ವಾಹನ ಸವಾರರಿಗೆ ಮತ್ತೆ ಭಾರೀ ಗುಡ್‌ ನ್ಯೂಸ್: ಟ್ರಾಫಿಕ್ ಫೈನ್ ನಲ್ಲಿ 50% ಡಿಸ್ಕೌಂಟ್, ತಕ್ಷಣದಿಂದ ಜಾರಿ !

Traffic Fine :ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಟ್ರಾಫಿಕ್ ವಿಷಯದಲ್ಲಿ ಬಿಗ್ ಡಿಸ್ಕೌಂಟ್ ಘೋಷಣೆ ಆಗಿದೆ. ಟ್ರಾಫಿಕ್ ಫೈನ್( Traffic Fine)ಗೆ ಇದ್ದ ಡಿಸ್ಕೌಂಟ್ ಅನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅಂದು ಇ-ಚಲನ್‌ನಲ್ಲಿ ದಾಖಲಾಗಿರುವ ‍ಟ್ರಾಫಿಕ್ ಫೈನ್‌ಗೆ ಮತ್ತೆ 50% ಡಿಸ್ಕೌಂಟ್ ಘೋಷಣೆ ಮಾಡಲಾಗಿತ್ತು. ಈಗ ಅದರ ಅವಧಿಯನ್ನು ಸೆಪ್ಟೆಂಬರ್ 9 ರವರೆಗೆ ರಿಯಾಯಿತಿ ಅವಧಿ ಇರಲಿದೆ.

 

ರಸ್ತೆ ಸುರಕ್ಷತಾ ಕಮಿಷನರ್ ಜೊತೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಸಭೆ ನಡೆಸಿ ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಮತ್ತೊಮ್ಮೆ ಸಮಯ ವಿಸ್ತರಿಸುವಂತೆ ಹೇಳಿದ್ದರು. ಟ್ರಾಫಿಕ್ ಉಲ್ಲಂಘನೆಗಳ ಮೇಲೆ ಹಾಕುವ ದಂಡ ಪಾವತಿ ಮೇಲೆ ಘೋಷಿಸಿದ್ದ 50% ರಿಯಾಯಿತಿ ಸೌಲಭ್ಯವನ್ನು ಸರ್ಕಾರ ವಾಹನ ಸವಾರರಿಗೆ ಮತ್ತೆ ಕಲ್ಪಿಸಿದೆ. ಆ ಮೂಲಕ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇಲ್ಲಿಯತನಕ ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದೆ. ಈ ಹಿಂದೆ ಕೂಡ 50% ಡಿಸ್ಕೌಂಟ್ ಘೋಷಿಸಿದ ನಂತರ ನೂರಾರು ಕೋಟಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿತ್ತು.

 

ಈ ಹಿಂದೆ ಕೂಡಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ರಿಯಾಯಿತಿಯಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿತ್ತು. ನೂರಾರು ಕೋಟಿ ಬೊಕ್ಕಸ ಸೇರಿತ್ತು. ಹೀಗಾಗಿ ಮತ್ತೆ 50 % ಡಿಸ್ಕೌಂಟ್ ಅನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಒಟ್ಟಾರೆ ಕರ್ನಾಟಕ ರಾಜ್ಯ ಸರ್ಕಾರವು ಜನತೆಗೆ ಮೇಲಿಂದ ಮೇಲೆ ಒಂದಲ್ಲ ಒಂದು ಖುಷಿಯ ವಿಚಾರವನ್ನೇ ನೀಡುತ್ತಿದ್ದು ಇದೀಗ ಈ ರಿಯಾಯಿತಿ ಸ್ಕೀಮ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ :ಬೆಂ. ಮೈ ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಈ ವಾಹನ ಚಾಲಕರು 1,000 ರೂ. ತೆರಲೇ ಬೇಕು

Leave A Reply

Your email address will not be published.