Some tips for using a condom: ಎರಡೆರಡು ಕಾಂಡೋಮ್ ಹಾಕಿ ಮಾಡಿದ್ರೆ ಮಕ್ಕಳು ಆಗೋದಿಲ್ವಾ? ಗರ್ಭಧಾರಣೆ ತಡೆಯೋ ಸಾಧ್ಯತೆ ಎಷ್ಟು ?

latest news life style condom health tips Some tips for using a condom

Tips for using condom: ಸಂಭೋಗದ ವೇಳೆ ಗರ್ಭನಿರೋದಕವಾಗಿ (Contraceptive) ಅಥವಾ ಸೋಂಕು ನಿವಾರಕವಾಗಿ ಕಾಂಡೋಮ್(Condoms) ಹಾಕೋದು ಸಾಮಾನ್ಯ ವಿಚಾರವಾಗಿದೆ. ಆದರೆ ಕೆಲವೊಮ್ಮೆ ಕಾಂಡೋಮ್ ಬಳಿದರೂ ಕೂಡ ಗರ್ಭ ಧರಿಸುವಂತಹ ಅಥವಾ ಸೋಂಕು ತಗಲುವಂತಹ ಕೆಲವು ಸನ್ನಿವೇಶಗಳಿರುತ್ತವೆ. ಹಾಗಾದರೆ ಎರಡೆರಡು ಕಾಂಡೋಮ್ ಬಳಸಿ ಸಂಭೋಗಿಸಿದರೆ ಇದನ್ನೆಲ್ಲವನ್ನು ತಡೆಯಬಹುದಾ? ಏನಾದರೂ ಪ್ರಯೋಜನ ಉಂಟಾ?

ಹೌದು, ಕೆಲವೊಮ್ಮೆ ಅನಾಹುತಗಳಿಂದ ಆಗುವ ಗರ್ಭಧಾರಣೆ ಹಾಗೂ ಲೈಂಗಿಕ ಸೋಂಕುಗಳಿಂದ ದೂರವಿರಲು ಸಹಜವಾಗಿ ಸಂಭೋಗ ನಡೆಸುವವರೆಲ್ಲ ಕಾಂಡೋಮ್ ಬಳಸುತ್ತಾರೆ. ಆದ್ರೆ ಕೆಲವೊಮ್ಮೆ ಗೊತ್ತೋ, ಗೊತ್ತಿಲ್ಲದೆ ಮಾಡುವ ತಪ್ಪಿನಿಂದಾಗಿ ಕಾಂಡೋಮ್ ಬಳಸಿದ ನಂತ್ರವೂ ಮಹಿಳೆ ಗರ್ಭಿಣಿಯಾಗುವ(Pregnancy) ಸಾಧ್ಯತೆಗಳಿರುತ್ತವೆ. ಹೀಗಾಗಿ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಒಂದು ಕಾಂಡೋಮ್ ಬಳಸಿದ್ರೆ ಗರ್ಭಧರಿಸುವ ಬದಲು ಎರಡು ಕಾಂಡೋಮ್(Tips for using condom) ಗಳನ್ನು ಒಟ್ಟಿಗೆ ಬಳಸುವ ಪ್ರಯತ್ನ ನಡೆಸ್ತಾರೆ. ಒಂದೇ ಬಾರಿ ಎರಡು ಕಾಂಡೋಮ್ ಬಳಸೋದು ಸರಿಯಾದ ಕ್ರಮವೇ?

ಅಂದಹಾಗೆ ಎರಡು ಕಾಂಡೋಮ್‌ ಗಳನ್ನು ಒಟ್ಟಿಗೆ ಬಳಸಿದಾಗ ಲೈಂಗಿಕ ಕ್ರಿಯೆ ವೇಳೆ ಅವು ಒಂದಕ್ಕೊಂದು ಉಜ್ಜಿ ಹರಿಯುವ ಸಾಧ್ಯತೆಯಿರುತ್ತದೆ. ಇದ್ರಿಂದ ಅನಗತ್ಯ ಗರ್ಭಧಾರಣೆ (Pregnancy) ಅಪಾಯ ಹೆಚ್ಚಾಗುವ ಜೊತೆಗೆ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಬರೀ ಇದೊಂದೇ ಅಲ್ಲ ಎರಡು ಕಾಂಡೋಮ್ ಗಳನ್ನು ಒಟ್ಟಿಗೆ ಧರಿಸುವುದು ನಿಮಗೆ ಕಂಫರ್ಟ್ ಎನ್ನಿಸಲಾರದು. ಇದು ಲೈಂಗಿಕ ಸುಖ ಹಾಗೂ ವಿನೋದವನ್ನು ಹಾಳುಮಾಡುತ್ತದೆ. ಶಿಶ್ನದ ಮೇಲೆ ಬಿಗಿಯಾಗಿ ಕುಳಿತುಕೊಳ್ಳುವ ಕಾರಣ ಸ್ಖಲನ ಅಪಾಯ ಹೆಚ್ಚು. ಅಲ್ಲದೆ ಎರಡು ಕಾಂಡೋಮ್ ಧರಿಸಿದಲ್ಲಿ ಲೈಂಗಿಕ ಸಂತೋಷ ಪ್ರಾಪ್ತಿಯಾಗುವುದಿಲ್ಲ.

ಹಾಗಿದ್ರೆ ಕಾಂಡೋಮ್ ಸರಿಯಾದ ಬಳಕೆ ಹೇಗೆ? :
• ನೀವು ಕಾಂಡೋಮ್ ಖರೀದಿಸುವಾಗಲೇ ನಿಮಗೆ ಅನುಕೂಲವಾಗುವಂತಹ ಸರಿಯಾದ ಗಾತ್ರದ(Correct size) ಕಾಂಡೋಮ್ ಖರೀದಿ ಮಾಡಿ.
• ಕಾಂಡೋಮ್ ಕೊಳ್ಳುವಾಗ ಅದರ ಕೊನೆಯ ದಿನಾಂಕವನ್ನು ಪರಿಶೀಲನೆ ಮಾಡಿ ನಂತ್ರ ಕೊಂಡು ಬಳಕೆ ಮಾಡಿ.
• ಬಳಸುವ ಮೊದಲು ಅದು ಸೋರಿಕೆಯಾಗುವ ಸಾಧ್ಯತೆಯಿದ್ಯಾ ಎಂಬುದನ್ನು ಪರಿಶೀಲಿಸಿ.
• ಕಾಂಡೋಮ್ ಬಳಸುವ ವೇಳೆ ಲೂಬ್ರಿಕೇಶನ್(Lubrication) ಅಥವಾ ಎಣ್ಣೆಗಳನ್ನು ಬಳಕೆ ಮಾಡಬೇಡಿ. ಇದರಿಂದ ಜಾರುವ ಅಪಾಯ ಹೆಚ್ಚಿರುತ್ತದೆ.
• ಬಲ ಪ್ರಯೋಗ ಮಾಡಿ ಸಂಭೋಗಿಸಬೇಡಿ. ಹೀಗೆ ಮಾಡಿದಲ್ಲಿ ಕಾಂಡೋಮ್ ಹರಿಯವು ಸಾಧ್ಯತೆಯಿರುತ್ತದೆ.
• ಸಂಭೋಗದ ಬಳಿಕ ಕಾಂಡೋಮ್ ತೆಗೆಯುವ ಸಮಯದಲ್ಲಿ ಲೀಕೇಜ್(Leakage) ಆಗಿದ್ಯಾ ಎಂಬುದನ್ನು ಪರಿಶೀಲಿಸಿ.
• ಕಾಂಡೋಮನ್ನು ಕಾರ್ ನಲ್ಲಿ ಅಥವಾ ಮನೆಯ ಯಾವುದೋ ಜಾಗದಲ್ಲಿ, ಪರ್ಸ್, ಪ್ಯಾಂಟ್ ಜೇಬಿನಲ್ಲಿ ಇಡಬೇಡಿ. ಇದು ಶಾಖಕ್ಕೆ ಹಾಳಾಗುವ ಸಾಧ್ಯತೆಯಿರುತ್ತದೆ. ಅದೇ ರೀತಿ ಕಾಂಡೋಮನ್ನು ಅತಿಯಾಗಿ ತಣ್ಣಗಿರುವ ಜಾಗದಲ್ಲೂ ಇಡಬಾರದು.
•ಕಾಂಡೋಮ್ ನಲ್ಲಿ ಅನೇಕ ಪ್ಲೇವರ್(Flavor) ಲಭ್ಯವಿದ್ದು, ಕೆಲವು ಸಂಗಾತಿ ಹಾಗೂ ನಿಮಗೆ ಅಲರ್ಜಿನ್ನುಂಟು ಮಾಡಬಹುದು. ಹಾಗಾಗಿ ಅದನ್ನು ಪರಿಶೀಲಿಸುವುದು ಮುಖ್ಯ.

Leave A Reply

Your email address will not be published.