Home latest Jharkhand: ಪ್ರಕೃತಿಯ ವೈಶಿಷ್ಟ್ಯವೋ ಅಥವಾ ವಿನಾಶ ಕಾಲವೋ! ಈ ಪರ್ವತದಿಂದ ಹೊರ ಬರುತ್ತಿದೆ ʼರಕ್ತʼ ನೀರು!!!

Jharkhand: ಪ್ರಕೃತಿಯ ವೈಶಿಷ್ಟ್ಯವೋ ಅಥವಾ ವಿನಾಶ ಕಾಲವೋ! ಈ ಪರ್ವತದಿಂದ ಹೊರ ಬರುತ್ತಿದೆ ʼರಕ್ತʼ ನೀರು!!!

Jharkhand

Hindu neighbor gifts plot of land

Hindu neighbour gifts land to Muslim journalist

Jharkhand: ಇದೊಂದು ವಿಚಿತ್ರ ಘಟನೆ. ಪರ್ವತಗಳಿಂದ ಚಿಲುಮೆಗಳು ಹೊರಬರುವುದು ನೀವು ನೋಡಿರಬಹುದು. ಆದರೆ ಪರ್ವತಗಳಿಂದ ರಕ್ತ ಹೊರಬರುವುದನ್ನು ನೀವು ಎಂದಾದರೂ ಕಂಡಿದ್ದೀರಾ? ಆದರೆ ಇದು ನಿಜ. ಬೆಟ್ಟದಿಂದ ರಕ್ತ-ಕೆಂಪು ದ್ರವ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಜನರಲ್ಲಿ ಕುತೂಹಲ ಮೂಡಿದೆ. ಇದು ಪ್ರಕೃತಿಯ ವಿನಾಶದ ಸಂಕೇತವೇ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಜಾರ್ಖಂಡ್‌ನ(Jharkhand) ಸಾಹಿಬ್‌ಗಂಜ್ ಜಿಲ್ಲೆಯ ಮಂದಾರೋ ಬ್ಲಾಕ್ ಪ್ರದೇಶದ ಕೀರ್ತಾನಿಯಾ ಬೆಲ್‌ಭದ್ರಿ ಪರ್ವತದಿಂದ ರಕ್ತದಂತಹ ಕೆಂಪು ದ್ರವ ಹೊರಬರುವುದನ್ನು ನೋಡಲು ಅಪಾರ ಜನ ಸೇರುತ್ತಿದ್ದಾರೆ. ಪರ್ವತದಿಂದ ಹೊರಬರುವ ಕೆಂಪು ರಕ್ತದಂತಹ ವಸ್ತುವನ್ನು ಕೆಲವರು ದೈವಿಕ ಶಕ್ತಿಯ ರೂಪ ಎಂದು ಹೇಳುತ್ತಿದ್ದರೆ ಇನ್ನು ಕೆಲವರು ಇದನ್ನು ಪ್ರಕೃತಿಯ ಪವಾಡ ಎಂದು ಕರೆಯುತ್ತಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಿಲ್ಲಾಡಳಿತವು ಈ ಸ್ಥಳಗಳನ್ನು ಬಿದಿರುಗಳಿಂದ ಸುತ್ತುವರಿದಿದ್ದಾರೆ. ಕೀರ್ತನಾಯ ಬೇಲ್ಭದ್ರಿ ಪರ್ವತವನ್ನು ತಲುಪುವ ಸಾವಿರಾರು ಜನರು ತಮ್ಮ ಕೈಯಲ್ಲಿ ಕೆಂಪು ಪದಾರ್ಥವನ್ನು ತೆಗೆದುಕೊಂಡು ಮಾನವ ರಕ್ತದಂತಹ ಕೆಂಪು ದ್ರವ ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.

ಜಲ ಸಂಗ್ರಹಾಗಾರ ಮತ್ತು ಆಮ್ಲಜನಕದ ಒತ್ತಡದಿಂದಾಗಿ ಮೇಲ್ಮೈಯಲ್ಲಿ ಈ ರೀತಿ ಸಂಭವಿಸುತ್ತದೆ. ಆದರೆ ಈ ಕೆಂಪು ಪದಾರ್ಥ ಯಾವುದು ಎಂದು ತನಿಖೆ ನಡೆಸಲು ಭೂವಿಜ್ಞಾನಿಗಳ ತಂಡ ಸ್ಥಳಕ್ಕೆ ತೆರಳಿ ಸಂಶೋಧನೆ ನಡೆಸಲಿದೆ.

ರಾಜಮಹಲ್ ಪರ್ವತದಲ್ಲಿ ಅನೇಕ ಅಮೂಲ್ಯ ಪದಾರ್ಥಗಳಿವೆ. ಈ ಬಗ್ಗೆ ಭೂವಿಜ್ಞಾನಿಗಳ ತಂಡ ನಿರಂತರ ಸಂಶೋಧನೆ ನಡೆಸುತ್ತಿದೆ. ಪರ್ವತದಿಂದ ಹೊರಬರುವ ವಸ್ತು ಮೌರಾಂಗ್ ಆಗಿರಬಹುದು ಎಂದು ಕೆಲವರು ಹೇಳುತ್ತಾರೆ, ಅದು ನೀರಿನ ಸಂಪರ್ಕಕ್ಕೆ ಬಂದ ನಂತರ ಕೆಂಪು ಬಣ್ಣದಂತೆ ಪರ್ವತದಿಂದ ಕೆಳಗೆ ಬೀಳುತ್ತದೆ. ಆದಾಗ್ಯೂ, ಪರ್ವತದಿಂದ ಹೊರಬರುವ ರಕ್ತದಂತಹ ಕೆಂಪು ದ್ರವ ಯಾವುದು ಮತ್ತು ಅದು ಯಾವ ಕಾರಣಗಳಿಗಾಗಿ ಹೊರಬರುತ್ತಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಹಳದಿ ಹಲ್ಲು ಸೇರಿದಂತೆ ಈ 5 ಸಮಸ್ಯೆಯನ್ನು ತೆಗೆದುಹಾಕುವಲ್ಲಿ ತೆಂಗಿನೆಣ್ಣೆ ರಾಮಬಾಣ!