Arecanut price: ಚಿನ್ನಕ್ಕೇ ಸೆಡ್ಡು ಹೊಡೆದ ಅಡಕೆ ಬೆಲೆ !! ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
latest news Arecanut price hiked in the state market
Arecanut price: ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ(Markèt) ಸರಿಯಾದ ಧಾರಣೆಯೆ ಸಿಗುತ್ತಿಲ್ಲವೆಂಬ ರೈತರ(Formers) ಕೊರಗಿನ ನಡುವೆಯೂ ಒಕ್ಕಣ್ಣ ಅಡಕೆ ಧಾರಣೆಯು ಏರುಗತಿಯಲ್ಲಿದ್ದು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಕಳೆದ ಕೆಲವು ವಾರಗಳಿಂದ ಅಡಿಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ.
ಹೌದು, ಎಪಿಎಂಸಿ(APMC)ಯಲ್ಲಿ ಅಡಕೆ ಧಾರಣೆಯು ನಿರಂತರವಾಗಿ ಏರುಮುಖವಾಗಿರುವುದು ಮಲೆನಾಡು, ಅರೆಮಲೆನಾಡು ಮತ್ತು ಬಯಲು ಪ್ರದೇಶದ ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಸರಕು ಅಡಿಕೆಯ ಬೆಲೆಯು 82496 ದ ಗಡಿ ದಾಟಿದೆ. ಈ ಹಂಗಾಮಿನಲ್ಲಿ ಜೂನ್ 19ರಂದು ಮೊದಲ ಬಾರಿಗೆ ಸರಕು ಅಡಿಕೆಗೆ ಕ್ವಿಂಟಲ್‌ಗೆ 82,400 ದರ ದೊರಕಿತ್ತು.
ಇನ್ನು ಜೂನ್ 21ರಂದು ಗರಿಷ್ಠ 86,400 ಕ್ಕೆ ಮಾರಾಟವಾಗುವ ಮೂಲಕ ಈ ಬಾರಿಯ ದಾಖಲೆ ಬರೆದಿದೆ. ಜೂನ್ 22ರಂದು 86,100, 27ರಂದು 83,200 ಬೆಲೆ ಪಡೆದಿದ್ದ ಸರಕು ಅಡಿಕೆ, ಕಳೆದೊಂದು ವಾರದಿಂದ 76,600ರ ಆಸುಪಾಸು ಇತ್ತು. ಈಗ ಮತ್ತೆ ದಿಡೀರನೆ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ.
ಇಂದಿನ ಅಡಿಕೆ ಬೆಲೆ:
• ರಾಶಿ ಅಡಿಕೆ – ಪ್ರತೀ ಕ್ವಿಂಟಲ್‌ಗೆ 56,299ರೂ, ಕನಿಷ್ಠ 39,201,
• ಬೆಟ್ಟೆ ಅಡಿಕೆ – ಪ್ರತೀ ಕ್ವಿಂಟಲ್‌ಗೆ ಗರಿಷ್ಠ 55, 382ರೂ ಕನಿಷ್ಠ 45,000ರೂ
• ಗೊರಬಲು – ಪ್ರತೀ ಕ್ವಿಂಟಾಲ್ ಗೆ ಗರಿಷ್ಠ 42,399ರೂ ಕನಿಷ್ಠ 18,000ರೂ
• ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಗರಿಷ್ಠ 55599,
ಕೆಂಪು ಗೋಟಿಗೆ 42899 ಬೆಲೆ ನೆಡೆಯುತ್ತಿದೆ.