Somashekar Reddy- Rahul gandhi: ರಾಹುಲ್ ಗಾಂಧಿಗೆ ಮದುವೆಯಾಗಿ ಮಕ್ಕಳಿದ್ದಾರೆ..! ಸೋಮಶೇಖರ ರೆಡ್ಡಿ!!

Latest Karnataka political news Rahul Gandhi is married abroad and has children said somashekar Reddy

Somashekar Reddy- Rahul gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Congress leader Rahul gandhi)ಅವರ ಮದುವೆ ವಿಚಾರ ಆಗಾಗ ಭಾರೀ ಸದ್ಧು ಮಾಡುತ್ತಿರುತ್ತದೆ. ಮೊನ್ನೆ ಕೂಡ ಬಿಹಾರದಲ್ಲಿ ನಡೆದ ಮೋದಿ ವಿರುದ್ಧದ ಸರ್ವಪಕ್ಷಗಳ ಸಭೆಯಲ್ಲಿ ಲಾಲು ಯಾದವ್(Lalu yadav) ಕೂಡ ಬೇಗ ಮದುವೆಯಾಗಿ ಎಂದು ಸಲಹೆ ನೀಡಿದ್ದರು. ಆದರೀಗ ರಾಹುಲ್ ಗಾಂಧಿರವರಿಗೆ ವಿದೇಶಗಳಲ್ಲಿ ಮದುವೆಯಾಗಿ ಮಕ್ಕಳಿದ್ದಾರೆ ಎನ್ನುವ ವಿಚಾರವೊಂದು ಮುನ್ನಲೆಗೆ ಬಂದಿದೆ.

 

ಹೌದು, ಮಾಜಿ ಶಾಸಕ ಸೋಮಶೇಖರ ರೆಡ್ಡಿಯವರು(Somashekar reddy) ‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರು (Somashekar Reddy- Rahul gandhi) ಆಗಾಗ ವಿದೇಶಕ್ಕೆ(Foriegn) ಆಗಾಗ ಹೋಗಿ ಬರುತ್ತಾರೆ. ಇದಕ್ಕೆ ಕಾರಣ ಅವರಿಗೆ ವಿದೇಶದಲ್ಲಿ ಮದುವೆಯಾಗಿದ್ದು, ಮಕ್ಕಳಿದ್ದಾರೆ’ ಎಂದು ಹೇಳುವ ಮೂಲಕ ರಾಹುಲ್ ಭಾರತದಲ್ಲಿ ಸಂನ್ಯಾಸಿ, ವಿದೇಶದಲ್ಲಿ ಸಂಸಾರಿ ಎಂದು ಹೇಳಿದ್ದಾರೆ.

ಬಳ್ಳಾರಿಯಲ್ಲಿ(Ballary) ನಡೆದ ಬಿಜೆಪಿ(BJP) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಟ್ನಾದಲ್ಲಿ ಸೇರಿದ ವಿರೋಧ ಪಕ್ಷಗಳ ಸಭೆಯಲ್ಲಿ ಮೊನ್ನೆ ಲಾಲು ಪ್ರಸಾದ್ ಅವರು ರಾಹುಲ್‌ಗೆ ಮದುವೆಯಾಗಿ ಎಂದಿದ್ದಾರೆ. ಆದರೆ ರಾಹುಲ್‌ ಗಾಂಧಿಗೆ ಈಗಾಗಲೇ ‌ಮದುವೆಯಾಗಿದೆ. ನಮ್ಮ ದೇಶದಲ್ಲಿ ಅಲ್ಲ ಬೇರೆ ದೇಶದಲ್ಲಿ ರಾಹುಲ್ ಗಾಂಧಿ ಮದುವೆಯಾಗಿ ಮಕ್ಕಳಿದ್ದಾರೆ. ಈ ವಿಷಯ ನಮ್ಮ ದೇಶದವರಿಗೆ ಗೊತ್ತಿಲ್ಲ. ಇಲ್ಲಿ ಸನ್ಯಾಸಿಯಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ(Kashmir) ಓಡಾಡಿದ್ದಾರೆ. ಇಲ್ಲಿ ನಾವು ತೋಡೊ, ಅವರು ಜೋಡೋ ಅಂತೆ’ ಎಂದು ವ್ಯಂಗ್ಯವಾಡಿದರು.

ಬಳಿಕ ಮಾತನಾಡಿದ ಅವರು ಎಂ.ಪಿ. ಚುನಾವಣೆಯಲ್ಲಿ ಈ ತಪ್ಪು ಮಾಡಿದರೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ(PM Modi) ಅವರನ್ನು ಕಳೆದು ಕೊಳ್ಳುಬೇಕಾಗುತ್ತದೆ. ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮನಮೋಹನ್ ಸಿಂಗ್(Manamohan singh) ಹೇಗಿರುತ್ತಿದ್ದರು. ಈಗ ನರೇಂದ್ರ ಮೋದಿ ಹೇಗಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಗಿ ನಟನೆ ಮಾಡಿ ತೋರಿಸಿದ್ದಾರೆ.

ಅಲ್ಲದೆ ಭಾರತದ ಒಳಿತು ಮತ್ತು ಅಭಿವೃದ್ಧಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು. ಮೋದಿ ಅವರೇ ಮತ್ತೆ ಪ್ರಧಾನ ಮಂತ್ರಿ ಆಗಬೇಕು. ಇಲ್ಲದಿದ್ದರೆ ಈ ದೇಶ ಕೂಡಾ ಪಾಕಿಸ್ತಾನ, ಶ್ರೀಲಂಕಾದಂತೆ ದಿವಾಳಿಯಾಗುತ್ತದೆ. ಪಾಕಿಸ್ತಾನದಲ್ಲಿ ಕರೆಂಟ್‌ ಇಲ್ಲ. ಕತ್ತೆ ಕಟ್ಟಿ ಫ್ಯಾನ್‌ ತಿರುಗಿಸಿ ಕರೆಂಟ್‌ ಉತ್ಪಾದಿಸುತ್ತಾರೆ. ಆ ಸ್ಥಿತಿ ನಮ್ಮ ದೇಶಕ್ಕೆ ಬರುವುದು ಬೇಡ’ ಎಂದು ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Haveri lokasabha Constituency: ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಪುತ್ರ ಕಣಕ್ಕೆ..!? ಹಾಗಿದ್ರೆ ಹಾಲಿ ಸಂಸದರ ಕಥೆಯೇನು?

Leave A Reply

Your email address will not be published.