ವೈದ್ಯ ಲೋಕದಲ್ಲೇ ವಿಸ್ಮಯ : 36 ವರ್ಷಗಳ ಕಾಲ ಗರ್ಭ ಧರಿಸಿದ್ದ 60 ವರ್ಷದ ವ್ಯಕ್ತಿ..!
Nagpur :ಮಾನವನ ವೈದ್ಯಕೀಯ ಲೋಕ ಒಂದು ವಿಸ್ಮಯ ಲೋಕ. ನಂಬಲ ಅಸಾಧ್ಯವಾಗದ ಅದೇಷ್ಟೋ ವಿಸ್ಮಯಗಳು ಘಟಿಸುತ್ತಲೇ ಇರುತ್ತದೆ. ಇತ್ತೀಚಿಗೆ ನಾಗ್ಪುರ(Nagpur)ದಲ್ಲಿ 60 ವರ್ಷದ ವ್ಯಕ್ತಿಯೊಬ್ಬ 36 ವರ್ಷಗಳ ಕಾಲ ಗರ್ಭ ಧರಿಸಿದ ಅಚ್ಚರಿಕೆ ಘಟನೆಯೊಂದು ಬೆಳಕಿಗೆ ಬಂದಿದೆ.
ವೈದ್ಯ ಲೋಕದಲ್ಲಿ ಅಂಗವಿಕಲವಾಗಿ ಹುಟ್ಟುವುದು, ಬಹು ಅಂಗಾಂಗ ಹೊಂದಿರುವುದು ಹೀಗೆ ಹೊಸ ಹೊಸ ವಿಚಿತ್ರ ಘಟನೆಗಳನ್ನು ನೀವು ಗಮನಿಸಿರಬಹುದು ಆದ್ರೆ ಈತ ನಾಗ್ಪುರದ 60 ವರ್ಷದ ವ್ಯಕ್ತಿಯಾಗಿದ್ದು, ದೊಡ್ಡದಾದ ಹೊಟ್ಟೆಯನ್ನು ಹೊಂದಿದ್ದನು ಈತನನ್ನು ಕಂಡ ಜನರೆಲ್ಲ ಗರ್ಭಿಣಿ ಎಂದು ಅಪಹಾಸ್ಯ ಮಾಡುತ್ತಿದ್ದರು. ಈತನ ಹೆಸರು ಭಗತ್ ಎಂದು ತಿಳಿಯಲಾಗಿತ್ತು,
ಭಗತ್ ದೊಡ್ಡ ಹೊಟ್ಟೆಯನ್ನು ಹೊಂದಿದ್ದರು, ಜೀವನಕ್ಕಾಗಿ ಸದಾ ಕಷ್ಟ ಪಟ್ಟು ದುಡಿಯುತ್ತಿದ್ದನು. ಆ ಸಂದರ್ಭದಲ್ಲೂ ಹಲವು ಬಾರಿ ಎಲ್ಲರ ಎದುರುಮುಜುಗರಕ್ಕೆ ಒಳಗಾಗುತ್ತಿದ್ದನು. ಅದೆಲ್ಲವನ್ನು ಲೆಕ್ಕಿಸದೇ ಜೀವನ ಸಾಗಿಸುತ್ತಿದ್ದ, 1999ರಲ್ಲಿ ಆತನಿಗೆ ಊದಿಕೊಂಡ ಹೊಟ್ಟೆಯಿಂದ ಆತನಿಗೆ ಉಸಿರಾಡೋದಕ್ಕೂ ದೊಡ್ಡ ಸಮಸ್ಯೆಯಾಯ್ತು, ಆಗ ಆತನನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಆತನ ಹೊಟ್ಟೆಯೊಳಗೆ ಬೃಹದಾಕಾರದ ಗೆಡ್ಡೆ ಇರಬಹುದು ಎಂದು ಊಹಿಸಲಾಗಿತ್ತು.
ಆದ್ರೆ ವೈದ್ಯರು ಶಸ್ತ್ರಚಿಕಿತ್ಸೆಗಾಗಿ ಒಳಪಡಿಸಿದಾಗ ಅಚ್ಚರಿ ಮೂಡಿಸಿದ್ದು, ಹೊಟ್ಟೆಯಲ್ಲಿದ್ದ ವಸ್ತುವಿನಲ್ಲಿ ಹಲವು ಅಂಗಗಳನ್ನು ಹೊಂದಿದ್ದು, ಒಂದೊಂದೇ ಅಂಗಗಳು ಹೊರ ಬಂದಿದ್ದವು. ಜನನಾಂಗದ ಕೆಲವು ಭಾಗಗಳು, ಕೂದಲಿನ ಕೆಲವು ಭಾಗಗಳು, ಕೆಲ ಅಂಗಗಳು, ದವಡೆ, ಕೈ-ಕಾಲುಗಳು ಹಾಗೂ ಅದರಲ್ಲಿ ಕೂದಲು ಸಹ ಇತ್ತು. ಇದನ್ನು ಕಂಡು ವೈದ್ಯ ಲೋಕವೇ ಶಾಕ್‌ಗೆ ಒಳಗಾಗಿದಂತೂ ನಿಜ.
ಇಂತಹ ಪ್ರಕರಣಗಳು ಅತಿ ಅಪರೂಪದ್ದಾಗಿದ್ದು ಇದನ್ನು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಇದನ್ನು ಫೆಟಸ್-ಇನ್-ಫೀಟು (FIF) ಎಂದು ಕರೆಯಲಾಯಿತು. ದೋಷಪೂರಿತ ಕಶೇರುಕ ಭ್ರೂಣ ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಾಗ ಇಂತಹ ಪ್ರಕರಣಗಳಾಗುತ್ತವೆ ಎಂದು ತಿಳಿಯಬಹುದಾಗಿದೆ.
ಇದನ್ನೂ ಓದಿ :ವೃದ್ಧರೋರ್ವರಿಗೆ ಕರಡಿ ದಾಳಿ!ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ!