Dengue: ಕರಾವಳಿಗರೇ ಎಚ್ಚರ ..! ಮಂಗಳೂರಿಗೆ ಕಂಟಕವಾಯ್ತಾ ಡೆಂಗ್ಯೂ ? ಪ್ರಕರಣ ಹೆಚ್ಚಳ, ಕಟ್ಟೆಚ್ಚರ..!

Latest Karnataka news Dakshina Kannada news dengue fever cases increase in Mangalore

Dengue: ಮಂಗಳೂರು ; ಡೆಂಗ್ಯೂ( Dengue)ಜ್ವರವು ಈಡಿಸ್ ಸೊಳ್ಳೆಗಳಲ್ಲಿ ಕಂಡುಬರುವ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ರಾಜ್ಯದ ಬೆಂಗಳೂರು ಹಾಗೂ ದಕ್ಷಿಣಕನ್ನಡ ಭಾಗದಲ್ಲಿ ಭೀತಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕರಿಗೆ ಡೆಂಗ್ಯೂ ಜ್ವರ ಬಗ್ಗೆ ನಿರ್ಲಕ್ಷ್ಯವಹಿಸದೇ ಮುನ್ನೆಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಸೂಚನೆ ನೀಡಲಾಗಿದೆ ಈ ಕಾರಣದಿಂದಾಗಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್​​ಕ್ಲಬ್​ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಡಾ. ಕುಲಾಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಪಾಲ್ಗೊಂಡಿದ್ದಾರೆ.

ದಕ್ಷಿಣ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುವ ಭೀತಿ ಇದೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಾಯ ಮಾಡಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ 56 ಡೆಂಗ್ಯೂ ಪ್ರಕರಣಗಳು ಹಾಗೂ 24 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. 2020 ರಲ್ಲಿ 239, 2021 ರಲ್ಲಿ 295 ಮತ್ತು 2022 ರಲ್ಲಿ 388 ಡೆಂಗ್ಯೂ ಪ್ರಕರಣಗಳು ದಾಖಲಾಗಿತ್ತು ಎಂಬುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ದಕ್ಷಿಣ ಕನ್ನಡದಲ್ಲಿ ಈವರೆಗೆ 23 ಟೈಫಾಯಿಡ್ ಪ್ರಕರಣಗಳು ದಾಖಲಾಗಿವೆ

ಡೆಂಗ್ಯೂ ಸೋಂಕಿನ ಲಕ್ಷಣಗಳು
*104F ನಷ್ಟು ಅಧಿಕ ಜ್ವರ ಸಂಭವಿಸಬಹುದು.
*ತೀವ್ರ ಸೋಂಕು
*ತೀವ್ರ ತಲೆನೋವು
*ವಾಕರಿಕೆ ಮತ್ತು ವಾಕರಿಕೆ
*ದದ್ದುಗಳು ಕಾಣಿಸಿಕೊಳ್ಳುವುದು
*ಗ್ರಂಥಿಗಳಲ್ಲಿ ಊತ
*ದೇಹದ ಸೆಳೆತ ಅಥವಾ ನೋವು
*ಮೂಗಿನಿಂದ ರಕ್ತಸ್ರಾವ
ಡೆಂಗ್ಯೂ ಜ್ವರವನ್ನು ನಿಯಂತ್ರಿಸುವ ಕ್ರಮಗಳು
*ಡೆಂಗ್ಯೂವನ್ನು ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು
*ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು
*ನೀರು ಸಂಗ್ರಹಿಸಿಡುವ ಸಲಕರಣೆಗಳನ್ನು ಭದ್ರವಾಗಿ ಮುಚ್ಚುವುದು.
*ಸಮರ್ಪವಾದ ತ್ಯಾಜ್ಯ ವಿಲೇವಾರಿ
*ಕಿಟಕಿ ಬಾಗಿಲುಗಳಿಂದ ಸೊಳ್ಳೆಗಳು ಒಳಗೆ ಬರದಂತೆ ಎಚ್ಚರವಹಿಸುವುದು
*ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡುವುದು.

ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಹೆಚ್ಚಿದ ಅಪಘಾತ : ಎಡಿಜಿಪಿ ಅಲೋಕ್ ಕುಮಾರ್ ಖಡಕ್‌ ವಾರ್ನಿಂಗ್.!

 

Leave A Reply

Your email address will not be published.