Sunny leone: ವಯಸ್ಸಿನ ಗುಟ್ಟನ್ನು ರಟ್ಟು ಮಾಡಿ ಶಾಕ್ ನೀಡಿದ ಸನ್ನಿಲಿಯೋನ್!! ತನ್ನ ವಯಸ್ಸಿನ ಬಗ್ಗೆ ನೀಲಿತಾರೆ ಹೇಳಿದ್ದೇನು?

Latest national news Bollywood news actress Sunny Leone says she turned 24 adds as far as age is concerned

Share the Article

Sunny Leone: ಸನ್ನಿಲಿಯೋನ್(Sunny leone) ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನದೇ ಹಸಿ ಬಿಸಿ ವಿಡಿಯೋಗಳ ಮೂಲಕ ಪಡ್ಡೆಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುಕುದರ ನಿದ್ದೆಯನ್ನೂ ಕೆಡಿಸಿಬಿಟ್ಟ ನೀಲಿ ಲೋಕದ ತಾರೆ(Blue film) ಈಕೆ. ಇಂದಿಗೂ ಕೂಡ ಸುಂದರ ಮೈಮಾಟ ಹೊಂದಿರೋ ಸನ್ನಿ ಇದೀಗ ತಮ್ಮ ನಿಜವಾದ ವಯಸ್ಸನ್ನು ರಟ್ಟು ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ನೀಲಿತಾರೆ ಎಂದೇ ಖ್ಯಾತಿ ಪಡೆದಿರುವ ಸನ್ನಿ ಲಿಯೋನ್​ (Sunny Leone) ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲವೇನೋ. ಸನ್ನಿ ಇತ್ತೀಚೆಗೆ ಅವರು ಮಾಲ್ಡೀವ್ಸ್​ಗೆ(Maldives) ತೆರಳಿದ್ದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಅವರ ಸೌಂದರ್ಯವನ್ನು ನೋಡಿ ಎಂಥವರೂ ವ್ಹಾರೆವ್ಹಾ ಎನ್ನುತ್ತಾರೆ. ಆದರೆ ಈ ನಡುವೆ ಸನ್ನಿ ತನ್ನ ವಯಸ್ಸು 42 ಎಂದು ಬಹಿರಂಗಪಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೌದು, ನಟಿ, ನೀಲಿ ತಾರೆ ಸನ್ನಿಲಿಯೋನ್ ಇತ್ತೀಚೆಗಷ್ಟೆ ತಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರಿಗೆ 42 ವಯಸ್ಸು ಅನ್ನೋದನ್ನು ಕೇಳಿ ಫ್ಯಾನ್ಸ್ ಹೌಹಾರಿದ್ದಾರೆ. ಅಂದಹಾಗೆ ಮಾಲ್ಡೀವ್ಸ್​ಗೆ ತೆರಳಿದ್ದ ವೇಳೆ ಅವರ ಫೋಟೋ ಶೂಟ್ ಸಕತ್​ ಸೌಂಡ್​ ಮಾಡಿತ್ತು. ಈ ಫೋಟೋ ನೋಡಿ ನಟಿಗೆ ನಿಜವಾಗಿಯೂ 42 ಆಗಿರುವುದು ಹೌದಾ ಅನ್ನುತ್ತಿದ್ದಾರೆ ಫ್ಯಾನ್ಸ್​.

ಆದರೆ ನಟಿ ಹೇಳುತ್ತಿರುವುದೇ ಬೇರೆ. ಈ ವರ್ಷ, ವಿಕಿಪೀಡಿಯಾ ಮತ್ತು ಈ ಎಲ್ಲಾ ವೆಬ್‌ಸೈಟ್‌ಗಳು ನನ್ನ ವಯಸ್ಸಿನ ಬಗ್ಗೆ ಏನು ಹೇಳಿದರೂ ಅದು ತಪ್ಪಾಗಿದೆ. ನನಗೆ 42 ಅಲ್ಲ ಬದಲಿಗೆ 24 ವರ್ಷಗಳಾಗಿವೆ ಎಂದಿದ್ದಾರೆ. ತಮ್ಮ ವಯಸ್ಸಿನ ಬಗ್ಗೆ ಹೇಳಿಕೊಂಡಿರೋ ನಟಿ, ನನಗೆ ವಯಸ್ಸಾಗಿದೆ (Age) ಎನ್ನುವುದು ತಪ್ಪು, ಹಾಗೆಂದು ನನಗೆ ಅನ್ನಿಸುತ್ತಿಲ್ಲ. ನಾನು ಹಿಂದೆಂದಿಗಿಂತಲೂ ಚಿಕ್ಕವಳಾಗಿದ್ದೇನೆ. ನನಗೆ ಸಾಕಷ್ಟು ಶಕ್ತಿಯಿದೆ, ನಾನು ಸಾಕಷ್ಟು ವ್ಯಾಯಾಮ ಮಾಡುತ್ತೇನೆ, ನಾನು ಚೆನ್ನಾಗಿ ತಿನ್ನುತ್ತೇನೆ ಮತ್ತು ಕುಟುಂಬ ಮತ್ತು ಮಕ್ಕಳಿಂದ ನಾನು ತುಂಬಾ ಶಕ್ತಿಯನ್ನು ಪಡೆಯುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಈಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮ್ಮನ್ನು ನೋಡಿದರೆ ಯಾವ ಕಾರಣಕ್ಕೂ ವಯಸ್ಸಾಗಿದೆ ಎನ್ನಿಸುವುದೇ ಇಲ್ಲ ಎನ್ನುತ್ತಿದ್ದಾರೆ.

ಇನ್ನು ನಟಿ ಸನ್ನಿ ಲಿಯೋನ್ ಅವರು ಬಾಲಿವುಡ್​ನಲ್ಲಿ(Bollywood) ಬ್ಯುಸಿ ಇದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಇದರ ಜೊತೆ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ವೆಕೇಷನ್ ತೆರಳುತ್ತಾರೆ. ಈಗ ಸನ್ನಿ ಲಿಯೋನ್ ಅವರು ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಅವರನ್ನು ಪತಿ ಡೇನಿಯಲ್ ವೇಬರ್ ಅವರು ಎತ್ತಿಕೊಂಡಿದ್ದಾರೆ. ಹಿಂಭಾಗದಲ್ಲಿ ಸಮುದ್ರ ಇದೆ. ಈ ಫೋಟೋ ಹಂಚಿಕೊಂಡು ಸನ್ನಿ ಖುಷಿಪಟ್ಟಿದ್ದಾರೆ.

ಅಂದಹಾಗೆ ಸನ್ನಿ ಲಿಯೋನ್ ಹಾಗೂ ಡೇನಿಯಲ್ ಅವರು 2011ರಲ್ಲಿ ಮದುವೆ ಆದರು. ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಸನ್ನಿ 2017ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದರು. ಇದಕ್ಕೆ ನಿಶಾ ಎಂದು ನಾಮಕರಣ ಮಾಡಿದ್ದಾರೆ. 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರು.

ಇದನ್ನೂ ಓದಿ: Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??

Leave A Reply