Tumkur: ಪೋಷಕರೇ ಎಚ್ಚರ..! ತುಮಕೂರಿನ ಕುಣಿಕೇನಹಳ್ಳಿಯ ಮಕ್ಕಳಲ್ಲಿ ಕಾಣಿಸಿದ ವಿಚಿತ್ರ ಕಪ್ಪು ಚುಕ್ಕೆ..!

Latest news health news Tumkur black spot disease found in children of Kunikenahalli

Tumkur: ತುಮಕೂರು : ಜಿಲ್ಲೆಯ ತುರುವೇಕೆರೆ ಹಾಗೂ ಕೊರಟಗೆರೆಯ ಗ್ರಾಮದ ಶಾಲಾ ಮಕ್ಕಳ ಅಂಗೈ- ಕಾಲುಗಳಡಿ ಇದ್ದಕ್ಕಿಂದತೆ ಕಪ್ಪು ಕಲೆಗಳು ಮೂಡುತ್ತಿದ್ದು , ವಿಚಿತ್ರವಾದ ಕಾಯಿಲೆಯನ್ನ ಕಂಡು ಮಕ್ಕಳ ಪೋಷಕರಿಗೆ ಹೊಸ ಭಯ ಶುರುವಾಗಿದೆ.

 

ತುಮಕೂರು (Tumkur) ಜಿಲ್ಲೆಯ ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳು ಹಾಗೂ ಯಲಚೇನಹಳ್ಳಿ ಗ್ರಾಮದ 5 ಮಕ್ಕಳ ಕೈ ಕಾಲುಗಳು ಹಾಗೂ ಅಂಗೈಗಳಲ್ಲಿ ಕಪ್ಪಾಗಿರುವ ಚುಕ್ಕೆಗಳಂತಹ ವಿಚಿತ್ರವಾದ ಚರ್ಮದ ಫಂಗಸ್‌ ಪ್ರತ್ಯಕ್ಷವಾಗುತ್ತಿದೆ. ಶಾಲೆಗೆ ಹೋಗಿ ಮನೆ ಬರುತ್ತಿದ್ದ ಮಕ್ಕಳಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದಲ್ಲದೇ ಆ ಶಾಲೆಯ ಶಿಕ್ಷಕರಲ್ಲೂ ಕಾಣಿಸುತ್ತಿದೆ. ಇದನ್ನು ಕಂಡ ಶಾಲಾ ಶಿಕ್ಷಕರು ಹಾಗೂ ಪೋಷಕರು ಬೆಚ್ಚಿಬಿದ್ದಿದ್ದಾರೆ.

ಈ ವಿಚಿತ್ರ ಕಾಯಿಲೆಗಳು ಯಾವ ಕಾರಣದಿಂದ ಬಂದಿದೆ ಅನ್ನೋದರ ಬಗ್ಗೆ ಚಿಂತೆಗೆ ಒಳಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ಭೇಟಿ ಕೊಟ್ಟ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಈ ವಿಚಿತ್ರ ಕಪ್ಪು ಚುಕ್ಕೆಯ ಬಗ್ಗೆ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಮಾತನಾಡಿ, ಈ ಫಂಗಸ್‌ ಬಗ್ಗೆ ವೈದ್ಯರು ಪರಿಶೀಲನೆ ನಡೆಸಲಾಗುತ್ತಿದೆ. ಇದು ಶಾಲೆಯ ಪಕ್ಕದಲ್ಲೇ ಇರುವ ತಿಪ್ಪೆಯ ಗುಂಡಿಯಿಂದಲೇ ಹೊರ ಬರುವ ಕೀಟಗಳಿಂದಲೇ ಕಾಣಿಸಿಕೊಳ್ಳುತ್ತಿದೆ ಎಂದು ಮೇಲ್ನೋಟಕ್ಕೆ ಹೇಳಿದ್ದಾರೆ. ಅಲ್ಲದೇ ಮುನ್ನೆಚ್ಚರಿಕೆ ವಹಿಸುವಂತೆ ಖಡಕ್‌ ಎಚ್ಚರಿಕೆಯನ್ನು ನೀಡಲಾಗಿದೆ.

Leave A Reply

Your email address will not be published.