Arecanut Farmers: ಬೆಲೆ ಏರಿಕೆ ಬೆನ್ನಲ್ಲೇ ಅಡಿಕೆ ಬೆಳೆಗಾರರಿಗೆ ಒಲಿದು ಬಂತು ಹೊಸ ಭಾಗ್ಯ !! ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ !!

Arecanut Farmers importatnt news from Karnataka government for nut growers Arecanut

Arecanut Farmers: ಕೆಲ ವಾರಗಳಿಂದ ಅಡಿಕೆ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವುದರಿಂದ ಅಡಿಕೆ ಬೆಳೆಗಾರರ (Arecanut Farmers)ಮೊಗದಲ್ಲಿ ಸಂತಸ ಮೂಡಿದೆ. ಈ ಖುಷಿಯ ನಡುವೆಯೇ ಅಡಿಕೆ ಬೆಳೆಗಾರರಿಗೆ ಬಂಪರ್ ಲಾಟ್ರಿ ಹೊಡೆದಿದ್ದು, ರಾಜ್ಯ ಸರ್ಕಾರವೀಗ ಅವರಿಗೆ ಗುಡ್ ನ್ಯೂಸ್ ಕೊಟ್ಟಿದೆ.

 

ಹೌದು, ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯನ್ನು ಘೋಷಣೆ ಮಾಡಿದೆ. ಅಡಿಕೆ ಮತ್ತು ಕಾಳುಮೆಣಸು ಬೆಳೆಗಳನ್ನು ಸೇರಿಸಲಾಗಿದೆ. ಯೋಜನೆಯಡಿ ರೈತರು ನೋಂದಣಿ ಮಾಡಿಕೊಳ್ಳಲು ಕರೆ ನೀಡಿದ್ದು, ಹವಾಮಾನ ವೈಪರೀತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿನಲ್ಲಿ ಯೋಜನೆಯಡಿ ಪರಿಹಾರ ಸಿಗಲಿದೆ.

ಅಂದಹಾಗೆ ಕಳೆದ ತಿಂಗಳು ರಾಜ್ಯ ವಿಧಾನಸಭಾ ಪರಿಷತ್ ಸದಸ್ಯರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು(Insurance Company) ಹವಮಾನ ಆಧಾರಿತ ಬೆಳೆ ಗಳ ಲಿಸ್ಟಿನಲ್ಲಿ ಕಾಳು ಮೆಣಸು ಹಾಗೂ ಅಡಿಕೆಯನ್ನು(Arecanut) ಕೂಡ ಸೇರಿಸುವುದಕ್ಕೆ ಆಗ್ರಹವನ್ನು ಸಲ್ಲಿಸಿದರು. ಆಗ್ರಹವನ್ನು ಪುರಸ್ಕರಿಸಿರುವಂತಹ ಇಲಾಖೆ ಅಡಿಕೆ ಬೆಳೆಗೆ ಹೆಕ್ಟೇರ್ ಗೆ 1.28 ಲಕ್ಷ ವಿಮೆ ಹಣಕ್ಕೆ 5 ಪ್ರತಿಶತ ಕಂತು ಅಂದರೆ 6400 ರೂಪಾಯಿ ಹಾಗೂ ಕರಿಮೆಣಸು ಪ್ರತಿ ಹೆಕ್ಟರಿಗೆ 47,000 ರೂಪಾಯಿ ವಿಮಾ ಮೊತ್ತ ಮತ್ತು ವಿಮಾ ಕಂತು ಐದು ಪ್ರತಿಶತದ ಲೆಕ್ಕದಲ್ಲಿ 2350 ರೂಪಾಯಿಗಳನ್ನು ಪಾವತಿಸುವ ಮೂಲಕ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ.

ರೈತರು(Farmers) ವಿಮಾ ಕಂತುಗಳನ್ನು ಪಾವತಿ ಮಾಡಿದ ಜುಲೈ 15ರ ತನಕ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್(Bank) ಮತ್ತು ಡಿಜಿಟಲ್(Digital) ಇ-ಸೇವಾ ಕೇಂದ್ರಗಳನ್ನು ರೈತರು ಸಂಪರ್ಕಿಸಬಹುದಾಗಿದೆ. ವಿಮೆಯ ಕಂತುಗಳನ್ನು(Insurance Premium) ರೈತರು ಪಾವತಿಸಿದ ನಂತರ ಜುಲೈ 15 ರವರೆಗೆ ಯೋಜನೆಯಲ್ಲಿ ನೋಂದಾವಣೆ ಮಾಡಲು ಅವಕಾಶವನ್ನು ನೀಡಲಾಗಿದೆ. ಅಡಿಕೆ ಹಾಗೂ ಕಾಡು ಮೆಣಸು ಬೆಳೆಯನ್ನು ಬೆಳೆಯಲು ಲೋನ್(Loan) ಪಡೆದಿರುವ ಗ್ರಾಹಕರು ಕೂಡ ಈ ಯೋಜನೆಯಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಈ ಮೇಲಿನ ಹೇಳಿರುವಂತಹ ಯೋಜನೆ ಜುಲೈ 1 ರಿಂದ ಪ್ರಾರಂಭಿಸಿ 2024ರ ಜೂನ್ 30ರವರೆಗೆ ಕೂಡ ವ್ಯಾಲಿಡ್ ಇರುತ್ತದೆ. ಈ ಸಮಯದ ಒಳಗೆ ಹವಮಾನ ವೈಪರೀತ್ಯದಿಂದಾಗಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ನಷ್ಟವಾದಲ್ಲಿ ನಿಗದಿತ ನಿಯಮದ ಆಧಾರದ ಮೇಲೆ ವಿಮಾ ಅವಧಿ ಮುಗಿದ 45 ದಿನಗಳ ಒಳಗೆ ಇನ್ಸೂರೆನ್ಸ್ ಕಂಪನಿ(Insurance Company) ನಿಮಗೆ ಸಂಪೂರ್ಣ ಪರಿಹಾರ ಹಣವನ್ನು ಒದಗಿಸುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳಗಾರರು ಹವಾಮಾನಗಳ ಕಾರಣದಿಂದಾಗಿ ಬೆಳೆ ಹಾಳಾದರೂ ಕೂಡ ಆರ್ಥಿಕವಾಗಿ ಈ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿದುಬಂದಿದೆ.

ಮುಚ್ಚಳಿಕೆ ಪತ್ರ:
ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಛಿಕವಾಗಿದ್ದು, ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೋಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಮುಚ್ಚಳಿಕೆ ಪತ್ರವನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ಸಲ್ಲಿಸಬೇಕು.

 

ಇದನ್ನು ಓದಿ: Matrimonial Site: ಮ್ಯಾಟ್ರಿಮೋನಿಯಲ್ಲಿ ಪರಿಚಯಳಾದ ಸುರಸುಂದರಿ ; ಹುಡುಗನಿಂದ 92 ಲಕ್ಷ ಎತ್ಕೊಂಡು ಪರಾರಿ ! 

Leave A Reply

Your email address will not be published.