ಕುರಿತು ಏನು ಬೇಕಾದರೂ ಹೇಳಿಕೆ ನೀಡಬಹುದು. ಆ ರೀತಿ ಹೇಳಿಕೆ ನೀಡಿದ ಬಳಿಕ ಕೂಡ ಅವರು ಇಲ್ಲಿ ನಿಶ್ಚಿಂತೆಯಿಂದ ಬದುಕಬಹುದು. ಇದೇ ಭಾರತದ ವಿಶಿಷ್ಟತೆ . ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಇಲ್ಲಿ ಸಹಬಾಳ್ವೆ ಮಾಡಬಹುದು.”

ಆದರೆ ಈ ಹಿಂದೆ ಕಮಲ್ ಹಾಸನ್ ಮಾತನಾಡಿ “ದಿ ಕೇರಳ ಸ್ಟೋರಿ’ ಪ್ರೊಪೊಗಾಂಡ ಸಿನಿಮಾ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಟೈಟಲ್ ಕೆಳಗೆ ಸತ್ಯ ಘಟನೆ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ” ಎಂದು ಹೇಳಿದ್ದರು.

ಬಳಿಕ ಮತ್ತೊಮ್ಮೆ ಒಂದು ವೇಳೆ ನಿಮಗೆ ಇಂತಹ ಸಿನಿಮಾ ಬ್ಯಾನ್ ಮಾಡುವ ಅವಕಾಶ ಕೊಟ್ಟರೆ ಬ್ಯಾನ್ ಮಾಡ್ತೀರಾ? ಎನ್ನುವ ಪ್ರಶ್ನೆಗೆ “ನಾನು ಯಾವುದೇ ಸಿನಿಮಾ ನಿಷೇಧಕ್ಕೆ ಒಪ್ಪಲ್ಲ. ಆದರೆ ಸಿನಿಮಾ ಹಾಗೂ ಆ ಸಿನಿಮಾ ಉದ್ದೇಶ ಏನು ಎನ್ನುವುದನ್ನು ಜನರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸುತ್ತೇನೆ” ಎಂದು ಕಮಲ್ ಹಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ “ಅಂತಹ ಪ್ರಸಿದ್ಧ ನಟರು ನಮ್ಮ ಚಿತ್ರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ನಂತರವೂ, ಪ್ರೇಕ್ಷಕರು ಭಯೋತ್ಪಾದನೆಯ ವಿರುದ್ಧ ನಿಂತಿರುವ ಚಲನಚಿತ್ರವನ್ನು ಬೆಂಬಲಿಸಲು ಚಿತ್ರಮಂದಿರಗಳಿಗೆ ಹೋಗಲು ನಿರ್ಧರಿಸಿದ್ದು ಅದ್ಭುತ” ಎಂದು ಅದಾ ಶರ್ಮಾ ಹೇಳಿದ್ದಾರೆ. ಒಟ್ಟಿನಲ್ಲಿ ಕೇರಳ ಸ್ಟೋರಿ ಸಕ್ಸಸ್ ತಡೆಯಲು ಯಾರಿಗೂ ಸಾಧ್ಯ ಆಗಲಿಲ್ಲ ಎಂದು ಕೇರಳ ಸ್ಟೋರಿ ಸಿನಿಮಾದ ವಿರೋಧಿಗಳಿಗೆ ಪರೋಕ್ಷವಾಗಿ ತಿಳಿಸಿದ್ದಾರೆ.

 

ಇದನ್ನು ಓದಿ: CM Siddaramaiah: ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ !! ಸದ್ಯಕ್ಕೆ ಈ ಯೋಜನೆ ಜಾರಿ ಇಲ್ಲ ಎಂದ ಸರ್ಕಾರ 

Leave A Reply

Your email address will not be published.