Adhar – pan Link: ಇಂತವರಿಗೆ ಯಾವುದೇ ಗ್ಯಾರಂಟಿ ಸ್ಕೀಮ್ ಇಲ್ಲ !! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟ ರಾಜ್ಯ ಸರ್ಕಾರ !!
Latest news no guarantee scheme for those who do not have Aadhar-pan Link
ಪಾನ್ ಕಾರ್ಡ್(Pan card) ಮತ್ತು ಆಧಾರ್ ಕಾರ್ಡ್ ಲಿಂಕ್(Adhar card) ಮಾಡುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಸದ್ಯ ಅದಕ್ಕೆ ಕೊಟ್ಟ ಗಡುವು ಕೂಡ ಮುಕ್ತಾಯವಾಗಿದ್ದು, ಇನ್ನು ಲಿಂಕ್ ಮಾಡಿಸುವುದಾದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ ಇಷ್ಟಾದರೂ ಕೂಡ ಲಿಂಕ್ ಮಾಡದವರಿಗೆ ಇದೀಗ ರಾಜ್ಯ ಸರ್ಕಾರವೀಗ ಬಿಗ್ ಶಾಕ್ ನೀಡಿದೆ.
ಆದಾಯ ತೆರಿಗೆ(Income tax) ನಿಯಮದ ಪ್ರಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳುಗಳಲ್ಲಿ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಜೂನ್(June) 30ಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಿತ್ತು. ಆ ಗಡುವು ಮುಗಿದೆ. ಇನ್ನೇನಿದ್ದರೂ ದಂಡ ಪಾವತಿಸಿ ಲಿಂಕ್ ಮಾಡಬೇಕು. ಆದರೆ ಇದಾಗಿಯೂ ಇನ್ನೂ ಲಿಂಕ್ ಮಾಡಿಸದವರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೌದು, ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1,000 ರೂ ದಂಡ ಕಟ್ಟಬೇಕು ಎಂದು ಐಟಿ ಇಲಾಖೆ ಹೇಳಿದೆ. ದಂಡ ಕಟ್ಟಿಯೂ ಪಾನ್ ಆಧಾರ್ ಲಿಂಕ್ ಮಾಡದೆ ಇದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಅಲ್ಲದೆ ಯಾವುದೇ ಹಣಕಾಸು ವ್ಯವಹಾರಗಳಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದು ತಿಳಿಸಿತ್ತು. ಆದರೀಗ ರಾಜ್ಯ ಸರ್ಕಾರವು ಕೂಡ ಈ ಕುರಿತು ಮಹತ್ವದ ನಿರ್ಧಾರ ಮಾಡಲಿದ್ದು ಪಾನ್ ಹಾಗೂ ಆಧಾರ್ ಲಿಂಕ್ ಮಾಡುವವರಿಗೆ ಮಾತ್ರ ಗ್ಯಾರಂಟಿ ಯೋಜನೆ(Guaranty Scheme)ಸಿಗುವ ಸಂಭವ ಇದೆ ಎನ್ನಲಾಗುತ್ತಿದೆ. ಅಲ್ಲದೆ ಇನ್ನೂ ತಡವಾದರೆ 10,000 ದಂಡ ಪಾವತಿಸಬೇಕಾಬಹದು.
ಹಾಗಿಗಿ ಅಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಗ್ಯಾರಂಟೀ ಯೋಜನೆಗಳ ಲಾಭವನ್ನು ಕೂಡ ಪಡೆಯಲು ಕಷ್ಟಸಾಧ್ಯವಾಗುತ್ತದೆ. ಇದರಿಂದಾಗಿ ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆದ್ದರಿಂದ ಯಾರೆಲ್ಲ ಎನ್ನೂ ಕೂಡ ಲಿಂಕ್ ಮಾಡಿಸಿಲ್ಲ ಅವರೆಲ್ಲರೂ ಈ ಕೂಡಲೇ ಆಧಾರ್ ಪಾನ್ ಲಿಂಕ್ ಮಾಡಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಿ.