Gruhalakshmi: ‘ಗೃಹ ಲಕ್ಷ್ಮೀ’ಗೆ ಅರ್ಜಿ ಹಾಕಲು ಕೊನೆಗೂ ದಿನಾಂಕ ನಿಗದಿ ಮಾಡಿದ ಗೌರ್ಮೆಂಟ್ !! ಈ ದಿನದಿಂದಲೇ ನಿಮ್ಮ ಖಾತೆಗೆ ಬರುತ್ತೆ 2000 ಅಮೌಂಟ್!!

Latest Karnataka news Congress guarantee Siddaramaiah starts application for gruhalakshmi scheme from July 16

Gruhalakshmi scheme: ಕಾಂಗ್ರೆಸ್ ಸರ್ಕಾರ(Congress Government) ತನ್ನ ಚುನಾವಣೆಗಾಗಿ ಘೋಷಣೆ ಮಾಡಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಗಳನ್ನು ಜಾರಿಮಾಡಿದ್ದು, ಇದೀಗ ಗೃಹಲಕ್ಷ್ಮೀ (Gruha Lakshmi) ಯೋಜನೆಯನ್ನು ಜಾರಿಗೆ ಮುಂದಾಗಿದ್ದು, ಕೊನೆಗೂ ಅರ್ಜಿ ಹಾಕಲು ದಿನಂಕ ನಿಗದಿ ಮಾಡಿದೆ.

ಹೌದು, ಪ್ರತೀ ಕುಟುಂಬದ ಯಜಮಾನಿ ಮಹಿಳೆಯರು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಗೃಹ ಲಕ್ಷ್ಮೀ(Gruha lakshmi scheme) ಯೋಜನೆಗೆ ಅರ್ಜಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ.16ರಂದು ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಆಗಸ್ಟ್ ನಲ್ಲಿ 2000 ರೂ ಕುಟುಂಬದ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಇಂದು ರಾಜ್ಯ ಬಜೆಟ್(Budget) ಮಂಡನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಜುಲೈ.16ರಿಂದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಲಾಗುತ್ತದೆ. ಆಗಸ್ಟ್(August) ತಿಂಗಳಿನಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ರೂ.2000 ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.

ಯಾರಿಗೆಲ್ಲಾ ಬರುತ್ತೆ ಈ ಹಣ?
• ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಬಿಪಿಎಲ್‌-ಎಪಿಎಲ್‌ ಯಾವುದೇ ಭೇದಭಾವ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯೋಜನೆಗೆ ಯಾವುದೇ ಆದಾಯದ ಮಿತಿ ಇಲ್ಲ ಎಂದಿರುವ ಅವರು, ಸರಕಾರಿ ನೌಕರರಿಗೂ ಇದು ಅನ್ವಯವಾಗಲಿದೆ. ನನ್ನ ಹೆಂಡತಿಗೂ ಯೋಜನೆ ಇದೆ ಎಂದಿದ್ದಾರೆ.
• ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ಪಿಂಚಣಿ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಹಣ ಪಡೆಯುತ್ತಿರುವವರಿಗೆ ಹೆಚ್ಚುವರಿಯಾಗಿ ಈ ಗೃಹಲಕ್ಷ್ಮೀ ಹಣವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

‘ಗೃಹಲಕ್ಷ್ಮೀ’ಯ 2,000 ಪಡೆಯಲು ಏನು ಮಾಡಬೇಕು?
BPL, APL, ಅಂತ್ಯೋದಯ ಕಾರ್ಡ್​ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್​ಟಿ ರಿರ್ಟನ್ಸ್ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ.

ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ರಾಜ್ಯಾದ್ಯಂತ ಜನ ಏಕಕಾಲಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಪರಿಣಾಮ 3-4 ದಿನ ಸರ್ವಸ್ ಸಮಸ್ಯೆಯಿಂದ ಜನ ಪರದಾಡುವಂತಾಯ್ತು. ಇದನ್ನ ಮನಗಂಡ ಸರ್ಕಾರ, ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆಯಾಗಬಾರದು ಎಂದು ಪ್ಲ್ಯಾನ್ ಮಾಡಿದೆ. ಅಲ್ಲದೆ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ.

ಇನ್ನು ಸರ್ಕಾರ ತಿಳಿಸಿದಂತೆ ಜುಲೈ 16ರಿಂದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಅರ್ಜಿ ಹಾಕುವ ಪ್ರಕ್ರಿಯೆ ಏನು ಎಂಬುದನ್ನು ಸರ್ಕಾರ ತಿಳಿಸಲಿದೆ. ಸರ್ಕಾರವು ಮಾರ್ಗ ಸೂಚಿ ಹಾಗೂ ಅರ್ಜಿ ಹಾಕುವ ಪ್ರಕ್ರಿಯೆಯ ಬಗ್ಗೆ ತಿಳಿಸಿದ ಬಳಿಕ ಅರ್ಜಿ ಹಾಕುವ ವಿಧಾನ ಯಾವುದು ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ.

ಇದನ್ನೂ ಓದಿ: ಹೆಚ್ಚಾಯ್ತು ಬಜೆಟ್ ಗಾತ್ರ, ಜನರಿಗೆ ಬಿತ್ತು ತೆರಿಗೆಯ ಹೊಡ್ತ !! ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ದುಡ್ಡು ಗೊತ್ತಾ?

Leave A Reply

Your email address will not be published.