Home News Love Jihad in Rajasthan: ಮಹಿಳಾ ಟೀಚರ್ ಜತೆ ಓಡಿ ಹೋದ 17 ವರ್ಷದ ಅಪ್ರಾಪ್ತ...

Love Jihad in Rajasthan: ಮಹಿಳಾ ಟೀಚರ್ ಜತೆ ಓಡಿ ಹೋದ 17 ವರ್ಷದ ಅಪ್ರಾಪ್ತ ಬಾಲಕಿ, ಆದ್ರೆ ಅದು ಲವ್ ಜಿಹಾದ್ – ಅದ್ಹೇಗೆ ?!

Love Jihad in Rajasthan
Image source: Aaj Tak

Hindu neighbor gifts plot of land

Hindu neighbour gifts land to Muslim journalist

Love Jihad in Rajasthan: ಇತ್ತೀಚಿಗೆ ಲವ್ ಜಿಹಾದ್ ನಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಲವ್ ಜಿಹಾದ್ ಎಂದರೆ ಮುಸ್ಲಿಂ ಹುಡುಗ ಹಿಂದು ಹುಡುಗಿಯನ್ನು ಪ್ರೀತಿ ಮಾಡುವಂತೆ ಹೇಳಿ ಮೋಸದ ಜಾಲಕ್ಕೆ ಸಿಲುಕಿಸಿ ಹುಡುಗಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವುದು. ಆದರೆ ಇದೀಗ ಮಹಿಳಾ ಟೀಚರ್ ಜೊತೆಗೆ ಅಪ್ರಾಪ್ತ ಬಾಲಕಿಯು ಓಡಿ ಹೋಗಿದ್ದು, ಗ್ರಾಮಸ್ಥರು ಇದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.

ಹೌದು, ರಾಜಸ್ಥಾನದ ಬಿಕಾನೇರ್‌ನಲ್ಲಿ ಮಹಿಳಾ ಟೀಚರ್‌ ಜತೆ 17 ವರ್ಷದ ಬಾಲಕಿಯು ಪಲಾಯನ ಮಾಡಿದ್ದು, ಇಲ್ಲೂ ಲವ್‌ ಜಿಹಾದ್‌ (Love Jihad in Rajasthan) ಇದೆ ಎಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ. ಬಿಕಾನೇರ್‌ ವ್ಯಾಪ್ತಿಯ ಶ್ರೀದುಂಗರಗಢ ಗ್ರಾಮದಲ್ಲಿರುವ ಶಾಲೆಯಲ್ಲಿ 21 ವರ್ಷದ ಯುವತಿಯೊಬ್ಬಳು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿಯ ಜೊತೆ ಶಿಕ್ಷಕಿಯು ಓಡಿಹೋಗಿದ್ದಾಳೆ. ಶಿಕ್ಷಕಿಯು ಮುಸ್ಲಿಂ ಸಮುದಾಯದಕ್ಕೆ ಸೇರಿರುವ ಕಾರಣ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಜೂನ್‌ 30ರಂದು 17 ವರ್ಷದ ಬಾಲಕಿಯು ನಾಪತ್ತೆಯಾಗಿದ್ದಳು. ಇದರಿಂದ ಭಯಭೀತರಾದ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಬಾಲಕಿಯ ಸ್ನೇಹಿತರು, ಸಂಬಂಧಿಕರಿಗೆಲ್ಲ ಕರೆ ಮಾಡಿ ಎಲ್ಲೆಡೆ ಪರಿಶೀಲನೆ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಬಾಲಕಿಯ ಸಣ್ಣ ಸುಳಿವು ಸಿಗದ ಕಾರಣ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ಶಿಕ್ಷಕಿಯೂ ನಾಪತ್ತೆಯಾಗಿದ್ದಳು. ಹಾಗಾಗಿ ಶಿಕ್ಷಕಿಯೇ ನಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಶಿಕ್ಷಕಿಯ ಮೇಲೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ತನಿಖೆ ನಡೆಸಿದ ವೇಳೆ, ಶಿಕ್ಷಕಿ ಹಾಗೂ ಬಾಲಕಿಯು ತುಂಬ ದಿನಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದರು ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ. ಬಾಲಕಿಗೆ ಶಿಕ್ಷಕಿಯೊಂದಿಗೆ ಓಡಿ ಹೋಗಲು ಒಪ್ಪಿಗೆ ಇದ್ದರೂ ಕೂಡ ಅದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಶಿಕ್ಷಕಿಯ ಮೇಲೆ ಅಪಹರಣದ ಕೇಸ್ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಇದನ್ನು ಓದಿ: Ajith Rai: ಬಂಧನದಲ್ಲಿರುವ ಬೇನಾಮಿ ಆಸ್ತಿಯ ಒಡೆಯ ಅಜಿತ್ ರೈ ಸದ್ದಿಲ್ಲದೆ ವರ್ಗಾವಣೆ !