Smartphone Application: ಮೊಬೈಲ್ ಬಳಕೆದಾರರೇ ಎಚ್ಚರ !! ನಿಮ್ಮ ಫೋನ್’ನಲ್ಲೂ ಈ 2 ಅಪ್ಲಿಕೇಶನ್ ಇದೆಯಾ ? ಹಾಗಿದ್ರೆ ಕೂಡಲೇ ಹೀಗೆ ಮಾಡಿ

Latest news Smartphone Application Mobile users beware before using new apps on mobile

Smartphone Application: ಒಂದೇ ಡೆವಲಪರ್‌ನಿಂದ ಬಂದಿರುವ ಎರಡು ಅಪ್ಲಿಕೇಶನ್‌ಗಳು (Smartphone Application) ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಯನ್ನು ಒಳಗೊಂಡಿವೆ ಎಂದು ಮೊಬೈಲ್ ಸೈಬರ್ ಸೆಕ್ಯುರಿಟಿ ಕಂಪನಿ ಪ್ರಡಿಯೊ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಲಾಗಿದೆ.

ಈಗಾಗಲೇ ಸೈಬರ್ ಅಪರಾಧಿಗಳು, ಭದ್ರತಾ ಕಾರ್ಯಚರಣೆಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅಪ್ಲೋಡ್ ಮಾಡುವಲ್ಲಿ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅದಲ್ಲದೆ ಇಮೇಲ್‌ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಪಠ್ಯಗಳಿಗೆ ದುರುದ್ದೇಶಪೂರಿತ ಲಿಂಕ್‌ಗಳು ಅಥವಾ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಕಾಣುವ ಅಪ್ಲಿಕೇಶನ್‌ಗಳಲ್ಲಿ ಮಾಲ್‌ವೇರ್ ಅನ್ನು ಸರಳವಾಗಿ ಮರೆಮಾಡುವ ಮೂಲಕ ಸೈಬ‌ರ್ ಅಪರಾಧಿಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ದೊಡ್ಡ ಅಪಾಯವನ್ನುಂಟುಮಾಡುತ್ತಾರೆ.
ಜೊತೆಗೆ ಸೈಬರ್ ಅಪರಾಧಿಗಳು ಮೊಬೈಲ್ ಬಳಕೆದಾರರ ವೈಯಕ್ತಿಕ ಡೇಟಾ ಮತ್ತು ಬ್ಯಾಂಕ್ ವಿವರಗಳನ್ನು ಅಪಾಯಕ್ಕೆ ಒಳಪಡಿಸುತ್ತಾರೆ.

ಇತ್ತೀಚಿನ ಎರಡು ಪ್ರೈವೇಟ್ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಡಗಿಕೊಂಡಿದ್ದು 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಪ್ರೈವೇ‌ ಬಳಕೆದಾರರು ಎಲ್ಲಾ ನಿರ್ಣಾಯಕ ಚೀನಾ ಮೂಲದ ವಿವಿಧ ಸರ್ವರ್ ಗಳಿಗೆ ಕಳುಹಿಸುತ್ತಿದ್ದಾರೆ. ಆ ಎರಡು ಅಪ್ಲಿಕೇಶನ್ ಗಳೆಂದರೆ `ಫೈಲ್ ರಿಕವರಿ ಮತ್ತು ಡೇಟಾ ರಿಕವರಿ’, ಇವು 1 ಮಿಲಿಯನ್‌ಗಿಂತಲೂ ಹೆಚ್ಚು ಇನ್ ಸ್ಟಾಲ್ ಆಗಿವೆ. ಇನ್ನು ಫೈಲ್ ಮ್ಯಾನೇಜರ್ 5 ಲಕ್ಷಕ್ಕೂ ಹೆಚ್ಚು ಇನ್ ಸ್ಟಾಲ್ ಆಗಿದೆ. ಈ ಎರಡೂ ಅಪ್ಲಿಕೇಶನ್‌ಗಳು ಯಾವುದೇ ಸೂಕ್ಷ್ಮವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿಕೊಳ್ಳುತ್ತವೆ.

ವರದಿಯ ಪ್ರಕಾರ ಈ ಎರಡೂ ಅಪ್ಲಿಕೇಶನ್‌ಗಳ ಬಳಕೆದಾರರು ವೈಯಕ್ತಿಕ ಸಾಧನದಿಂದ ಮತ್ತು ಇಮೇಲ್, ಸಾಮಾಜಿಕ ನೆಟ್‌ವರ್ಕ್‌ಗಳು, ರಿಯಲ್ ಟೈಂ ಲೊಕೇಷನ್, ಮೀಡಿಯಾ, ಮೊಬೈಲ್ ಕಂಟ್ರಿ ಕೋಡ್, ನೆಟ್‌ವರ್ಕ್ ಪೂರೈಕೆದಾರರ ಹೆಸರು, ಸಿಮ್ ಪೂರೈಕೆದಾರರ ನೆಟ್‌ವರ್ಕ್ ಕೋಡ್, ಆಪರೇಟಿಂಗ್ ಸಿಸ್ಟಮ್ ಆವೃತ್ತಿ ಸಂಖ್ಯೆ ಮತ್ತು ಸಾಧನದ ಬ್ಯಾಂಡ್ ಮತ್ತು ಮಾದರಿಗಳಿಂದ ಪಡೆಯಲಾಗುತ್ತದೆ ಎಂದು ಮಾಹಿತಿ ದೊರಕಿದೆ.

 

ಇದನ್ನು ಓದಿ: Ration card lost: ರೇಷನ್ ಕಾರ್ಡ್ ದಾರರಿಗೆ ಮಹತ್ವದ ಸುದ್ದಿ- ಕಾರ್ಡ್ ಕಳೆದು ಹೋದ್ರೆ ಕೂಡಲೇ ಹೀಗೆ ಮಾಡಿ !! ಇಲ್ಲಾಂದ್ರೆ ಹೊಸ ಕಾರ್ಡ್ ಸಿಗೋಲ್ಲ ನೋಡಿ !! 

Leave A Reply

Your email address will not be published.