Knowledge Story: ದೇಹದ ಈ ಪಾರ್ಟ್ ಎಂದಿಗೂ ಬೆವರೋದಿಲ್ಲ ! ಅದ್ಯಾವುದಪ್ಪಾ ಅಂತ ತಿಳ್ಕೊಲ್ಲೋ ಕುತೂಹಲ ಇದ್ಯಾ, ಇಲ್ಲಿದೆ ನೋಡಿ ಉತ್ತರ !

Latest news Health tips Knowledge Story This part of the body never gets sweaty

Knowledge Story: ಬ್ಯಾಕ್ಟೀರಿಯಾ ಬೆವರಿನೊಂದಿಗೆ ಬೆರೆತಾಗ ಅದು ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ. ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಚರ್ಮದ ಮೇಲೆ ಸತ್ತ ಚರ್ಮದ ಮೇಲೆ ಬೆಳೆಯುತ್ತವೆ. ಅವುಗಳನ್ನು ಪ್ರತಿದಿನ ಸ್ವಚ್ಛಗೊಳಿಸದಿದ್ದರೆ, ಅದು ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ. ಬೆವರಿನ ಕೆಟ್ಟ ವಾಸನೆಯಿಂದ ಹೆಚ್ಚಿನ ಜನರಿಗೆ ಕಿರಿಕಿರಿಯಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಕೇಳುವುದೇ ಬೇಡ, ಬೆವರು ಜಾಸ್ತಿ. ಬೆವರಿನ ವಾಸನೆಯನ್ನು ಹೋಗಲಾಡಿಸಲು ಜನರು ಹಲವಾರು ಕೆಮಿಕಲ್ ವಸ್ತುಗಳ ಮೊರೆ ಹೋಗುತ್ತಾರೆ.

ಬೆವರು (excessive sweating) ಕಂಕುಳಿನ ಹತ್ತಿರ ಬಟ್ಟೆಯಲ್ಲಿ ಕಪ್ಪು ಚುಕ್ಕೆಯ ಹಾಗೇ ಗೋಚರಿಸುತ್ತದೆ. ಹಾಗಾಗಿಯೇ ಸಾಕಷ್ಟು ಇರಿಸುಮುರಿಸು ಉಂಟಾಗುತ್ತದೆ. ಯಾರು ಹತ್ತಿರವೂ ಸುಳಿಯುವಂತಿಲ್ಲ. ಕಂಕುಳಿನಲ್ಲಿ ಮಾತ್ರವಲ್ಲ ದೇಹದ ವಿವಿಧ ಭಾಗಗಳಲ್ಲಿ ಬೆವರುತ್ತದೆ. ಆದರೆ, ದೇಹದ ಈ ಅಂಗ ಎಂದಿಗೂ ಬೆವರೋದಿಲ್ಲ. ಯಾವುದು ಆ ಪಾರ್ಟ್‌ ಗೊತ್ತಾ?! ಇಲ್ಲಿದೆ ನೋಡಿ ಮಾಹಿತಿ (Knowledge Story).

ಹೆಚ್ಚು ಓಡಿದರೆ, ವಾಕಿಂಗ್, ವ್ಯಾಯಾಮ ಮಾಡಿದಾಗ ಬೆವರುವುದು ಸಾಮಾನ್ಯ. ಬೇಸಿಗೆಯಲ್ಲಿ ಬೆವರು ಹೆಚ್ಚೇ ಇರುತ್ತದೆ. ಈ ಸಮಯದಲ್ಲಿ ದೇಹದ ಎಲ್ಲಾ ಭಾಗಗಳು ಬೆವರುತ್ತವೆ. ಕಂಕುಳು, ತೊಡೆ, ಕತ್ತು, ಹೊಟ್ಟೆ, ಕೈ, ಪಾದಗಳು ಎಲ್ಲಾ ಕಡೆಯಿಂದಲೂ ಬೆವರು ಬರುತ್ತದೆ. ಆದರೆ, ಎಷ್ಟೇ ಬೇಸಿಗೆಯಿದ್ದರೂ, ಎಷ್ಟೇ ಬಿಸಿಯಾಗಿದ್ದರೂ ದೇಹದ ಇದೊಂದು ಅಂಗ ಮಾತ್ರ ಎಂದಿಗೂ ಬೆವರೋದಿಲ್ಲ.

ಹೌದು, ನಮ್ಮ ತುಟಿಗಳು ಎಂದಿಗೂ ಬೆವರುವುದಿಲ್ಲ. ನೀವು ಗಮನಿಸಿರಲಿಕ್ಕಿಲ್ಲ. ಆದರೆ, ತುಟಿಗಳಲ್ಲಿ ನೀರು ಉತ್ಪತ್ತಿಯಾಗಲ್ಲ, ಅವು ಬೆವರಲ್ಲ. ತುಟಿಗಳಲ್ಲಿ ಬೆವರು ಗ್ರಂಥಿಗಳಿಲ್ಲ. ಹಾಗಾಗಿಯೇ ತುಟಿಗಳು ಬೆವರುವುದಿಲ್ಲ. ಅವು ಬೇಗನೆ ಒಣಗುತ್ತವೆ.

 

ಇದನ್ನು ಓದಿ: Easyjet Airline: ತೂಕ ಹೆಚ್ಚಾಯ್ತೆಂದು 19 ಪ್ರಯಾಣಿಕರನ್ನು ಇಳಿಸಿ ಹೊರಟೇ ಹೋದ ವಿಮಾನ, ಹೀಗೊಂದು ವಿಲಕ್ಷಣ ಸುದ್ದಿ ! 

Leave A Reply

Your email address will not be published.