Monsoon Skin Care Tips: ಮಳೆಗಾಲದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಈ 3 ವಸ್ತುಗಳನ್ನು ಮುಖಕ್ಕೆ ಹಚ್ಚಿ, ಪರಿಣಾಮ ತಕ್ಷಣ ನಿಮ್ಮ ಕಣ್ಣ ಮುಂದೆ!

Health care lifestyle Mansoon skin care tips Apply these 3 things on your face to protect skin in rainy season

Monsoon Skin Care Tips: ಬಿಸಿಲಿನ ಝಳದಿಂದ ತತ್ತರಿಸಿ ಹೋದ ಜನತೆಗೆ ಮುಂಗಾರಿನ ಆಗಮನ ಸಂತಸ ತಂದಿದೆ. ಈ ಋತುವಿನೊಂದಿಗೆ ಅನೇಕ ರೋಗಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು ಸಹಜ. ಎಣ್ಣೆಯುಕ್ತ ಚರ್ಮ ಹೊಂದಿರುವವರು ಮಳೆಗಾಲದ ಸಮಯದಲ್ಲಿ ಮುಖದ ಮೇಲೆ ಮೊಡವೆ ಸಮಸ್ಯೆ ಕಾಡುತ್ತದೆ, ಹಾಗಾಗಿ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ. ಮಳೆಗಾಲದಲ್ಲಿ ನಿಮ್ಮ ಮುಖದ ಹೊಳಪನ್ನು ಕಾಪಾಡುವುದು ಅತ್ಯಂತ ಮುಖ್ಯ. ಹಾಗಾಗಿ ಈ ಕೆಳಗೆ ನೀಡಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ(Monsoon Skin Care Tips) .

Sandalwood Powder: ಮಳೆಗಾಲದಲ್ಲಿ ನಿಮ್ಮ ಮುಖಕ್ಕೆ ಶ್ರೀಗಂಧದ ಪುಡಿಯನ್ನು ಬಳಸಬೇಕು. ಶ್ರೀಗಂಧದ ಪುಡಿಯನ್ನು ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಮುಖಕ್ಕೆ ತಂಪು ಸಿಗುತ್ತದೆ ಶ್ರೀಗಂಧದ ಬಳಕೆಯಿಂದ ಟ್ಯಾನಿಂಗ್ ಕೂಡ ನಿವಾರಣೆಯಾಗುತ್ತದೆ ಮತ್ತು ಮುಖದ ಸುಕ್ಕುಗಳು ಸಹ ಕಡಿಮೆಯಾಗುತ್ತದೆ.

Potato Water : ಆಲೂಗೆಡ್ಡೆ ರಸವನ್ನು ಬಳಸುವುದರಿಂದ ಮುಖದ ಕಲೆಗಳು ಮಾಯವಾಗಬಹುದು. ಇದನ್ನು ಮಾಡಲು, ನೀವು ಮೊದಲು ಆಲೂಗಡ್ಡೆಯನ್ನು ತುರಿದು ನಂತರ ಅದರ ರಸವನ್ನು ಫಿಲ್ಟರ್ ಮಾಡಬೇಕು. ಆಲೂಗೆಡ್ಡೆ ರಸವನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿ ಮುಖದ ಮೇಲೆ 20 ನಿಮಿಷಗಳ ಕಾಲ ಹಚ್ಚಿ ನಂತರ ಸರಳ ನೀರಿನಿಂದ ತೊಳೆದರೆ ಉತ್ತಮ ರಿಸಲ್ಟ್‌ ಖಂಡಿತ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

Aloe Vera: ಅಲೋವೆರಾವನ್ನು ಪ್ರತಿ ಋತುವಿನಲ್ಲೂ ಮುಖಕ್ಕೆ ಹಚ್ಚಬಹುದು. ಅಲೋವೆರಾ ಮಳೆಗಾಲದಲ್ಲಿ ಸುಲಭವಾಗಿ ಸಿಗುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳಿಂದ ಮುಕ್ತಿ ಪಡೆಯಬಹುದು. ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಅಲೋವೆರಾವನ್ನು ಬಳಸುವುದರಿಂದ ಚರ್ಮದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ರೈಲ್ವೆ ಇಲಾಖೆಯ ದಿವ್ಯ ನಿರ್ಲಕ್ಷ್ಯ! ರೈಲ್ವೆ ನಿಲ್ದಾಣದ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ಮಹಿಳೆ ಸಾವು!

Leave A Reply

Your email address will not be published.