Liquor Bottles at home limits: ಮನೆಯಲ್ಲಿ ಮಿನಿ ಬಾರ್ ಇಟ್ಕೊಳ್ಳೋ ಪ್ಲಾನ್ ಇದ್ಯಾ? ಹಾಗಾದ್ರೆ ಎಷ್ಟು ಮದ್ಯದ ಬಾಟಲಿಗಳನ್ನು ಇಟ್ಟುಕೊಳ್ಳಬಹುದು ಗೊತ್ತಾ ?
Latest news political news how many liquor bottles can be kept at home
Liquor Bottles at home limits: ಬದುಕು ಈಗ ಬದಲಾಗುತ್ತಿದೆ. ಮೂಲಭೂತ ಅವಶ್ಯಕತೆಗಳನ್ನು ಮೀರಿ ದಿನ ದಿನ ಹಿಗ್ಗಿಕೊಂಡು ಬದುಕು ಬೆಳೆಯುತ್ತಿದೆ. ಒಳ್ಳೆಯ ಮನೆ, ಮಾಡರ್ನ್ ಕಿಚನ್, ವಿಶಾಲವಾದ ಹಾಲ್, ಹಲವು ಅಟ್ಯಾಚ್ಡ ಬೆಡ್ ರೂಂ, ಸ್ಟಡಿ ರೂಂ, ಪೂಜಾ ಕೋಣೆ ಇತ್ಯಾದಿ ರೂಂ ಪ್ಲಾನಿಂಗ್ ಮಾಡೋದನ್ನು ನಾವು ಎಲ್ಲಾ ಮನೆಗಳಲ್ಲೂ ನೋಡುತ್ತೇವೆ.
ಇವೆಲ್ಲದರ ಜತೆಗೆ ಮನೆಯಲ್ಲಿ ಜಾಗ ಮತ್ತು ಖರ್ಚು ಮಾಡಲು ದುಡ್ಡು ಇದ್ದವರು ಜಿಮ್ ರೂಂ ಕೂಡ ಹೊಂದಿರುತ್ತಾರೆ. ವಿಶಾಲವಾದ ಜಾಗ ಹೊಂದಿರುವವರು ಕೈತೋಟದ ಜೊತೆಗೆ ಸ್ವಿಮ್ಮಿಂಗ್ ಪೂಲ್ ಕೂಡಾ ಪ್ಲಾನ್ ಮಾಡೋದು ಸಹಜ. ಇವೆಲ್ಲದ ಜೊತೆಗೆ, ಬದುಕನ್ನು ಇನ್ನೊಂದು ಅಷ್ಟು ಕಲರ್ಫುಲ್ ಮಾಡಲು ಮನೆಯಲ್ಲಿ ಬಾರ್ (Open Bar at Home) ಓಪನ್ ಮಾಡೋದು ಸಹಜ. ವೀಕೆಂಡುಗಳಲ್ಲಿ ಮಹಡಿಯ ಪೋರ್ಟಿಕೋದಲ್ಲಿ ಕೂತು ತಣ್ಣಗಿನ ನೊರೆಯಾಡುವ ಬೀರು ಹೀರುತ್ತಾ, ಹುರಿದ ಗೋಡಂಬಿ ಮತ್ತು ಸಾಲ್ಟ್ ಡ್ ಬಾದಾಮಿ ಮೆಲ್ಲುತ್ತಾ, ಹುಸಿ ನಗುತ್ತಾ, ಶೀಪಿಷ್ ಆಗಿ ಹಾಡು ಗುನುಗುತ್ತಾ ಇರಲು ಮನೆಯ ಒಳಗೇ ಒಂದು ಸಣ್ಣ ಬಾರು ಬೇಕಾಗಿದೆ. ಇದು ರಸಿಕ ಮನಸ್ಸಿನ ಮನೆಯೊಡೆಯರ (Liquor Bottles at home limits) ಬಹುದೊಡ್ಡ ಕನಸು ಕೂಡಾ ಹೌದು.
ಆದ್ರೆ ಮನೆಯೊಳಗೆ ಮಿನಿ ಬಾರ್ ಮೆಂಟೇನ್ ಮಾಡಲು ಸರ್ಕಾರದಿಂದ ಕಂಡೀಷನ್ ಗಳಿವೆ ಗೊತ್ತಾ ? ಇದರ ಕುರಿತಂತೆ ಎಲ್ಲರೂ ಮಾಹಿತಿಯನ್ನು ಹೊಂದಿರುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಹೌದು ಮನೆಯಲ್ಲಿ ನೀವು ಇಂತಿಷ್ಟೇ ಪ್ರಮಾಣದ ಮದ್ಯವನ್ನು (Alcohol) ಅನ್ನು ಇಟ್ಟುಕೊಳ್ಳಬಹುದು ಎಂಬುದರ ಕುರಿತಂತೆ ಕೂಡ ನಿಯಮವಿದೆ. ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಎಷ್ಟು ಆಲ್ಕೋಹಾಲ್ ಅನ್ನು ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಇರುವಂತಹ ನಿಯಮ, ಕಾನೂನು ಕಟ್ಟಳೆಗಳೇನು (Rules & Regulations) ಎಂಬುದನ್ನು ತಿಳಿಯೋಣ ಬನ್ನಿ.
ದೆಹಲಿ ಹೈಕೋರ್ಟ್ ಹೇಳಿರುವಂತೆ 25 ಹಾಗೂ 25 ವರ್ಷದ ಮೇಲೆ ಇರುವಂತಹ ವ್ಯಕ್ತಿಗಳು ಮನೆಯಲ್ಲಿ ಆಲ್ಕೋಹಾಲ್ ಇಟ್ಟುಕೊಳ್ಳಲು ಅರ್ಹ ವಯಸ್ಸನ್ನು ಹೊಂದಿರುತ್ತಾರೆ. ಹೀಗಾಗಿ 18 ಲೀಟರ್ ಗಳಷ್ಟು Beer, Wine ಹಾಗೂ Alcopop ( Breezer ತರಹದ ಉತ್ಪನ) ಗಳನ್ನು ಮತ್ತು 9 ಲೀಟರ್ ಗಳಷ್ಟು ಹಾರ್ಡ್ ಲಿಕ್ಕರ್ ಗಳಾದ ವಿಸ್ಕಿ, ಬ್ರಾಂಡಿ, ರಮ್ಮು ಮುಂತಾದವುಗಳನ್ನು ಇಟ್ಟುಕೊಳ್ಳುವಂತಹ ಅಧಿಕಾರವನ್ನು ಹಾಗೂ ಕಾನೂನು ಪ್ರಕಾರ ಅರ್ಹತೆಯನ್ನು ಕೂಡ ಹೊಂದಿರುತ್ತಾರೆ ಎಂಬುದಾಗಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಒಂದು ಪ್ರಕರಣದಲ್ಲಿ ಹೇಳಿದೆ. ತಪ್ಪಿದರೆ, ಪೊಲೀಸರು ಇವರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳಲು ಅರ್ಹರು.
ಆದರೆ ಗಮನಿಸಿ: ಮೇಲೆ ಹೇಳಿದ 18 ಲೀಟರ್ ಮತ್ತು 9 ಲೀಟರ್ಗಳಷ್ಟು ಮದ್ಯವನ್ನು ಮನೆಯ ಪ್ರತಿ ಸದಸ್ಯ ಹೊಂದಬಹುದು. ಅಂದರೆ, 25 ವರ್ಷಕ್ಕೂ ಅಧಿಕ ವಯಸ್ಸಿನ ನಾಲ್ಕು ಜನರಿರುವ ಮನೆಯಲ್ಲಿ ಸುಮಾರು 100 ಲೀಟರ್ ಗಳಿಗಿಂತಲೂ ಹೆಚ್ಚಿನ ಮದ್ಯವನ್ನು ಶೇಖರಿಸಬಹುದಾಗಿದೆ. ಇದು 2022 ರಲ್ಲಿ ದೆಹಲಿ ಹೈಕೋರ್ಟ್ ನಲ್ಲಿ ಬಂದ ಕೇಸೊಂದರ ವಿಷಯದಲ್ಲಿ ಗ್ರಾಹಕರ ಪರವಾಗಿ ತೀರ್ಪು ನೀಡಿದ್ದ ಹೈಕೋರ್ಟ್ ಮನೆಯ ಪ್ರತಿ ವ್ಯಕ್ತಿ ಕೂಡಾ 18+9 ಲೀಟರ್ ಗಳಷ್ಟು ಮದ್ಯವನ್ನು ಹೊಂದಬಹುದು ಎಂದು ಹೇಳಿತ್ತು. ಆದರೆ ಈ ತೀರ್ಪನ್ನು ದೆಹಲಿ ರಾಜ್ಯದ ಮಟ್ಟಿಗೆ ವ್ಯಾಪ್ತಿಗೆ ಮಾತ್ರ ಸೀಮಿತ ಮಾಡಿಕೊಳ್ಳೋಣ. ಈಗ ಕರ್ನಾಟಕದಲ್ಲಿ ಎಷ್ಟು ಪ್ರಮಾಣದ ಮಧ್ಯವನ್ನು ಮನೆಯಲ್ಲಿ ಸ್ಟೋರ್ ಮಾಡಬಹುದು ಎಂದು ತಿಳಿದುಕೊಳ್ಳುವ ಸಮಯ.
ಕರ್ನಾಟಕದಲ್ಲಿ ಒಟ್ಟು 18.2 ಲೀಟರ್ ಕಂಟ್ರಿ ಬಿಯರ್, 9.1 ಲೀಟರ್ ಆಮದು ಮಾಡಿಕೊಂಡ ವಿದೇಶಿ ಮದ್ಯ, 4.5 ಲೀಟರ್ ಫೋರ್ಟಿಫೈಡ್ ವೈನ್, 9 ಲೀಟರ್ ಫ್ರೂಟ್ ವೈನ್, 2.3 ಲೀಟರ್ ಲಿಕ್ಕರ್ (ಆಮದು ಮಾಡಿಕೊಂಡ ವಿದೇಶಿ ಮದ್ಯವನ್ನು ಹೊರತುಪಡಿಸಿ) ಮತ್ತು ಕರ್ನಾಟಕದಲ್ಲಿ ತಯಾರಿಸಿದ 2.3 ಲೀಟರ್ ಮದ್ಯಕ್ಕೆ ಅನುಮತಿಯ ನೀಡಲಾಗಿದೆ. ಅಲ್ಲದೆ ಮಾರಾಟವನ್ನು ಅನುಮತಿಸುವ ಪ್ರದೇಶಗಳು, ಅಂದರೆ, ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳ್ಳು ಅಂದರೆ ಶೇಂದಿಯನ್ನು ಎಷ್ಟು ಬೇಕಾದರೂ ಹೊಂದಲು ಅವಕಾಶ ಕಲ್ಪಿಸಲಾಗಿದೆ.