Home Fashion Louis Vuitton Handbag: ಅಬ್ಬಬ್ಬಾ.. ಸಾಸಿವೆಗಿಂತಲೂ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷಕ್ಕೆ ಸೇಲ್… !!...

Louis Vuitton Handbag: ಅಬ್ಬಬ್ಬಾ.. ಸಾಸಿವೆಗಿಂತಲೂ ಚಿಕ್ಕದಾದ ಹ್ಯಾಂಡ್‌ಬಾಗ್ ಬರೋಬ್ಬರಿ 51 ಲಕ್ಷಕ್ಕೆ ಸೇಲ್… !! ಏನಿದರ ಮರ್ಮ..?

Louis Vuitton handbag
Image source- Asianet suvarna news

Hindu neighbor gifts plot of land

Hindu neighbour gifts land to Muslim journalist

Louis Vuitton Handbag: ಆನ್‌ಲೈನ್ ಹರಾಜಿನಲ್ಲಿ (Online Auction) ಉಪ್ಪಿನ ಕಣಕ್ಕಿಂತಲೂ ಚಿಕ್ಕದಾಗಿರುವ ಹ್ಯಾಂಡ್‌ಬ್ಯಾಗ್‌ವೊಂದನ್ನು ಬರೋಬ್ಬರಿ 63,000 ಡಾಲರ್‌ಗೆ (ಅಂದಾಜು 51.6 ಲಕ್ಷ ರೂ.) ಮಾರಾಟ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಹೌದು, ವಿಶ್ವದಲ್ಲಿ ಎಂತೆಂತ ವಸ್ತುಗಳು ಬಿಲಿಯನ್, ಮಿಲಿಯನ್ ಡಾಲರ್ ಗಳಿಗೆ ಹರಾಜಾಗಿರುವ ಬಗ್ಗೆ ನೀವು ಕೇಳಿರಬಬುದು. ಆದರೆ ಪ್ಯಾರಿಸ್‌ ಫ್ಯಾಶನ್‌ ವೀಕ್‌ನ(Paris fashion week) ಹರಾಜಿನಲ್ಲಿ ಕಲ್ಲುಪ್ಪಿಗಿಂತ ಚಿಕ್ಕದಾಗಿರುವ ಹಳದಿ ಹಾಗೂ ಹಸಿರು ಬಣ್ಣದ ಹ್ಯಾಂಡ್‌ಬ್ಯಾಗ್‌(Louis Vuitton Handbag) ವೊಂದು ಬರೋಬ್ಬರಿ 51 ಲಕ್ಷ ರೂಪಾಯಿಗೆ ಹರಾಜಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹಾಗಿದ್ರೆ ಏನಿದರ ವಿಶೇಷತೆ, ಇಷ್ಟು ಚಿಕ್ಕದಾದರೂ ಯಾಕಿಷ್ಟು ಪ್ರಾಮುಖ್ಯತೆ ಅನ್ನೋ ಕುತೂಹಲವೇ?

ಹೌದು , ಹಳದಿ(Yellow) ಮಿಶ್ರಿತ ಹಸಿರು(Green) ಬಣ್ಣದ, ಕೇವಲ 0.003 ಇಂಚುಗಳಿಂತ ಕಡಿಮೆ ಗಾತ್ರ ಹೊಂದಿರುವ ಹ್ಯಾಂಡ್‌ಬ್ಯಾಗ್‌ಅನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗಿದ್ದು, ಬರೋಬ್ಬರಿ 51 ಲಕ್ಷ ರೂಪಾಯಿಗಳಿಗೆ ಮಾರಲಾಗಿದೆ. ಅಂದಹಾಗೆ ಈ ಹ್ಯಾಂಡ್‌ಬ್ಯಾಗ್‌ ವಿಶ್ವದ ದುಬಾರಿ ಹ್ಯಾಂಡ್‌ಬ್ಯಾಗ್‌ಗಳನ್ನು ತಯಾರಿಸುವಲ್ಲಿಯೇ ಹೆಸರುವಾಸಿಯಾಗಿರುವ ಲೂಯಿಸ್‌ ವಿಟಾನ್‌ ಕಂಪನಿಯ ಬ್ರ್ಯಾಂಡ್‌ನದ್ದಾಗಿದೆ.

ಅಂದಹಾಗೆ ಈ ತಿಂಗಳ ಆರಂಭದಲ್ಲಿ ಎಮ್‌ಎಸ್‌ಸಿಹೆಚ್‌ಎಎಫ್(MSCHAF), ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ(Instagram) ‘ಹ್ಯಾಂಡ್‌ಬ್ಯಾಗ್ ಸೂಜಿಯ ಕಣ್ಣಿನ ಮೂಲಕ ಹಾದುಹೋಗುವಷ್ಟು ಕಿರಿದಾಗಿದೆ ಮತ್ತು ಸಮುದ್ರದಲ್ಲಿ ಸಿಗುವ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದೆ’ ಎಂಬ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದ್ದು, ಆನ್‌ಲೈನ್‌(Online) ನಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಇನ್ನು ಲಭ್ಯ ಮಾಹಿತಿಯ ಪ್ರಕಾರ, ಈ ಬ್ಯಾಗ್‌ಅನ್ನು ಎರಡು ಫೋಟೋ ಪಾಲಿಮರೀಕರಣವನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು 3D ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುತ್ತದೆ. ಈ ಬ್ಯಾಗ್‌ನೊಂದಿಗೆ ಡಿಜಿಟಲ್ ಡಿಸ್‌ಪ್ಲೇ ಹೊಂದಿರುವ ಮೈಕ್ರೋಸ್ಕೋಪ್‌ನೊಂದಿಗೆ ಮಾರಾಟ ಮಾಡಲಾಗಿದೆ. ಖರೀದಿದಾರರು ಈ ಬ್ಯಾಗ್‌ಅನ್ನು ನೋಡಬೇಕಾದರೆ, ಮೈಕ್ರೋಸ್ಕೋಪಿಕ್‌ ಮೂಲವೇ ನೋಡಲು ಸಾಧ್ಯವಾಗಿದೆ. ಈ ಬ್ಯಾಗ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಈ ಬ್ಯಾಗ್‌ನಿಂದ ಏನು ಪ್ರಯೋಜನ ಎಂದು ಕಾಮೆಂಟ್‌ ಮಾಡಿದ್ದಾರೆ.

ಎಮ್‌ಎಸ್‌ಸಿಹೆಚ್‌ಎಫ್ ಅಮೆರಿಕಾದ ನ್ಯೂಯಾರ್ಕ್‌ನ (New York) ಬ್ರೂಕ್ಲಿನ್‌ನಲ್ಲಿರುವ ಕಲಾ ಸಮೂಹವಾಗಿದ್ದು, 2016ರಲ್ಲಿ ಪ್ರಾರಂಭವಾಯಿತು. ಇದು ಇಂಥದ್ದೇ ಬ್ಯಾಗ್‌ಗಳು, ಹರಾಜಿಗೆ ಆಗುವಂಥ ಉತ್ಪನ್ನಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದೆ. 2021ರಲ್ಲಿ MSCHF ಬಿರ್ಕಿನ್‌ ಬ್ಯಾಗ್‌ಗಳಿಂದ ಸ್ಯಾಂಡಲ್‌ಗಳನ್ನು ತಯಾರಿಸಿತ್ತು. ಇದರ ಪ್ರತಿ ಚೀಲದ ಬೆಲೆ ಲಕ್ಷಗಟ್ಟಲೆ. ಲೂಯಿ ವಿಟಾನ್ ಬ್ಯಾಗ್ ಕಂಪನಿಯು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಯ ಬ್ಯಾಗ್‌ಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Madhyapradesh high court: ಇನ್ಮುಂದೆ ಹುಡುಗಿಯರದ್ದು ಇಷ್ಟಿದ್ರೂ ಸಾಕು, ಲವ್ ಮಾಡ್ಬೋದು ಎಂದ ಕೋರ್ಟ್ ! ಹುಡುಗರಿಗೆ ಹೊಡೀತ್ ಬಂಪರ್ ಲಾಟ್ರಿ !!