Madhyapradesh high court: ಇನ್ಮುಂದೆ ಹುಡುಗಿಯರದ್ದು ಇಷ್ಟಿದ್ರೂ ಸಾಕು, ಲವ್ ಮಾಡ್ಬೋದು ಎಂದ ಕೋರ್ಟ್ ! ಹುಡುಗರಿಗೆ ಹೊಡೀತ್ ಬಂಪರ್ ಲಾಟ್ರಿ !!
Latest national news Madhya Pradesh High Court Appeals Centre for Lowering Age of Consent in physical abbuse case
Madhya pradesh high court : ಪ್ರೀತಿ- ಪ್ರೇಮಾಂಕುರ(Love)ಗಳು ಚಿಗುರೊಡೆಯುವುದೇ ಹದಿಹರಯದಲ್ಲಿ. ಇಂತಹ ಸಮಯದಲ್ಲಿ ಭಾವನೆಗಳಿಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ. ಯಾರ ಮೇಲೆ, ಯಾವಾಗ ಬೇಕಾದರೂ ಇದು ಆಗಬಹುದು. ಹಾಗಾಂತ ಪ್ರೀತಿ ಮೂಡಿದ ಕೂಡಲೆ ಆಗಿಂದಾಗ್ಗೆ ಹುಡುಗ-ಹುಡಗಿ ಮದುವೆ ಆಗುವುದೋ, ಪರಸ್ಪರ ಕೂಡುವುದೋ ಮಾಡುವಂತಿಲ್ಲ. ಯಾಕೆಂದರೆ ನಮಗೆ ನಾವೇ ರೂಪಿಸಿರುವ ಕಾನೂ(Law)ನುಗಳು ಇವೆಲ್ಲಕ್ಕೂ ಕಡಿವಾಣ ಹಾಕಿದೆ. ಭಾವನೆಗಳಿಗೆ ಪ್ರಾಯದ ಲೆಕ್ಕವಿಲ್ಲವೆಂದರೂ ನಮ್ಮ ಕಾನೂಗಳಲ್ಲಿ ಇದರ ಲೆಕ್ಕ ಪಕ್ಕಾ ಇರಬೇಕು. ಆದರೀಗ ಈ ಕಾನೂನು ಸಡಿಲಾಗುವ ಸಮಯ ಸನ್ಹಿತವಾಗಿದೆ. ಕೋರ್ಟ್ ಒಂದು ಈ ಕುರಿತು ಸಲಹೆಯಿತ್ತು, ಮನವಿ ಮಾಡಿದೆ.
ಹೌದು, ಹುಡುಗ-ಹುಡುಗಿಯರು ಒಬ್ಬರನ್ನೊಬ್ಬರು ಮೆಚ್ಚುವ ವಿಚಾರವಾಗಿ, ಸಂಬಂಧ ಬೆಳೆಸುವ ಕುರಿತಾಗಿ ದೇಶಾದ್ಯಂತ ಕೆಲವು ಸಮಯಗಳಿಂದ ಹಲವಾರು ರೀತಿ ಚರ್ಚೆ ಆಗುತ್ತಲೇ ಇದೆ. ಆದರೀಗ ಈ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್(Madhya pradesh high court) ಗ್ವಾಲಿಯರ್ ಪೀಠ ಬಹಳ ಮುಖ್ಯವಾದ ಅಂಶವನ್ನು ಒತ್ತಿಹೇಳಿದೆ. ಹುಡುಗ ಮತ್ತು ಹುಡುಗಿಯ ನಡುವಿನ ಒಮ್ಮತದ ಸಂಬಂಧದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸಲು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಮನವಿ ಮಾಡಿದೆ.
ಕೋರ್ಟ್ ನೀಡಿದ ಸಲಹೆ ಏನು..?
“ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ಇದರಿಂದ ಮಕ್ಕಳು ಕೂಡ ಮಾನಸಿಕವಾಗಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಅಲ್ಲದೆ ಇಂಟರ್ ನೆಟ್(Internet) ನಿಂದಾಗಿ ಹದಿಹರೆಯದವರು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ ಮತ್ತು ಬುದ್ಧಿವಂತರಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ತೆಗೆದುಕೊಂಡ ಹೆಜ್ಜೆಗಳು ಕೆಲವೊಮ್ಮೆ ಅವರ ಭವಿಷ್ಯವನ್ನು ಕತ್ತಲೆಯಲ್ಲಿ ಇಡುತ್ತವೆ”.
“ಅಲ್ಲದೆ ಅನೇಕ ಹದಿಹರೆಯದವರು ಮತ್ತು ಯುವಕರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂತ್ರಸ್ತ ಹುಡುಗಿಯೊಂದಿಗೆ ಸಂಬಂಧವನ್ನು ಬೆಳೆಸುತ್ತಾರೆ. ಇದರ ನಂತರ, ಪೊಲೀಸರು ಅವರ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಅತ್ಯಾಚಾರದಂತಹ ಅಪರಾಧಗಳನ್ನು ದಾಖಲಿಸುತ್ತಾರೆ. ವಿರುದ್ಧ ಲಿಂಗದ ಆಕರ್ಷಣೆಯಿಂದ ರಚಿಸಲಾದ ಸಂಬಂಧಗಳಲ್ಲಿ ಹುಡುಗರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ, ಆದರೆ ಅವರು ಅಜ್ಞಾನದಿಂದ ವರ್ತಿಸುತ್ತಾರೆ. ಇದರಿಂದಾಗಿ ಅನೇಕ ಹದಿಹರೆಯದವರು ಅನ್ಯಾಯಕ್ಕೆ ಬಲಿಯಾಗುತ್ತಾರೆ” ಎಂದು ಹೇಳಿದೆ. ಹೀಗಾಗಿ ಹುಡುಗ ಮತ್ತು ಹುಡುಗಿಯ ನಡುವಿನ ಒಮ್ಮತದ ಸಂಬಂಧದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸಲು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ಮನವಿ ಮಾಡಿದೆ.
ಕೋರ್ಟ್ ಹೀಗೆ ಹೇಳುಲ ಕಾರಣ?
18 ಜನವರಿ 2020 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನ(Gwaliyar) ತಾಟಿಪುರ(Taatipura) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14ರ ಹುಡುಗಿಯೊಬ್ಬಳು ರಾಹುಲ್ ಜಾದವ್ ಎಂಬುವವರ ಬಳಿ ಕೋಚಿಂಗ್ ಗಾಗಿ ಹೋಗಿದ್ದಳು. ಕೋಚಿಂಗ್ ಡೈರೆಕ್ಟರ್ ರಾಹುಲ್ ಜಾಧವ್(Rahul jadav) ಆಕೆಗೆ ಜ್ಯೂಸ್ ನೀಡಿ, ನಂತರ ಆಕೆ ಮೂರ್ಛೆ ಹೋಗುವಂತೆ ಮಾಡಿ, ಆಕೆಯೊಂದಿಗೆ ಸಂಬಂಧ ಬೆಳೆಸಿ ಆಕೆಯ ಅಶ್ಲೀಲ ವಿಡಿಯೋ ಮಾಡಿದ್ದ. ಈ ವಿಡಿಯೋವನ್ನು ವೈರಲ್ ಮಾಡಿ ಸಂಬಂಧ ಬೆಳೆಸುವುದಾಗಿ ಬೆದರಿಕೆ ಹಾಕುವ ಮೂಲಕ ರಾಹುಲ್ ಜಾಧವ್ ಆಕೆಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಕೊನೆಗೆ ಆಕೆ ಗರ್ಭಿಣಿ(Pregnant) ಕೂಡ ಆದಳು.
ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿತು. ಕೊನೆಗೆ ರಾಹುಲ್ ಜಾಧವ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಅವರ ವಿರುದ್ಧ ಪ್ರಕರಣ ದಾಖಲಾಯಿತು. ಈ ಸಂಬಂಧ 17 ಜುಲೈ 2020 ರಂದು ರಾಹುಲ್ ಜಾಧವ್ ನನ್ನು ಬಂಧಿಸಲಾಯಿತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಈ ನಡುವೆ ನ್ಯಾಯಾಲಯದ ಅನುಮತಿ ಪಡೆದ ನಂತರ 2020ರ ಸೆಪ್ಟೆಂಬರ್‌ನಲ್ಲಿ ಗರ್ಭಪಾತವನ್ನೂ ಮಾಡಿಸಿಕೊಂಡಿದ್ದಳು. ಈ ನಡುವೆ ಆ ಹುಡುಗಿ ಮದುವೆಯ ನೆಪದಲ್ಲಿ ತನ್ನ ದೂರದ ಸಂಬಂಧಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿ ಆರೋಪಿಸಿದ್ದಳು. ಇಬ್ಬರ ಒಪ್ಪಿಗೆಯೊಂದಿಗೆ ಮಾತ್ರ ಪರಸ್ಪರ ಸಂಬಂಧ ಏರ್ಪಟ್ಟಿದೆ ಎಂದು ರಾಹುಲ್ ಪರ ವಕೀಲ ಬನ್ಸಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಅಂತಹ ಪರಿಸ್ಥಿತಿಯಲ್ಲಿ, ತನ್ನ ಕಕ್ಷಿದಾರನನ್ನು ತಪ್ಪಾಗಿ ಸಿಲುಕಿಸಲಾಗಿದೆ. ತಮ್ಮ ಕಕ್ಷಿದಾರ ರಾಹುಲ್ ಜಾಧವ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಎಲ್ಲಾ ವಾದಗಳನ್ನು ಆಲಿಸಿದ ಹೈಕೋರ್ಟ್ ರಾಹುಲ್ ಜಾಧವ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್(FIR) ಅನ್ನು ರದ್ದುಗೊಳಿಸಿದ್ದು, ಇಂಟರ್‌ನೆಟ್ ಯುಗದಲ್ಲಿ ಹದಿಹರೆಯದವರಲ್ಲಿ ಪ್ರೌಢಾವಸ್ಥೆಗೆ ಮುನ್ನ ಪರಸ್ಪರ ಸಂಬಂಧದ ವಯಸ್ಸನ್ನು 18 ರಿಂದ 16 ಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಯುವಕರಿಗೆ ಅನ್ಯಾಯವಾಗದಂತೆ ವರ್ಷವನ್ನು ಮರುಪರಿಶೀಲಿಸಿ ಎಂದು ಹೇಳಿದೆ.