HSRP: ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ ; ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು !

HSRP latest news Central government to install high security registration plate for vehicles

HSRP: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಂದಿಲ್ಲೊಂದು ಸವಾಲು ಎದುರಾಗುತ್ತಲೇ ಇದೆ. ಈಗಾಗಲೇ ಶಕ್ತಿ ಯೋಜನೆ ಗ್ಯಾರಂಟಿ ಜಾರಿಗೊಳಿಸಿ ಹಲವಾರು ಸಮಸ್ಯೆಗಳು ಉದ್ಭವವಾಗಿದೆ. ಜೊತೆಗೆ ನೀರು, ಕರೆಂಟ್ ದರ ಏರಿಕೆ ಮಾಡಿ ಎಲ್ಲೆಡೆ ಪ್ರತಿಭಟನೆಯ ಕೂಗು ಕೇಳುತ್ತಿದೆ. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸಾವಲೊಂದು ಎದುರಾಗಿದೆ. ವಾಹನ ಕಳ್ಳತನ, ಕದ್ದ ವಾಹನಗಳನ್ನು ದುರುದ್ದೇಶಗಳಿಂದ ಬಳಸಿಕೊಂಡು ಹೀನ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ.‌

ವಾಹನಗಳ ನಂಬರ್ ಪ್ಲೇಟ್’ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈ ಪ್ರಕ್ರಿಯೆ ಕರ್ನಾಟಕದಲ್ಲಿ ಕೂಡ ಜಾರಿಗೆ ಬರುತ್ತಿದೆ. ಆದರೆ, ಈ ಪ್ರಕ್ರಿಯೆ ಜಾರಿಗೆ ತಯಾರಿಯೇನೋ ನಡೆಯುತ್ತಿದೆ. ಇದರ ಬೆನ್ನಲ್ಲೇ ಅಕ್ರಮದ ವಾಸನೆಯೂ ಅಲ್ಲಲ್ಲಿ ಗೋಚರಿಸಿದೆ. ಅತೀ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರ ನಡೆದಿರುವ ಬಗ್ಗೆ
ಬಗ್ಗೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಅವ್ಯವಹಾರದ ಬಗ್ಗೆ ದೂರು ನೀಡಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದೆ.

HSRP ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಗೊಳಿಸಿದೆ. ಇದು ಕೇಂದ್ರ ಸರ್ಕಾರದ ಸೂಚನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಈ ನಿಯಮಗಳಿಂದ ಯೋಜನೆಯ ಹಳಿ ತಪ್ಪಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಅನುಮಾನ ಶುರುವಾಗಿ ಆತಂಕ ನೆಲೆಸಿದೆ.

ಈ ಯೋಜನೆ ಜಾರಿ ಹಿನ್ನೆಲೆ ದೇಶದಲ್ಲಿ ಹಲವಾರು ಕಂಪನಿಗಳು ನಂಬರ್ ಪ್ಲೇಟ್’ಗಳನ್ನು ತಯಾರಿಸುತ್ತಿವೆ. ಇದರಲ್ಲಿ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಮಾತ್ರ HSRP ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂಬ ಸುದ್ದಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರದ ಉದ್ದೇಶದಿಂದ ಈ ರೀತಿಯ ಅಕ್ರಮಕ್ಕೆ ಹುನ್ನಾರ ನಡೆದಿದೆ ಎಂದು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಾಹನ ತಯಾರಕಾರು HSRP ತಯಾರಿಸುವುದಿಲ್ಲ, ಬದಲಾಗಿ ಇತರರ ತಯಾರಕರಿಂದ ಪಡೆದು ವಾಹನಗಳಿಗೆ ಅಳವಡಿಸಿ ಪೂರೈಸಬೇಕು. ಎಲ್ಲಾ ವಾಹನಗಳಲ್ಲಿ HSRP ಸಾಧನ ಅಳವಡಿಕೆ ಕಡ್ಡಾಯವಾಗಿದ್ದು, ಅದನ್ನು ಪೂರೈಸಲು ವಾಹನ ತಯಾರಿಕಾ ಸಂಸ್ಥೆ ಅಥವಾ ಡೀಲರ್ ಗಳಿಗೆ ಅವಕಾಶ ಕಲ್ಪಿಸಲು ಸಾರಿಗೆ ಇಲಾಖೆಯಿಂದ ವ್ಯವಸ್ಥೆ ಆಗಿದೆ.

ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ 20 HSRP ತಯಾರಿಕಾ ಸಂಸ್ಥೆಗಳಲ್ಲಿ ಒಬ್ಬರ ನಿಯಂತ್ರಣದಲ್ಲೇ ಇರುವ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಸಾರಿಗೆ ಇಲಾಖೆ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಹಳೆಯ ವಾಹನಗಳಿಗಷ್ಟೇ HSRP ಬೇಕಿದೆ. ದೇಶದಲ್ಲಿ ಸುಮಾರು 30 ಕೋಟಿ ಹಳೆಯ ವಾಹನಗಳಿದ್ದು, ಅದರಲ್ಲಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ. ಈ ವಾಹನಗಳಿಗೆ HSRP ಅಳವಡಿಸಬೇಕಿದೆ. ಇದರ ಬೆಲೆ 400ರಿಂದ 950 ರೂಪಾಯಿವರೆಗೆ ಇದೆ ಎನ್ನಲಾಗಿದೆ. ಪ್ರತೀ HSRPಯಲ್ಲಿ ಶೇಕಡಾ 50ರಷ್ಟು ಲಾಭ ಇದೆ. ಹಾಗಾಗಿ ಕೆಲವು ಕಂಪನಿಗಳು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ಕಬಳಿಸಲು ಸಂಚು ಹೂಡಿವೆ. ಲಂಚದ ಆಸೆಗೆ ಬಿದ್ದು ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿಗಳು ಭಾರೀ ಅಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ 20 ಸಾವಿರ ಜನರು ವಾಹನಗಳ ನಂಬರ್ ಪ್ಲೇಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದೀಗ ವಾಹನ ತಯಾರಕರು ಹಾಗೂ ಡೀಲರುಗಳೇ HSRP ನಂಬರ್ ಪ್ಲೇಟ್ ವಿತರಿಸಬೇಕು ಎಂಬ ನಿಯಮ ಜಾರಿಯಾದರೆ ಈ 20 ಸಾವಿರ ಕುಟುಂಬಗಳೂ ಬೀದಿಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ವಾಹನ ತಯಾರಕರು-ವಿತರಕರಷ್ಟೇ HSRP ಪೂರೈಸುವ ನಿಯಮ ಜಾರಿಯಾದರೆ ವಾಹನ ಮಾಲೀಕರು ಬದಲಿ HSRPಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದ 500 ರೂಪಾಯಿಯ HSRP ಖರೀದಿಸಲು ಸಾವಿರಾರು ರೂಪಾಯಿ ಖರ್ಚುಮಾಡಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. 2001ರಲ್ಲೇ ಈ ಸುರಕ್ಷಾ ಕ್ರಮ ಜಾರಿ ಬಗ್ಗೆ ಚಿಂತನೆ ನಡೆದಿತ್ತು. ಈ ಚಿಂತನೆ ಇದೀಗ ಜಾರಿಗೆ ಸಿದ್ಧಗೊಳ್ಳುತ್ತಿದೆ.

 

ಇದನ್ನು ಓದಿ: Health Tips: ನಿಮ್ಮ ಕಾಲ್ಬೆರಳ ಉಗುರುಗಳು ಆ ಬಣ್ಣವನ್ನು ಹೊಂದಿವೆಯೇ? ನಿರ್ಲಕ್ಷ್ಯಿಸದಿರಿ 

Leave A Reply

Your email address will not be published.