Kolar: ಮಗಳ ಕತ್ತು ಹಿಸುಕಿ ಕೊಂದ ತಂದೆ : ಪ್ರೇಯಸಿಯ ಹತ್ಯೆ ಕಂಡು ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!

Latest Karnataka crime news due to inter caste marriage daughter murdered by father in Kolar

Share the Article

Kolar: ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದಲ್ಲಿ ಅಂತರ್ಜಾತಿ ವಿಚಾರಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕೀರ್ತಿ (20) ಎಂಬ ಯುವತಿ , ಗಂಗಾಧರ್ (24) ಎಂಬ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ಆದ್ರೆ ಇವರಿಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು, ಅದರಲ್ಲೂಕೀರ್ತಿ ಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದರು. ಗಂಗಾಧರ್ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ ತಂದೆ ಕೃಷ್ಣಮೂರ್ತಿ ಮಗಳು ಅಂತರ್ಜಾತಿ ವಿವಾಹ ವಿಚಾರ ತಿಳಿದು ಮಗಳಲ್ಲಿ ಹಲವು ಬಾರಿ ಆತನನ್ನು ಮರೆತು ಬಿಡು ಅವನೊಂದಿಗೆ ಮದುವೆಯಾಗುವುದು ಬೇಡ ಎಂದು ಹೇಳಿದ್ದರು. ಆದರೂ ಆಕೆ ಆತನನ್ನೆ ಮದುವೆ ಯಾದಳು ಇದಕ್ಕೆ ಮಗಳ ಮೇಲೆ ತಂದೆಯೇ ಸಿಟ್ಟುಗೊಂಡು ಮಗಳ ಕತ್ತನ್ನು ಹಿಸುಕಿ ಕೊಂದಿದ್ದಾನೆ. ಕೀರ್ತಿಯನ್ನು ಕೊಂದ ವಿಚಾರ ತಿಳಿದ ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಕೋಲಾರದಲ್ಲೇ ತಿಳಿದು ಬಂದಿದೆ.

 

ಇದನ್ನೂ ಓದಿ: Mangalore university collage : ವಿವಾದದಕ್ಕೂ, ವಿರೋಧಕ್ಕೂ ಸೊಪ್ಪು ಹಾಕದ ವಿವಿ ಕಾಲೇಜು !! ಹಿಂದೂ ಮುಖಂಡನ ಆತಿಥ್ಯದಲ್ಲೇ ಜರುಗಿದ ಕಾರ್ಯಕ್ರಮ !!

Leave A Reply