1 ತಿಂಗಳ ಒಳಗೆ ರಾಜ್ಯ ಸರ್ಕಾರ ಬೀಳಿಸ್ತೇವೆ – CM ಗೆ ಮದ್ಯಪ್ರಿಯರ ಪರವಾಗಿ ಎಚ್ಚರಿಕೆ ನೀಡಿದ ಮದ್ಯಪ್ರಿಯರ ಸಂಘದ ರಾಜ್ಯಾಧ್ಯಕ್ಷ
ಎರಡು ತಿಂಗಳ ಮದ್ಯದ ಅಂಗಡಿಗೆ ನಾವು ಹೋಗದಿದ್ದರೆ, ಸರ್ಕಾರವೇ ಬಿದ್ದು ಹೋಗುತ್ತದೆ. ರಾಜ್ಯ ಸರ್ಕಾರ ಏರಿಸಿರುವ ಈ ಅಬಕಾರಿ ಸುಂಕ ಇಳಿಕೆ ಮಾಡಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ಮಧ್ಯಪಾನ ಪ್ರಿಯ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಇಂದು ಅವರು ಮಾತನಾಡಿದರು, ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಅಬಕಾರಿ ಸುಂಕ ಶೇಕಡಾ 20ರಷ್ಟು ಹೆಚ್ಚಿಸುವುದನ್ನು ಹಿಂಪಡೆಯಬೇಕು. ಈ ಮದ್ಯ ಪ್ರಿಯರನ್ನಷ್ಟೇ ಗುರಿಯಾಗಿಸಿ ಆತನನ್ನು ಸುಲಿಗೆ ಮಾಡುತ್ತ ಗುಡುಗಿದರು.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ, ಬೆಳಗಾವಿ ಅಧಿವೇಶನದ ನಂತರ ಶೇಕಡ 30ರಷ್ಟು ಅಬಕಾರಿ ಸುಂಕ ಹೆಚ್ಚಿಸಿತ್ತು. ಈ ಕಾರಣಕ್ಕೆ ಶೇಕಡ 90ರಷ್ಟು ಮದ್ಯಪ್ರಿಯರು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಹಾಗೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗೆ ಏಕಾಏಕಿ ಅಧಿಕಾರಕ್ಕೆ ಬಂದೊಡನೆ ಅಬಕಾರಿ ಸುಂಕ ಶೇಕಡಾ 20 ಹೆಚ್ಚಿಸಿರುವುದು ಸರಿಯಲ್ಲವೆಂದು ಅವರು ಕಿಡಿಕಾರಿದ್ದಾರೆ.
“ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ತಿಂಗಳಿಗೆ 10,000 ಸುಂಕದ ರೂಪದಲ್ಲಿ ವಸೂಲಿ ಮಾಡಿ ಪತ್ನಿಗೆ 2000 ರೂಪಾಯಿ ನೀಡಲು ಗ್ಯಾರಂಟಿ ಯೋಜನೆ ಮುಂದಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಹೆಚ್ಚಿಸಿರುವ ಶೇಕಡ 20 ಅಬಕಾರಿ ಸುಂಕವನ್ನು ಹಿಂಪಡೆಯಲು” ಎಂದು ಕರ್ನಾಟಕ ರಾಜ್ಯ ಮದ್ಯ ಕ್ರಿಯಾ ಸಂಘ ರಾಜ್ಯಾಧ್ಯಕ್ಷ ಒತ್ತಾಯಿಸಿದೆ.
ಮದ್ಯ ದುಬಾರಿ- ಸರಕಾರ ನಡೆಯಲು ರಹದಾರಿ:
*ಅಬಕಾರಿ ಸುಂಕ 20%ರಷ್ಟು
*ಘೋಷಿತ 18 ಸ್ಲಾಬ್‌ಗಳ ಮೇಲಿನ ಸುಂಕ
*ಎಲ್ಲ ರೀತಿಯ ಮದ್ಯಗಳ ದರ ಏರಿಕೆ
*ಬಿಯರ್ ಮೇಲಿನ ಹೆಚ್ಚುವರಿ ಸುಂಕ 10% ಅಧಿಕ (175% ರಿಂದ 185%)
ಅಬಕಾರಿ ತೆರಿಗೆ ಸಂಗ್ರಹದ ಗುರಿ:
“2022-23ರ ಬಜೆಟ್: 29,000 ಕೋಟಿ ರೂಪಾಯಿ ಸಂಗ್ರಹ ಗುರಿ ಇತ್ತು
*2023-24ರ ಬಜೆಟ್: 36,000 ಕೋಟಿ ರೂಪಾಯಿ ಸಂಗ್ರಹ ಗುರಿ
*ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹದ ಗುರಿ: 7,000 ಕೋಟಿ ರೂಪಾಯಿ