Hassan Murder: ನಡು ಪೇಟೆಯಲ್ಲೇ ರೌಡಿ ಶೀಟರ್ ಮಾಸ್ತಿಗೌಡನ ಅಟ್ಟಾಡಿಸಿ ಮಚ್ಚು ಬೀಸಿ ಬರ್ಬರ ಹತ್ಯೆ !

Hassan Murder:ನಟೋರಿಯಸ್ ರೌಡಿಶೀಟರ್ ಮಾಸ್ತಿಗೌಡ ಅಲಿಯಾಸ್ ಕೃಷ್ಣ ಎಂಬಾತನನ್ನು ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Hassan Murder) ಮಾಡಲಾಗಿದೆ.

 

 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿ, ರೌಡಿ ಶೀಟರ್ ಮಾಸ್ತಿಗೌಡ ಅಲ್ಯಾಸ್ ಕೃಷ್ಣ ಎಂಬಾತನನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ. ಹಾಸನದ ನಡು ಪೇಟೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

 

ಪಟ್ಟಣದ ಬೆಂಗಳೂರು ಮಂಗಳೂರು ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗದಲ್ಲಿ ಸ್ವಾಮಿ ಗೌಡ ನಿಂತಿದ್ದು, ಆಗ ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳ ತಂಡ ಮಾಸ್ತಿಗೌಡನ ಮೇಲೆ ಯದ್ವಾ ತದ್ವಾ ಮಚ್ಚು ಬೀಸಿದೆ. ಹಾಗೆ ಹತ್ಯೆ ಮಾಡಿದ ತಂಡ ನಂತರ ಪರಾರಿಯಾಗಿದೆ.

 

ಮಾಸ್ತಿಗೌಡನ ಬರ್ಬರ ಕೊಲೆಯಿಂದ ಚನ್ನರಾಯಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದು, ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳವನ್ನು ಆಕ್ರಮಿಸಿಕೊಂಡು ನಿಂತರು. ಕೂಡಲೇ ಸ್ಥಳಕ್ಕೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್, ನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎಂ. ವಸಂತ್ ಆಗಮಿಸಿತ್ತು. ಜತೆಗೆ ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಇದೀಗ ಹತ್ಯೆ ಆದ ಮಾಸ್ತಿಗೌಡ ಹಲವು ಕಾನೂನು ಬಾಹಿರ ಚಟುವಟಿಕೆಗಳ ಆರೋಪದಡಿ ಗಡಿ ಪಾರಾಗಿದ್ದ ವ್ಯಕ್ತಿ. ಈಗ ಕಲಬುರಗಿ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದು ಈತ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಅದೇ ಮತ್ತು ಇತರ ಕಾರಣಕ್ಕೆ ಗಡೀಪಾರು ಆಗಿದ್ದ.

ಇದನ್ನೂ ಓದಿ :ಹಾಡು ಗುಣುಗಿಕೊಂಡು ಬೈಕ್ ಸವಾರಿ ಮಾಡುತ್ತ ಸಾಗುವಾಗ.. ಬೈಕಲ್ಲಿ ಧುತ್ತನೆ ಎದ್ದು ನಿಂತ ಹಾವು !

Leave A Reply

Your email address will not be published.