Anna Baghya Scheme: ‘ಅನ್ನಭಾಗ್ಯ’ ಹಣದ ಆಸೆಯಲ್ಲಿದ್ದವರಿಗೆ ಬೇಸರದ ಸುದ್ಧಿ ; ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ! 7 ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ !
latest news political news Anna Baghya Scheme New Guidelines Released by Govt
Anna Baghya Scheme: ಕಾಂಗ್ರೆಸ್ (congress) ಪಕ್ಷ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದೊಂದೇ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುತ್ತಿದೆ. ಇದೀಗ ಕರ್ನಾಟಕ ಸರಕಾರವು ಅನ್ನಭಾಗ್ಯ ಯೋಜನೆ ಜಾರಿ ತರಲು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೀಡಲು ಮುಂದಾಗಿದೆ. ಆದರೆ, ‘ಅನ್ನಭಾಗ್ಯ’ ಹಣದ ಆಸೆಯಲ್ಲಿದ್ದವರಿಗೆ ಬೇಸರದ ಸುದ್ಧಿ ಇಲ್ಲಿದೆ. ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ ಸಿಗುತ್ತೆ !
ಅನ್ನಭಾಗ್ಯದ (Anna Baghya Scheme) ಹಣ ವರ್ಗಾವಣೆಗೆ ಇದೀಗ ರಾಜ್ಯ ಸರ್ಕಾರ ಹೊಸ ಷರತ್ತು ವಿಧಿಸಿದ್ದು, ಬಿಪಿಎಲ್ ಕುಟುಂಬದಲ್ಲಿ ಇಬ್ಬರು ಮುಖ್ಯಸ್ಥರಿದ್ದರೆ ಅಕ್ಕಿ ಹಣ ಸಿಗುವುದಿಲ್ಲ. ಕುಟುಂಬಕ್ಕೆ ಯಾರು ಮುಖ್ಯಸ್ಥರು ಎಂಬುದನ್ನು ಜುಲೈ 20ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬದವರು ಮಾಹಿತಿ ನೀಡಬೇಕು. ಜುಲೈ 20ರೊಳಗೆ ಮಾಹಿತಿಯನ್ನು ನೀಡಿದ ಬಿಪಿಎಲ್ ಕುಟುಂಬಗಳಿಗೆ ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರೆಯಲಿದೆ.
ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದರೆ ಆ ಕುಟುಂಬದ ಮುಖ್ಯಸ್ಥರು ಯಾರು ಎನ್ನುವುದನ್ನು ನಿರ್ಧರಿಸಿ ತಿಳಿಸುವ ತನಕ ಅನ್ನಭಾಗ್ಯ ಯೋಜನೆಯಡಿಯ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ಸಿಗುವುದಿಲ್ಲ. ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದ ಕುಟುಂಬಗಳಿಗೆ ಹಣ ಸಿಗಲಿದೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳಿಗೆ ಅನ್ನಭಾಗ್ಯ ಹಣ ಸಿಗುವ ಸಾಧ್ಯತೆ ಕಡಿಮೆ ಇದೆ.
ಕುಟುಂಬಸ್ಥರು ಶೀಘ್ರವೇ ಮುಖ್ಯಸ್ಥರು ಯಾರು ಎನ್ನುವುದನ್ನು ನಿರ್ಧರಿಸಬೇಕು. ಅಲ್ಲದೇ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಯನ್ನೇ ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು ಈಗಾಗಲೇ ಎರಡನೇ ಮುಖ್ಯಸ್ಥರ ಹೆಸರಿದ್ದರೆ ಆ ಹೆಸರನ್ನು ನಿಷ್ಕ್ರಿಯಗೊಳಿಸಬೇಕು.
ಅಂತ್ಯೋದಯ ಕಾರ್ಡು ಹೊಂದಿದ ಮೂವರು ಮತ್ತು ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ಅನ್ನಭಾಗ್ಯದ ಹಣ ಸಿಗುವುದಿಲ್ಲ. ಅವರು ಈಗಾಗಲೇ 30 ಕೆಜಿ ಅಕ್ಕಿ ಪಡೆಯುತ್ತಿರುತ್ತಾರೆ. ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ ಆ ಕುಟುಂಬ 170 ರೂ., 5 ಸದಸ್ಯರಿದ್ದರೆ 340 ರೂ., 6 ಸದಸ್ಯರಿದ್ದರೆ 510 ರೂಪಾಯಿ ಪಡೆಯಲಿದೆ. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೆ ಅನುಪಾತದಲ್ಲಿ ಹಣ ನೀಡಲಾಗುತ್ತದೆ.
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ. ಅನ್ನಭಾಗ್ಯದ ಹಣ ಬೇಕಂದ್ರೆ ಆಧಾರ್ ಕಾರ್ಡ್ (Adhar card) ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಬೇಕು. ಹೀಗೆ ಮಾಡಿದ್ರೆ ಮಾತ್ರ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ.
ಸದ್ಯ ರಾಜ್ಯದಲ್ಲಿ ಸುಮಾರು 10.89 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿದ್ದು, 44.76 ಲಕ್ಷ ಸದಸ್ಯರಿದ್ದಾರೆ. ಅದೇ ರೀತಿ 1.17 ಕೋಟಿ ಬಿಪಿಎಲ್ ಕಾರ್ಡ್ (BPL Card holders) ದಾರರಿದ್ದು, ಅಂದಾಜು 4 ಕೋಟಿ ಸದಸ್ಯರಿದ್ದಾರೆ. ನಿಯಮದ ಪ್ರಕಾರ ಇವರೆಲ್ಲರಿಗೂ ಪ್ರತೀ ತಿಂಗಳು ಕ್ರಮವಾಗಿ 35 ಕೆ.ಜಿ. ಹಾಗೂ ತಲಾ 5 ಕೆ.ಜಿ. ಅಕ್ಕಿ ಪೂರೈಕೆ ಆಗಬೇಕು. ಆದರೆ ಈ ಪೈಕಿ ಕೆಲವರು ಪಡಿತರ ಪಡೆಯಲು ಬರುವುದೇ ಇಲ್ಲ. ಆ ವರ್ಗ ಅಂದಾಜು ಶೇ. 10ಕ್ಕಿಂತ ಅಧಿಕ ಇದೆ. ಅಂತಹವರಿಗೆ ಅಕ್ಕಿಯ ಬದಲಿನ ಹಣವನ್ನೂ ವರ್ಗಾವಣೆ ಮಾಡದಿರಲು ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ.