Women’s Menstrual: ಪಿರಿಯೆಡ್ಸ್ ವೇಳೆ ಕಾಣುವ ಹೊಟ್ಟೆ ನೋವಿಗೆ ಬೆಸ್ಟ್ ಮದ್ದು ಇಲ್ಲಿದೆ !

Lifestyle Health news home remedies for women's menstrual health tips

Women’s Menstrual: ಪ್ರತೀ ತಿಂಗಳು (Every Month) ಮಹಿಳೆಯರು ಪಿರಿಯಡ್ಸ್ (Women’s Menstrual) ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಅಸಹನೀಯವಾಗಿರುತ್ತದೆ. ಮಹಿಳೆಯರಲ್ಲಿ ಪಿರಿಯಡ್ಸ್ ಎಂದರೆ ಸುಮಾರು 12 ವರ್ಷದಿಂದ ಆರಂಭವಾಗಿ 50 ವರ್ಷ ಆಸುಪಾಸಿನ ವಯಸ್ಸಿನವರೆಗೂ ಇರುತ್ತದೆ. ಇದು ಪ್ರತಿ ತಿಂಗಳು 3 ರಿಂದ 7 ದಿನಗಳವರೆಗೆ ನಡೆಯುತ್ತದೆ.

ಪಿರಿಯೆಡ್ಸ್‌ ಸಮಯದಲ್ಲಿ ಹೆಚ್ಚಿನ ಹೆಣ್ಮಕ್ಕಳಿಗೆ ಅಗಾಧ ಹೊಟ್ಟೆ ನೋವು, ಸೊಂಟ ನೋವು ಇರುತ್ತದೆ. ಇದಕ್ಕೆ ಕೆಲವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಆರೋಗ್ಯ ದೃಷ್ಟಿಯಿಂದ ಕೆಲವು ಮನೆಮದ್ದುಗಳನ್ನು ಮಾಡುವುದು ಸೂಕ್ತ.

ಮುಟ್ಟಿನ ದಿನಗಳಲ್ಲಿ ನಿಮ್ಮ ನೀರಿನ ಸೇವನೆಯನ್ನು ಹೆಚ್ಚು ಮಾಡಬೇಕು. ಮುಟ್ಟಿನ ಹೊಟ್ಟೆ ನೋವನ್ನು ಸರಾಗಗೊಳಿಸುವಲ್ಲಿ ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೀಕರಿಸಬಹುದು.

ಜೀರಿಗೆ, ಸ್ವಲ್ಪ ಸಕ್ಕರೆ ಮತ್ತು ನೀರನ್ನು ಕುದಿಸಿ. ಇದನ್ನು ಸೇವಿಸುವುದರಿಂದ ಈ ನೋವು ಕೂಡ ನಿವಾರಣೆಯಾಗುತ್ತದೆ.

ಲಾವೆಂಡರ್, ಗುಲಾಬಿ, ಲವಂಗ, ದಾಲ್ಚಿನ್ನಿ ಮುಂತಾದ ಸಾರಭೂತ ತೈಲಗಳಿಂದ ಹೊಟ್ಟೆಯ ಮೇಲೆ ಮಸಾಜ್ ಮಾಡಿದಾಗ ಹೊಟ್ಟೆ ನೋವನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ

ಗಿಡಮೂಲಿಕೆ ಪಾನೀಯಗಳು ಆಂಟಿ-ಸ್ಪಾಸ್ಮೊಡಿಕ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ, ಇದು ಮುಟ್ಟಿನ ಸಮಯದಲ್ಲಿ ಸಂಭವಿಸುವ ಸ್ನಾಯು ಸಂಕೋಚನಗಳಿಗೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡುತ್ತದೆ.

ಸೆಳೆತದಿಂದ ಪರಿಹಾರ ಪಡೆಯಲು ಬಿಸಿನೀರಿನ ಚೀಲಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹೊಟ್ಟೆಯ ಪ್ರದೇಶದಲ್ಲಿ ಸರಿಯಾದ ರಕ್ತ ಪರಿಚಲನೆಗೆ ಶಾಖವು ಸಹಾಯ ಮಾಡುತ್ತದೆ ಮತ್ತು ನೋವನ್ನು ಸರಾಗಗೊಳಿಸುತ್ತದೆ.

ಮೆಂತ್ಯೆ ಕಾಳುಗಳನ್ನು 12 ಗಂಟೆಗಳ ಮೊದಲು ನೀರಿನಲ್ಲಿ ನೆನೆಸಿ, ನಂತರ ಅದರಲ್ಲಿ ಮೆಂತ್ಯವನ್ನು ಫಿಲ್ಟರ್ ಮಾಡಿ ನೀರನ್ನು ಕುಡಿಯಬೇಕು. ಹೀಗೆ ಮಾಡಿದರೂ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವಿನಿಂದ ಪರಿಹಾರ ಸಿಗುತ್ತದೆ.

ನಿದ್ದೆ ಸಮಸ್ಯೆಗಳಿರುವವರು ತೀವ್ರ ಆರೋಗ್ಯದ ತೊಂದರೆಗಳನ್ನು ಹೊಂದಬಹುದು, ಅವುಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಪಿರಿಯೆಡ್ಸ್ ಸಂದರ್ಭದಲ್ಲಿ ಸರಿಯಾಗಿ ನಿದ್ದೆ ಮಾಡಿ.

ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಅರಿಶಿನದಲ್ಲಿ ಇರುವ ಜೈವಿಕ ಸಕ್ರಿಯ ಸಂಯುಕ್ತ, ಕರ್ಕ್ಯುಮಿನ್ ​ಮುಟ್ಟಿನ ಸೆಳೆತಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ.

ಈ ಸಮಯದಲ್ಲಿ ಹೆಚ್ಚು ಹೆಚ್ಚು ವಿಟಮಿನ್ ಯುಕ್ತ ಆಹಾರಗಳನ್ನು, ಪಾನೀಯಗಳನ್ನು ಸೇವಿಸಿದಾಗ ದೇಹ ದಣಿವು ಆಗದಂತೆ ತಪ್ಪಿಸುತ್ತದೆ ಇದರಿಂದ ನಿಶಕ್ತಿ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Monsoon Skin Care Tips: ಮಳೆಗಾಲದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಈ 3 ವಸ್ತುಗಳನ್ನು ಮುಖಕ್ಕೆ ಹಚ್ಚಿ, ಪರಿಣಾಮ ತಕ್ಷಣ ನಿಮ್ಮ ಕಣ್ಣ ಮುಂದೆ!

Leave A Reply

Your email address will not be published.