ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
Rain :ಕೊಡಗಿನಾದ್ಯಂತ ಕೂಡಾ ಮಳೆಯ ಆರ್ಭಟ ಜೋರಾಗಿದ್ದು, ಬುಧವಾರ ಮತ್ತು ಗುರುವಾರ ಧಾರಾಕಾರವಾಗಿ ಮಳೆ (Rain)ಸುರಿದಿದೆ. ಈ ವಿಪರೀತ ಮಳೆಯಿಂದಾಗಿ ಕಾವೇರಿ ನದಿಯ ಪ್ರದೇಶಗಳು ಕ್ರಮೇಣ ಭರ್ತಿಯಾಗುತ್ತಿದೆ.
ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿಯ ಅಬ್ಬೆ ಜಲಪಾತವು ಕೆಸರಬಣ್ಣದ ನೀರಿನೊಂದಿಗೆ ಧುಮುಕುತ್ತಿದೆ. ಎಲ್ಲೆಡೆ ಮಳೆ ಜೋರಗಿದ್ದು ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ದಕ್ಷಿಣ ಕೊಡಗಿನ ಇತರ ಭಾಗಗಳಲ್ಲಿ ಸಾಧಾರಣ ಮಳೆ ಉಂಟಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 68.01 ಮಿ.ಮೀ ಮಳೆ ದಾಖಲಾಗಿದೆ. ಹಾರಂಗಿಯಲ್ಲಿ 2859 ಅಡಿ ಸಾಮರ್ಥ್ಯದ ನೀರಿನ ಮಟ್ಟ 2826.48 ಅಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ 54.20 ಮಿ.ಮೀಟರ್ ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಪಟ್ಟಣದಲ್ಲಿ 120 ಮಿ.ಮೀ ಮಳೆ ದಾಖಲಾಗಿರುವುದರಿಂದ ಭಾಗಮಂಡಲದ ಕಾವೇರಿ ನದಿಗೆ ಅಡ್ಡಲಾಗಿ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದೆ. ಕುಶಾಲನಗರದಲ್ಲಿ 18.6 ಮಿಮೀ ಮಳೆಯಾಗಿದೆ. ಹಲವಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ. ಕೆಲವೆಡೆ ವಿದ್ಯುತ್ ಕಂಬದ ಮೇಲೆ ಉರುಳಿದ ನಂತರ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮಡಿಕೇರಿಯ ಕೆಲವು ಕಡೆ ಮರ ರಸ್ತೆಗೆ ಉರುಳಿದೆ ಒಂದು ಕಡೆ ಮರವೊಂದು ಮನೆಯ ಮೇಲೇ ಬಿದ್ದಿದೆ.
ಇದನ್ನೂ ಓದಿ :ಟ್ರಕ್’ಗಳಲ್ಲಿ ‘AC ಕ್ಯಾಬಿನ್’ ಕಡ್ಡಾಯಕ್ಕೆ ಜೈ ಎಂದ ಕೇಂದ್ರ ಈ ದಿನದಿಂದಲೇ ಜಾರಿಗೆ ಆದೇಶ !