ಬಸ್ಸು ನಿಲ್ಲಿಸಿಲ್ಲ ಎಂದು ಬಸ್ಸಿಗೆ ಕಲ್ಲು ಬೀರಿದ ಮಹಿಳೆ, ಉಚಿತ ಬಸ್ಸು ಏರಲು ಹೋದವಳು 5000 ಕಕ್ಕಿದಳು !

Free bus :ಡ್ರೈವರ್ ಬಸ್ ಅನ್ನು ನಿಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಕೋಪಗೊಂಡು ಆ ಬಸ್ಸಿಗೆ ಕಲ್ಲೆಸೆದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ. ಉಚಿತ ಬಸ್ಸು (Free bus )ಹತ್ತುವ ಉತ್ಸಾಹದಲ್ಲಿದ್ದ ಮಹಿಳೆ ಈಗ 5,000 ರೂಪಾಯಿ ಕಟ್ಟುವಂತಾಗಿದೆ.

 

ಕೊಪ್ಪಳದಿಂದ ಹೊರಟ ಎಕ್ಸ್ ಪ್ರೆಸ್ ಬಸ್ಸು ಹೊಸಪೇಟೆಗೆ ಹೊರಟಿತ್ತು. ಈ ವೇಳೆ ಬಸ್ ನಿಲ್ಲಿಸದೆ ಡ್ರೈವರ್ ಮುಂದೆ ಹೋಗಿದ್ದಾನೆ. ಆಗ ಮಹಿಳೆ ಕಲ್ಲೆತ್ತಿಕೊಂಡು ಬಸ್ ನತ್ತ ತೂರಿದ್ದಾಳೆ. ಕಲ್ಲು ಎಸೆದ ಹಿನ್ನೆಲೆಯಲ್ಲಿ ಡ್ರೈವರ್ ಕಮ್ ಕಂಡಕ್ಟರ್ ಪೊಲೀಸ್ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಪ್ಯಾಸೆಂಜರ್ ಸಮೇತ ಬಸ್ ತಿರುಗಿಸಿ ತಂದು ನಿಲ್ಲಿಸಿದ್ದಾನೆ.

 

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಿನ್ನೆ ಸಾಯಂಕಾಲ ಈ ಘಟನೆ ನಡೆದಿದ್ದು, ಬಸ್ ‌ನಿಲ್ಲಿಸದ ಕೋಪಕ್ಕೆ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲು ತೂರಿದ್ದಾಳೆ. ಬಸ್ ಡ್ರೈವರ್ ಮುತ್ತಪ್ಪ ಬಸ್ ಪೊಲೀಸ್ ಠಾಣೆಗೆ ತಂದು ದೂರು ನೀಡಲು ಮುಂದಾಗಿದ್ದಾರೆ. ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆಯ ಮೇಲೆ ದೂರು ನೀಡಲಾಗಿದೆ.

 

ಲಕ್ಷ್ಮೀ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಹೊರಟಿದ್ದಳು. ಲಿಂಗಾಪುರ ಬಳಿ ಬಸ್ ಗಾಗಿ ಕಾದು ಕುಳಿತಿದ್ದಳು ಲಕ್ಷ್ಮಿ. ಆಲ್ಲಿ ಮಳೆಯಲ್ಲಿ ಮೂರು ತಾಸು ಕಾದು ಕುಳಿತಿದ್ದ ಲಕ್ಷ್ಮಿಗೆ ಕೋಪ ಬಂದಿದೆ. ಕತ್ತಲು ಆವರಿಸಿ ಬಿಡುವ ಒಳಗೆ ಮನೆ ತಲುಪುವ ಉದ್ದೇಶದಿಂದ ಕಾಯುತ್ತಿರುವ ಆಕೆಗೆ ಯಾವೊಂದು ಬಸ್ ಕೂಡಾ ನಿಲ್ಲಿಸದ ಕಾರಣ ಆಕೆ ಕೋಪಗೊಂಡಿದ್ದಳು. ಆಗ ಕೋಪ ಬಂದು ಆಕೆ ಬಸ್ ಗೆ ಕಲ್ಲೆಸೆದಿದ್ದು, ಕೊಪ್ಪಳದ ಬಸ್ಸಿನ ಗ್ಲಾಸ್ ಡ್ಯಾಮೇಜ್ ಆಗಿದೆ.

 

ನಂತರ ಪೊಲೀಸ್ ಠಾಣೆಯಲ್ಲಿ ಸಂದಾನ ನಡೆದಿತ್ತು. ಬಸ್ ಗ್ಲಾಸ್ ಡ್ಯಾಮೇಜ್ ಹಿನ್ನೆಲೆಯಲ್ಲಿ 5,000 ರೂಪಾಯಿ ದಂಡ ಕಟ್ಟಿ, ಇಲ್ಲದೆ ಹೋದಲ್ಲಿ ಎಫ್ಐಆರ್ ದಾಖಲು ಮಾಡುವುದಾಗಿ ಬಸ್ ಡಿಪೋ ಮ್ಯಾನೇಜರ್ ಲಕ್ಷ್ಮಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಆಗ ಮೆತ್ತಗಾದ ಲಕ್ಷ್ಮೀ ಅಲ್ಲಿ ಕ್ಷಮೆ ಕೇಳಿ ಬಸ್ಸು ರಿಪೇರಿಯ ಬಾಬತ್ತು 5000 ರೂಪಾಯಿ ದಂಡ ಕಟ್ಟಿ, ಕೊನೆಗೆ ಅದೇ ಬಸ್ಸಿನಲ್ಲಿ ಉಚಿತವಾಗಿ ಮನೆಗೆ ತೆರಳಿದ್ದಾಳೆ.

ಇದನ್ನೂ ಓದಿ :ಬದುಕಿನ 108 ಸಮಸ್ಯೆಗಳಿಗೆ 108 ಪರಿಹಾರಗಳು !!ಹಾಗಿದ್ರೆ108 ಸಂಖ್ಯೆಯ ಮಹತ್ವ ಏನು?

Leave A Reply

Your email address will not be published.