Karnataka Budget: ಸಿದ್ದು ಬಜೆಟ್- ಯಾವ ಹೊಸ ವಾಹನಗಳ ಬೆಲೆ ಹೆಚ್ಚಾಗುತ್ತೆ ? ಕಾರು ಬೈಕ್ ರೇಟ್ ಏರಿಕೆ ? ಇದೀಗ ಬಂತು ಹೊಸ ಅಪ್ಡೇಟ್ !
Karnataka Budget Which new vehicles will increase in price A new update about vehicle price
Karnataka Budget: ನಿನ್ನೆ ತಾನೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 14ನೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್( Karnataka Budget) ನಲ್ಲಿ ಹೇಳಿದಂತೆ ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ತಿದ್ದುಪಡಿ ಮೂಲಕ ಸರಳೀಕರಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಮೋಟಾರು ತೆರಿಗೆ ಜಾಸ್ತಿ ಆದರೆ ಗ್ಯಾರಂಟಿಯಾಗಿ ವಾಹನಗಳ ಖರೀದಿ ಬೆಲೆ ಜಾಸ್ತಿ ಆಗುತ್ತದೆ. ಆದರೆ ಯಾವ ತರಹದ ವಾಹನದ ಮೇಲೆ ರೇಟ್ ಜಾಸ್ತಿ ಆಗುತ್ತೆ ಅನ್ನುವ ಅನುಮಾನ ಕ್ಲಿಯರ್ ಆಗಿರಲಿಲ್ಲ. ಅದರ ಬಗ್ಗೆ ನಾವು ಈಗ ಹೇಳುತ್ತೇವೆ.
ಕೆಲವು ವರ್ಗಗಳ ವಾಹನಗಳ ಮೇಲೆ ಮಾತ್ರ ವಿಧಿಸುವ ತೆರಿಗೆಯನ್ನು ಪ್ರಸ್ತುತ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಆದುದರಿಂದ ಈಗಿನ ತೆರಿಗೆ ಹೆಚ್ಚಳವು ವಾಣಿಜ್ಯ ಸರಕುಗಳ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ವೈಯಕ್ತಿಕ ವಾಹನಗಳಿಗೆ ಅಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಂದ್ರೆ ವೈಯಕ್ತಿಕ ವಾಹನಗಳ ಬೆಲೆಗಳು ಇದೀಗ ಸಿದ್ದರಾಮಯ್ಯನವರು ಬಜೆಟ್ಟಿನಲ್ಲಿ ವಾಸದಗಳ ಮೇಲೆ ಹಾಕಿದ ಏಳು ಪರ್ಸೆಂಟ್ ಅಧಿಕ ಟ್ಯಾಕ್ಸ್ ಅನ್ವಯವಾಗುವುದಿಲ್ಲ ಆದುದರಿಂದ ಬೈಕು ಕಾರು ಮುದ್ದಾದ ವೈಯಕ್ತಿಕ ವಾಹನಗಳ ಬೆಲೆ ಏರಿಕೆ ಆಗುವುದಿಲ್ಲ.
ಅಲ್ಲದೆ, ಸರಕು ವಾಹನಗಳ ಮೇಲಿನ ತೆರಿಗೆ ಹೆಚ್ಚಳವು ತಕ್ಷಣವೇ ಆಗುವುದಿಲ್ಲ. ಮೊದಲಿಗೆ ಕರ್ನಾಟಕ ಮೋಟಾರು ವಾಹನ ತೆರಿಗೆ ಮಸೂದೆಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಬೇಕು. ನಂತರ ಅದು ಅಂಗೀಕಾರ ಆಗಬೇಕು. ಆಗ ತಾನೇ ಸರಕು ಸಾಗಣೆ ವಾಹನಗಳ ಹೆಚ್ಚು ತೆರಿಗೆ ಅನ್ವಯ ಆಗುತ್ತದೆ. ತದನಂತರ ಬೆಲೆ ಹೆಚ್ಚಾಗುತ್ತದೆ. ಬಜೆಟ್ ನಲ್ಲಿ 7 % ಟ್ಯಾಕ್ಸ್ ಏರಿಕೆಯನ್ನು ಘೋಷಿಸಿದ್ದು ಸರಕು ವಾಹನಗಳು ಭಾರೀ ತುಟ್ಟಿ ಆಗಲಿದೆ. 5 ಲಕ್ಷದವರೆಗಿನ ಸರಕು ವಾಹನಗಳು 35,000 ರೂಪಾಯಿ ತುಟ್ಟಿ ಆಗಲಿವೆ. ಅದೇ 10 ಲಕ್ಷದವರೆಗಿನ ವಾಹನಗಳು ಬರೋಬ್ಬರಿ 70,000 ರೂಪಾಯಿ ಕಾಸ್ಟ್ಲಿ ಆಗಲಿದೆ. ಆದರೆ ಯಾವುದೇ ದ್ವಿಚಕ್ರ ಮತ್ತು ಕಾರುಗಳ ಬೆಲೆಯಲ್ಲಿ ಹೆಚ್ಚಳ ಆಗೋದಿಲ್ಲ.
ಮಾಜಿ ಸಿಎಂ ಬೊಮ್ಮಾಯಿಯವರು ಮಂಡಿಸಿದ ಬಜೆಟ್ನಲ್ಲಿ ಸಾರಿಗೆ ಇಲಾಖೆಗೆ 2023 – 24 ನೇ ಸಾಲಿಗೆ 10,500 ಕೋಟಿ ರೂ.ಗಳ ಆದಾಯ ಸಂಗ್ರಹದ ಗುರಿ ಇಟ್ಟಿದ್ದರು. ಆದ್ರೆ ಸಿದ್ದರಾಮಯ್ಯನವರ ಬಜೆಟ್ನಲ್ಲಿ ಅದು 1,000 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿ, ಈಗ 11,500 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ
ಬಜೆಟ್ನಲ್ಲಿ ಬಸ್ ನಿಗಮಗಳಿಗೆ ಯಾವುದೇ ಅನುದಾನವಿಲ್ಲ, ಆಂತರಿಕ ಮತ್ತು ಬಾಹ್ಯ ಬಜೆಟ್ ಸಂಪನ್ಮೂಲಗಳು 2023 – 24 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 190 ಕೋಟಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 236 ಕೋಟಿ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಗೆ ನಿಗದಿಪಡಿಸಲಾಗಿದೆಯಷ್ಟೆ.
ಇದನ್ನೂ ಓದಿ: ಕರಾವಳಿಯಲ್ಲಿ ಮಳೆಯಬ್ಬರ ಇನ್ನಷ್ಟು ಹೆಚ್ಚಳ ಸಂಭವ, ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರ !