ಕೆ.ಜಿ ಟೊಮೆಟೋಗೆ ಇಲ್ಲಿ ಕೇವಲ 20 ರೂಪಾಯಿ, ಕೆಲವೇ ಗಂಟೆಗಳಲ್ಲಿ ಅಂಗಡಿ ಖಾಲಿ ಖಾಲಿ !

Tomato :ಅಡುಗೆ ಮನೆಗೆ ಪಕ್ಕದ ಮನೆಯವರು ಬಂದರೆ, ಟೊಮೇಟೊ ಅಡಗಿಸಿಡುವಂತಹ ಪರಿಸ್ಥಿತಿ ಇದೀಗ ಒದಗಿ ಬಂದಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವ ಸ್ತ್ರೀಯರಿಂದ ಹಿಡಿದು, ಜಗಲಿಯಲ್ಲಿ ಕೂತು ಪೇಪರ್ ಓದುವ ವೃದ್ಧರ ತನಕ ಒಂದೇ ಮಾತು ಟೊಮೆಟೊ ಬೆಲೆ ಏರಿಕೆ. ಕಳೆದ ಒಂದು ತಿಂಗಳ ಹಿಂದೆ ಟೊಮೆಟೊ(Tomato) ಬೆಲೆ ಕೇವಲ 40 – 30 ರೂಪಾಯಿ ಕೆಜಿಗೆ ಇತ್ತು. ಆದರೆ ಇದೀಗ ಅದೇ ಗಿಡದಲ್ಲಿ ಆಗುವ ಟೊಮೆಟೊ ಬೆಲೆ 130 ರಿಂದ 150 ರೂಪಾಯಿಯ ಮರ ಏರಿ ಕುಳಿತಿದೆ.

 

ಟೊಮೆಟೊ ಬೆಲೆ ಎಷ್ಟು ಕಾಸ್ಟ್ಲಿ ಆಗಿರುವ ಈ ಸಂದರ್ಭದಲ್ಲಿ ತಮಿಳುನಾಡಿನಲ್ಲೊಬ್ಬ ವ್ಯಾಪಾರಿ ಕೆಜಿಗೆ 20 ರೂಪಾಯಿ ಯಂತೆ ಟೊಮ್ಯಾಟೋ ಮಾರಿದ್ದಾನೆ. ಹತ್ತು ರೂಪಾಯಿ ಕಡಿಮೆ ಮಾಡಿ ಸಾಕು ಅಂತ ಕೇಳೋ ನಮ್ಮ ಜನ ಇಷ್ಟು ಕಡಿಮೆ ಯಲ್ಲಿ ಟೊಮ್ಯಾಟೊ ಸಿಕ್ತಾ ಇದೆ ಅಂತ ಹೇಳಿದ್ರೆ, ಬಿಡ್ತಾರಾ ?

 

ಅಂದ ಹಾಗೆ ಈ ವ್ಯಕ್ತಿಯು ಕಡೂರು ಜಿಲ್ಲೆ ಸೆಲ್ಲನ್ ಕುಪ್ಪನ್ ನಲ್ಲಿ ಅಂಗಡಿಯನ್ನು ಇಟ್ಟು ವ್ಯಾಪಾರ ನಡೆಸುತ್ತಿರುವ ಡಿ. ರಾಜೇಶ್ ಹೊಸ ಆಫರ್ ನೀಡಿದ್ದರು. ಅವರ ವ್ಯಾಪಾರಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆ.ಜಿ ಗೆ 120 ಇದ್ದ ಟೊಮ್ಯಾಟೋವನ್ನು 20 ರೂಪಾಯಿಯಂತೆ ಮಾರಿದ್ದಾರೆ.

 

“ನಾನು ನನ್ನ ಈ ಅಂಗಡಿಯನ್ನು ಪ್ರಾರಂಭಿಸಿ ವ್ಯಾಪಾರ ಶುರು ಮಾಡಿ 4 ವರ್ಷ ತುಂಬಿದೆ. ಹಾಗಾಗಿ ನಾನು ಗ್ರಾಹಕರಿಗೆ ನೆರವಾಗಲೆಂದು ಕೆ.ಜಿ ಗೆ 120 ಇದ್ದ ಟೊಮ್ಯಾಟೋ ವನ್ನು 20 ರೂಪಾಯಿಗೆ ಮಾರಿದ್ದೇನೆ. ನಾನು ಈ ಟೊಮೆಟೊವನ್ನು ಮಾರುಕಟ್ಟೆಯಲ್ಲಿ 60 ರೂಪಾಯಿಗೆ ಖರೀದಿಸಿದ್ದೆ. ನನಗೆ ನಷ್ಟವಾದರೂ ಸರಿ, 20 ರೂಪಾಯಿಗೆ ಮಾರಿದ್ದೇನೆ. ಗ್ರಾಹಕರಿಗೆ ಈ ಮೂಲಕ ನೆರವಾಗುವುದು ನನ್ನ ಉದ್ದೇಶವಷ್ಟೇ. ಹೀಗೆ ಆಫರ್ ಇಟ್ಟ ಕೆಲವೇ ಗಂಟೆಗಳಲ್ಲಿ ಎಲ್ಲವೂ ಖಾಲಿಯಾಗಿದೆ ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಸಿಗರೇಟ್ ಉರಿಸುತ್ತಲೇ ಬಿಗ್ ಬಾಸ್ ಶೋ ನಡೆಸಿದ ಸಲ್ಮಾನ್ ಖಾನ್ !

Leave A Reply

Your email address will not be published.