Submarine explosion: ‘ಟೈಟಾನಿಕ್’ ಬಳಿ ಹೊರಟಿದ್ದ ‘ಟೈಟಾನ್’ ಜಲಾಂತರ್ಗಾಮಿ ಸ್ಪೋಟ- ವೀಕ್ಷಕರ ದುರಂತ ಅಂತ್ಯ !! ಕೋಟಿಗಟ್ಟಲೆ ದುಡ್ಡು ಕೊಟ್ಟು ಸಾವಿನ ಮನೆ ಸೇರಿದ ಐವರು ಸಿರಿವಂತರು!!

Submarine explosion Five billionaires who went to see the wreckage of the Titanic died

Submarine explosion: ಕಳೆದ ಸೋಮವಾರವಷ್ಟೇ ಟೈಟಾನಿಕ್ (Titanic) ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine explosion) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿ, ಸಾಕಷ್ಟು ಶೋಧ ಕಾರ್ಯದ ಬಳಿಕವೂ ಅದು ಪತ್ಯೆಯಾಗಿರಲಿಲ್ಲ. ಆದರೀಗ ಅಟ್ಲಾಂಟಿಕ್ ಸಾಗರದಲ್ಲಿ ಆ ಸಬ್ ಮೆರಿನ್ ಸ್ಫೋಟಗೊಂಡಿದ್ದು, ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

 

ಹೌದು, ಅಟ್ಲಾಂಟಿಕ್ ಸಮುದ್ರದಲ್ಲಿ 12,600 ಅಡಿ ಆಳದಲ್ಲಿರುವ ಟೈಟಾನಿಕ್(Titanic) ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಗೆ ಬರೋಬ್ಬರಿ 2ಕೋಟಿ ರೂ ಗಳನ್ನು ಕೊಟ್ಟು ಹೋದ ಐವರು ಕೋಟ್ಯಧಿಪತಿಗಳು ದುರಂತ ಅಂತ್ಯ ಕಂಡಿದ್ದಾರೆ. ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್(Oceangate Expeditions) ನಿರ್ವಹಿಸುವ ಟೈಟಾನ್ ಸಬ್‌ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿದ್ದು, ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್(US Cost gard) ತಿಳಿಸಿರುವುದಾಗಿ ವರದಿಯಾಗಿದೆ. ನಾಪತ್ತೆಯಾಗಿದ್ದ ಐವರ ಪತ್ತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿತ್ತು. ಆದರೆ, ಕೊನೆಗೂ ಅವರ ಸುಳಿವು ಸಿಗಲೇ ಇಲ್ಲ. ಇದರಿಂದ ಆ ಸಿರಿವಂತರು ತಾವೇ ಕೈಯ್ಯಾರೆ ದುಡ್ಡುಕೊಟ್ಟು ಸಾವಿನ ಮನೆಯನ್ನು ಹೊಕ್ಕಂತಾಗಿದೆ.

ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್​) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.

ಅಂದಹಾಗೆ ಈ ಜಲಾಂತರ್ಗಾಮಿಯಲ್ಲಿ ಹೆಸರಾಂತ ಟೈಟಾನಿಕ್ ತಜ್ಞ, ವಿಶ್ವ ದಾಖಲೆ ಹೊಂದಿರುವ ಸಾಹಸಿ, ಪಾಕಿಸ್ತಾನದ ಶ್ರೀಮಂತ ಕುಟುಂಬದ ಇಬ್ಬರು ಸದಸ್ಯರು ಮತ್ತು ಕಂಪನಿಯ ಸಿಇಒ, ಈ ಐಷಾರಾಮಿ ಪ್ರಯಾಣದ ಭಾಗವಾಗಿದ್ದರು. ಯುಎಸ್ ಕೋಸ್ಟ್ ಗಾರ್ಡ್ ಮತ್ತು ಕೆನಡಾ, ಯುಕೆ ಮತ್ತು ಫ್ರಾನ್ಸ್‌ನ ಆಳವಾದ ಸಮುದ್ರದ ನೀರಿನ ತಜ್ಞರು ಜಂಟಿಯಾಗಿ ಟೈಟಾನ್ ಸಬ್‌ಮರ್ಸಿಬಲ್‌ಗಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೂ ಐವರು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಿಲ್ಲ.

ಇದಕ್ಕೂ ಮುನ್ನ ಯುಎಸ್​ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧವನ್ನು ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಇನ್ನು ಜೀವಂತವಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಅಲ್ಲಿ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ನಂತರದಲ್ಲಿ ತಿಳಿಯಿತು. ಕೊನೆಗೂ ಇದೀಗ ಉತ್ತರ ಅಟ್ಲಾಂಟಿಕ್‌ನಲ್ಲಿ ಸಮುದ್ರದ ಆಳದಲ್ಲಿ ಜಲಾಂತರ್ಗಾಮಿ ಸ್ಫೋಟಗೊಂಡಿದ್ದು ಯಾರೊಬ್ಬರೂ ಬದುಕುಳಿದಿಲ್ಲ ಎಂದು ಯುಎಸ್ ಕೋಸ್ಟ್‌ ಗಾರ್ಡ್ ಹೇಳಿದ್ದಾರೆ.

ಇನ್ನು ಈ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವುದಕ್ಕೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಜಗತ್ತಿನ ಶ್ರೀಮಂತರಷ್ಟೆ ಇದನ್ನು ನೋಡಲು ಸಾಧ್ಯ, ಏಕೆಂದರೆ ಒಮ್ಮೆ ನೀವು ಕಡಲಿನ ಆಳಕ್ಕೆ ಹೋಗಿ ಟೈಟಾನಿಕ್ ಅವಶೇಷ ನೋಡಿ ಬರಲು ಕೋಟ್ಯಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹೌದು ಒಂದು ಟಿಕೆಟ್ ಬೆಲೆ 2.5 ಲಕ್ಷ ಅಮೆರಿಕನ್ ಡಾಲರ್, ಅಂದರೆ ಬರೊಬ್ಬರಿ 2 ಕೋಟಿ ರುಪಾಯಿ.

ಇನ್ನು ಸ್ಫೋಟಗೊಂಡಿರುವ ನೌಕೆಯಲ್ಲಿ ಪಾಕಿಸ್ತಾನದ ರಾಜಮನೆತನದ ಶ್ರೀಮಂತ ಉದ್ಯಮಿ ಮತ್ತು ಅವರ ಮಗ ಕೂಡ ಇದ್ದರು. ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದಾ ದಾವೂದ್, 48, ಕರಾಚಿಯ ಪ್ರಧಾನ ಕಚೇರಿಯ ಸಂಘಟಿತ ಎಂಗ್ರೋದ ಉಪಾಧ್ಯಕ್ಷರಾಗಿದ್ದರು. ಅವರ ಮಗ ಸುಲೇಮಾನ್, 19, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು ಮತ್ತು ಇಬ್ಬರೂ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದರು. ಇನ್ನುಳಿದಂತೆ ಮೂವರನ್ನು ಸ್ಟಾಕ್ಟನ್ ರಶ್, ಪಾಲ್-ಹೆನ್ರಿ ನರ್ಜಿಯೊಲೆಟ್, ಹಮಿಶ್ ಹಾರ್ಡಿಂಗ್ ಎಂಬ ಶ್ರೀಮಂತರೆಂದು ಗುರುತಿಸಲಾಗಿದೆ.

ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಸಂಸ್ಥೆ ನಿರ್ಮಿಸಿದ್ದ ಟೈಟಾನಿಕ್, ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಅಗ್ರಸ್ಥಾನ ಪಡೆದಿದ್ದು, ‘ವೈಟ್ ಸ್ಟಾರ್ ಲೈನ್’ ಎಂಬ ಸಂಸ್ಥೆಯ ಒಡೆತನದಲ್ಲಿತ್ತು. ಇಂತಹ ಬೃಹತ್ ಹಡಗು 1912 ರಂದು, ಏಪ್ರಿಲ್ 14-15ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆದು ಮೂರು ಗಂಟೆಗಳೊಳಗೆಯೇ, ಅಂದರೆ ಏಪ್ರಿಲ್ 15ರ ಮುಂಜಾನೆ 2.20ರ ಸಮಯದಲ್ಲಿ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು.

‘ಮುಳುಗಲಾರದ ಹಡಗು’ ಎಂದು ಹೆಸರುವಾಸಿಯಾಗಿದ್ದ ಟೈಟಾನಿಕ್ ಮುಳುಗುವುದು ಅಸಾಧ್ಯ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಅದು ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋಗಿರುವುದು ಇಂದಿಗೂ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಟೈಟಾನಿಕ್ ನಿರ್ಮಿಸಿದ ನಂತರ ಇದು ಕೂಡ ಭೂಮಿಯ ಮೇಲಿನ ಒಂದು ಭಾಗದಂತಿತ್ತು. ಟೈಟಾನಿಕ್ ನಮ್ಮ ಜೊತೆ ಇದ್ದದ್ದು ಅಲ್ಪಾವಧಿಯಾದರೂ, ಯಾವುದಾದರೊಂದು ಹಂತದಲ್ಲಿ ಟೈಟಾನಿಕ್ ಬಗ್ಗೆ ಈಗಲೂ ನಾವು ಮೆಲುಕು ಹಾಕುತ್ತಿರುತ್ತೇವೆ.

 

ಇದನ್ನು ಓದಿ: Mangalore university collage: ಹಿಜಾಬ್ ವಿವಾದ ಹುಟ್ಟಿಕೊಂಡ ಮಂಗಳೂರು ವಿವಿ ಕಾಲೇಜಲ್ಲಿ ಮತ್ತೊಂದು ವಿವಾದ!! ಹಿಂದೂ ಮಖಂಡನ ಆಗಮಕ್ಕೆ ತೀವ್ರ ವಿರೋಧ!! 

Leave A Reply

Your email address will not be published.