ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಕೆ ಸುಧಾಕರ್ ಮಾನನಷ್ಟ ಮೊಕದ್ದಮೆ
Bengaluru : ಚಿಕ್ಕಬಳ್ಳಾಪುರದ ನೂತನ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಕೆ.ಸುಧಾಕರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬೆಂಗಳೂರಿನ (Bengaluru)ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿರುವ ಸುಧಾಕರ್ ಖಾಸಗಿ ದೂರು ಸಲ್ಲಿಸಿದ್ದಾರೆ. ಮಾಜಿ ಸಚಿವ ಸುಧಾಕರ್ ರ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಜುಲೈ 4 ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ವರದಿಯಾಗಿದೆ.
ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಮಾತನಾಡುವುದು, ಜೊತೆಗೆ, ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳ ಸಂದರ್ಶನದಲ್ಲಿ ಮಾನಹಾನಿ ರೀತಿ ಮಾತನಾಡುವುದರ ಮೂಲಕ ತಮ್ಮಘನತೆಗೆ ತೇಜೋವಧೆ ಉಂಟಾಗುವ ಥರ ಮಾಡುತ್ತಾ ಇದ್ದಾರೆ. ಹೀಗಾಗಿ ಪ್ರದೀಪ್ ಈಶ್ವರ್ ವಿರುದ್ಧ ಕ್ರಮಕ್ಕೆ ಕೈಗೊಳ್ಳಲು ಕೋರ್ಟು ಮೆಟ್ಟಲು ಹತ್ತಿದ್ದಾರೆ ಸುಧಾಕರ್.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಸುಧಾಕರ್ ರನ್ನು ಮಣಿಸಿ ಶಾಸಕರಾಗಿದ್ದಾರೆ. ತಮ್ಮ ವಿಶಿಷ್ಟ ಕನ್ನಡ ತೆಲುಗು ಮಿಶ್ರಿತ ಡೈಲಾಗ್‍ಗಳಿಂದಲೇ ಚುನಾವಣಾ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಗಮನ ಸೆಳೆದಿದ್ದರು. ಟ್ವಿಸ್ಟ್ ಮಾಡಿ ಮಾತನಾಡುವುದು, ನಿಮಗೆ ಸುಧಾಕರ್ ಬೇಕೋ, ಸುಧಾರಕ ಬೇಕೋ ಅನ್ನುವುದು, ಮುನಿ ಸ್ವಾಮಿಯನ್ನು ಮನಿ ಸ್ವಾಮಿ ಅನ್ನುವುದು ಅವರ ಕೆಲ ಫೇಮಸ್ ಡೈಲಾಗ್ ಗಳಲ್ಲಿ ಉದಾಹರಣೆಗಳು. MBBS ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೀಟ್ ಟ್ರೈನಿಂಗ್ ಕೊಡುವ ‘ ಪರಿಶ್ರಮ ನೀಟ್ ಆಕಾಡೆಮಿ ‘ ಸ್ಥಾಪಿಸಿ, ಇತ್ತೀಚೆಗೆ ಕಾಂಗ್ರೆಸ್ ಸೇರಿ ಬಲಿಷ್ಠ ಮಾಜಿ ಮಂತ್ರಿ ಕೆ ಸುಧಾಕರ್ ರನ್ನು ಚುನಾವಣೆ ಕಣದಲ್ಲಿ ಸೋಲಿಸಿ ಜೈಂಟ್ ಕಿಲ್ಲರ್ ಎನಿಸಿದ್ದರು ಪ್ರದೀಪ್ ಈಶ್ವರ್.
ಇದನ್ನೂ ಓದಿ :ಪಂಚಾಯ್ತಿ ಎಲೆಕ್ಷನ್ ಗೆಲ್ಲಲಾಗದ ವ್ಯಕ್ತಿಯೇ ಬಿ ಎಲ್ ಸಂತೋಷ್ ?