ಹೋಗಿ ಹೋಗಿ ಕಾಡಾನೆಯೊಂದಿಗೆ ಸೆಲ್ಫಿ – ಬಚಾವ್ ಆಗಿ ವಾಪಸ್ಸಾದಾಗ 20 ಸಾವಿರ ರೂ. ದಂಡ ಕಕ್ಕಿದ್ರು
Selfi with Elephant :ಹೋಗಿ ಹೋಗಿ ಕಾಡಾನೆಯೊಂದಿಗೆ ಸೆಲ್ಫಿ (Selfi with Elephant) ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಹೌದು, ಚಾಮರಾಜನಗರ (Chamrajnagar) ಜಿಲ್ಲೆಯ ಗಡಿ ಭಾಗದ ತಮಿಳುನಾಡಿನ ಅಸನೂರು ಬಳಿ ಈ ‘ಸೆಲ್ಫಿ ವಿತ್ ವೈಲ್ಡ್ ಎಲೆ ಫ್ಯಾಂಟ್ ‘ ನಡೆಸಿದ್ದು ತೆಲಂಗಾಣ ನಿಜಾಮ್‍ಪೇಟೆ ಮೂಲದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್ (31) ಎಂಬವರೇ ಈ ದುಸ್ಸಾಹಸಕ್ಕೆ ಇಳಿದ ವ್ಯಕ್ತಿಗಳು. ಇದೀಗ ಇಬ್ಬರಿಗೂ ತಲಾ ಹತ್ತು ಸಾವಿರ ಫೈನ್ ಹಾಕಲಾಗಿದಿದ್ದು, ಇರಲಾರದೆ ಇರುವೆಬಿಟ್ಟುಕೊಂಡಂತಾಗಿದೆ.
ಅಂದಹಾಗೆ ತೆಲಂಗಾಣದ ಈ ಇಬ್ಬರು ಯುವಕರು ಬೆಂಗಳೂರು – ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಆಸನೂರು ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಅಲ್ಲಿ ಆನೆ ನಿಂತಿದ್ದನ್ನು ನೋಡಿದ ಅವರು ಕಾರಿನಿಂದ ಇಳಿದು ಕಾಡಾನೆಯ ಸಮೀಪ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಅವರು ಗಸ್ತ್ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದು ಅವರನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಯುವಕರು ಕಾರನ್ನೇರಿ ಪರಾರಿಯಾಗಿದ್ದರು.
For having a selfie, they not only do foolish things,but do them with enthusiasm… pic.twitter.com/rMoFzaHrL3
— Susanta Nanda (@susantananda3) July 5, 2023
ಆದರೆ ಕಿಲಾಡಿಗಳಾದ ಆ ಸಿಬ್ಬಂದಿಯು ತಮ್ಮ ಮುಂದಿನ ಚೆಕ್ ಪೋಸ್ಟ್ ಆದ ಬಳಿಕ ಬಣ್ಣಾರಿ ಅಮ್ಮನ್ ಚೆಕ್ ಪೋಸ್ಟ್‌ಗೆ ಸುದ್ದಿ ತಲುಪಿಸಿ ಅಲ್ಲಿ ಇವರಿಬ್ಬರನ್ನು ಹಿಡಿಯಲು ತಿಳಿಸಿದ್ದಾರೆ. ಅದರಂತೆ ಕಾರು ಬಣ್ಣಾರಿ ಚಿಕ್ಕ ಪೋಸ್ಟಿಗೆ ಈ ಇಬ್ಬರು ಸೆಲ್ಫಿ ವೀರರು ಬಂದಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಡುಗಾಟಿಕೆ ತೋರಿದ ಅವರಿಗೆ 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ದಕ್ಷಿಣ ಕನ್ನಡ: ನಾಳೆ, ಜುಲೈ 7 ರಂದು ಶಾಲೆ ಮತ್ತು ಸೀಮಿತ ಕಾಲೇಜುಗಳಿಗೆ ರಜೆ ಘೋಷಣೆ