Australia: ಶಾರ್ಕ್ ಜೊತೆ ಸರಸವಾಡಿದ ಮಹಾಶಯ – ನಂತರ ಆದದ್ದೇನು? ಇಲ್ಲಿದೆ ನೋಡಿ ಭಯಾನಕ ವಿಡಿಯೋ !!

Latest international news viral video on twitter Shark bites hand of Australian man scary video goes viral

Australian man-shark video: ಶಾರ್ಕ್(Shark) ಮೀನಿನ ಬಗ್ಗೆ ನಾವು ಪುಸ್ತಕಗಳಲ್ಲಿ ಓದಿದ್ದೇವೆ, ಸಿನಿಮಾಗಳಲ್ಲಿ, ವಿಡಿಯೋಗಳಲ್ಲಿ ನೋಡಿದ್ದೇವೆ. ಅದರ ಬಗ್ಗೆ ದೂರದಲ್ಲಿ ಕೂತು ಕೇಳಿಯೇ ನಮಗೆ ಮೈ ನಡುಕ ಬರುತ್ತದೆ. ಆದರೆ ಇಲ್ಲೊಬ್ಬ ಭೂಪ ಆ ಭಯಾನಕ ಶಾರ್ಕ್ ಜೊತೆಯಲ್ಲೇ ಸರಸವಾಡಿ, ಕೂದಲೆಳೆಯಲ್ಲಿ ಜೀವ ಉಳಿಸಿಕೊಂಡ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.

 

ಹೌದು, ಆಸ್ಟ್ರೇಲಿಯಾದ(Australia) ಆಳ ಸಮುದ್ರದಲ್ಲಿ, ದೋಣಿಯಲ್ಲಿ ನಿಂತ ವ್ಯಕ್ತಿ ನೀರಿನಲ್ಲಿ ಕೈ ತೊಳೆಯುತ್ತಾನೆ. ಮತ್ತೆ ನೀರಿನಲ್ಲಿ ಕೈ ಇಡುತ್ತಾನೆ. ಈ ವೇಳೆ ಏಕಾಏಕಿ ಶಾರ್ಕ್ ಆತನ ಕೈ ಕಚ್ಚುತ್ತದೆ. ಕಚ್ಚುವುದು ಮಾತ್ರವಲ್ಲದೆ ಆತನನ್ನು ನೀರಿನೊಳಗೆ ಎಳೆಯುತ್ತದೆ. ಗಾಬರಿಗೊಂಡ ವ್ಯಕ್ತಿ ತಕ್ಷಣ ದೋಣಿಯೊಳಗೆ ಆಗಮಿಸುತ್ತಾನೆ. ಈ ದೃಶ್ಯವನ್ನು ದೋಣಿಯೊಳಗೆ ಇದ್ದ ಮತ್ತೊಬ್ಬ ವ್ಯಕ್ತಿ ಸೆರೆ ಹಿಡಿದಿದ್ದಾನೆ. ಶಾರ್ಕ್‌ವೊಂದು ವ್ಯಕ್ತಿಯ ಕೈ ಕಚ್ಚುವ ಹಾಗೂ ಆತನನ್ನು ನೀರಿನೊಳಗೆ ಎಳೆಯುವ ಭಯಾನಕ ವಿಡಿಯೋ( Australian man-shark video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ವೈರಲ್(Viral)ಆದ ಈ ವಿಡಿಯೋದಲ್ಲಿ, ಶಾರ್ಕ್ ತನ್ನ ಸ್ನೇಹಿತನನ್ನು ನೀರಿನೊಳಗೆ ಎಳೆಯುತ್ತಿದ್ದಂತೆ ವಿಡಿಯೋ ಮಾಡುವ ವ್ಯಕ್ತಿ ತನ್ನ ಸ್ನೇಹಿತನನ್ನು ಮೇಲಕ್ಕೆ ಬರುವಂತೆ ಕರೆಯುತ್ತಾನೆ. ಆತ ಮೇಲಕ್ಕೆ ಬರುತ್ತಿದ್ದಂತೆ ಶಾರ್ಕ್ ಕಣ್ಮರೆಯಾಗಿದೆ. ಈ ಶಾರ್ಕ್ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಕೊನೆಗೆ ಹೇಗೂ ಈ ಪ್ರಾಣಾಪಾಯದಿಂದ ಪಾರಾದ ಯುವಕರು ಈ ವಿಡಿಯೋವನ್ನು ಟ್ವಿಟರ್ ಗಳಲ್ಲಿ ಹಂಚಿಕೊಂಡಿದ್ದಾರೆ. “ಇಂದು ನನಗೆ ಅತ್ಯಂತ ಭಯಾನಕ ದಿನಗಳಲ್ಲಿ ಒಂದಾಗಿದೆ. ನೀರಿನ ಮೇಲೆ ನಮ್ಮ ಪ್ರಯಾಣ ಉತ್ತಮವಾಗಿ ಪ್ರಾರಂಭವಾಯಿತು. ನಾವು ಮೀನುಗಳನ್ನು ಹಿಡಿಯುತ್ತಿದ್ದೆವು. ಆದರೆ ಶಾರ್ಕ್‌ವೊಂದು ನಾವು ಹಿಡಿದ ಮೀನುಗಳನ್ನು ತಿನ್ನುತ್ತಿತ್ತು. ಎಲಾರ್ಜನ್ ನೀರಿನಲ್ಲಿ ತನ್ನ ಕೈಗಳನ್ನು ತೊಳೆದನು. ತಕ್ಷಣವೇ ಬುಲ್ ಶಾರ್ಕ್ ಆತನ ಕೈ ಕಚ್ಚಿತು. ತಕ್ಷಣ ಅದು ಆತನನ್ನು ನೀರಿನೊಳಗೆ ಎಳೆಯಿತು. ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೊಂದು ಭಯಾನಕ ಅನುಭವ” ಎಂದು ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Nalin Kumar kateel- MP Renukacharya: ರಾಜ್ಯದಲ್ಲಿ ಬಿಜೆಪಿ ಸೋಲಲು ರಾಜ್ಯಾಧ್ಯಕ್ಷರೇ ಕಾರಣ, ಆ ಸ್ಥಾನದಲ್ಲಿರೋ ಅರ್ಹತೆ ಅವರಿಗಿಲ್ಲ !! ಕಟೀಲ್ ಎಚ್ಚರಿಕೆ ಬೆನ್ನಲ್ಲೇ ರೊಚ್ಚಿಗೆದ್ದ ಹೊನ್ನಳ್ಳಿ ಹುಲಿ !!

Leave A Reply

Your email address will not be published.