America: 16 ತಿಂಗಳ ಕಂದಮ್ಮನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಟ್ರಿಪ್ ಹೋದ ಪಾಪಿ ತಾಯಿ !! ಮರಳಿ ಬಂದಾಗ ಕಾದಿತ್ತು ಶಾಕ್!!

Latest news America mother left her 16-month-old baby at home alone and went on a trip

America: ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ(Bad mother) ಎಂದೂ ಇರಲಾರಳು ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ತಾಯಿ ಇದಕ್ಕೆ ತದ್ವಿರುದ್ಧವಾಗಿದ್ದಾಳೆ. ಬಹುಶಃ ಈಕೆಯನ್ನೂ ಯಾರೂ ಕೂಡ ಕ್ಷಮಿಸಲಾರರು. ಕೇವಲ 16 ತಿಂಗಳ ಮಗುವನ್ನು ಏಕಾಂಗಿಯಾಗಿ ಮನೆಯಲ್ಲೇ ಬಿಟ್ಟು 10 ದಿನಗಳ ಕಾಲ ಪ್ರವಾಸಕ್ಕೆ ಹೋಗಿದ್ದಾಳೆ ಈ ಪಾಪಿ ತಾಯಿ. ಆದರೆ ವಾಪಾಸು ಬಂದಾಗ ಮಗು ಹಸಿವಿನಿಂದ ಸಾವು ಕಂಡಿದೆ.

ಹೌದು, ಅಮೆರಿಕಾದ(America) ನಿವಾಸಿಯಾದ ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) (Kristel Candelario) ಎಂಬ ಪಾಪಿ ತಾಯಿಯೊಬ್ಬಳು ತನ್ನ ಎಂಜಾಯ್‍ಮೆಂಟ್‍ಗಾಗಿ ಒಂದೂವರೆ ವರ್ಷದ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು 10 ದಿನಗಳ ಕಾಲ ಟ್ರಿಪ್(Trip) ಮಾಡಲು ಹೋಗಿ, ಮರಳಿ ಬಂದಾಗ ಮಗು ಸಾವನ್ನಪ್ಪಿರೋ ಮನಕಲುಕುವ ಘಟನೆ ನಡೆದಿದ್ದು, ಇದೀಗ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.

ಅಂದಹಾಗೆ ಅಮೆರಿಕಾದ ಓಹಿಯೋ(Ohiyo) ನಿವಾಸಿ ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು 10 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು. ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಇತ್ತ ಕ್ರಿಸ್ಟಲ್ ಟ್ರಿಪ್ ಮುಗಿಸಿ ಅಂದರೆ ಜೂನ್ 16 ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ, ಇದ್ದ ಬಟ್ಟೆಯಲ್ಲೇ ಮಲ, ಮೂತ್ರ ಮಾಡಿಕೊಂಡು, ಒಂದು ತೊಟ್ಟು ನೀರೂ ಇಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದೆ.

ಇದರಿಂದ ಆತಂಕಗೊಂಡ ಆಕೆ ಕೂಡಲೇ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು(Police) ಮಗುವನ್ನು ನೋಡಿದಾಗ ಅದು ಮೃತಪಟ್ಟಿರುವುದು ಬಯಲಾಯಿತು. ಈ ಬೆನ್ನಲ್ಲಿಯೇ ಪೊಲೀಸರು 31 ವರ್ಷದ ತಾಯಿ ಕ್ರಿಸ್ಟೆಲ್‌ ಕ್ಯಾಂಡೆಲಾರಿಯೊ ವಿರುದ್ಧ ಕೊಲೆ ಪ್ರಕರಣದ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಜೂನ್‌ 16 ರಂದು ಈಕೆ ವಾಪಾಸ್‌ ಮನೆಗೆ ಹೊಕ್ಕಾಗ ಮಗು ಸಾವು ಕಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಕ್ರಿಸ್ಟಲ್ ಒಬ್ಬಂಟಿಯಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವುದು ಇದು ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಆಕೆ ಮಗುವನ್ನು ಬಿಟ್ಟು ಹೋಗಿದ್ದಾಳೆ. ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗದಂತೆ ಸಾಕಷ್ಟು ಬಾರಿ ಹೇಳಿದ್ದೇವೆ. ಆದರೆ ಆಕೆ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರ ಬಳಿ ದೂರಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಂಬಂಧ ತಾಯಿ ಕ್ರಿಸ್ಟಲ್ ಕ್ಯಾಂಡೆಲಾರಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.