Mahalakshmi : ತಂದೆ-ಮಗನ ಫೋಟೋ ಶೇರ್ ಮಾಡಿದ ನಟಿ ಮಹಾಲಕ್ಷ್ಮಿ ; ತಾಯಿಯ ಜೆರಾಕ್ಸ್ ಕಾಪಿ ಎಂದ ನೆಟ್ಟಿಗರು !

Actress Mahalakshmi shared a photo of her father and son on social media.

Mahalakshmi : ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ (Mahalakshmi) ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯು ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗಳಿಗೂ ಒಳಗಾಗಿದ್ದಾರೆ.

 

ಕಾಮೆಂಟ್ ಗಳಿಗೆ, ಟ್ರೋಲ್ ಮಾಡುವವರಿಗೆ ರವೀಂದರ್‌ ಹಾಗೂ ಮಹಾಲಕ್ಷ್ಮಿ (Mahalakshmi-Ravindar) ತಾವು ಜೊತೆಯಾಗಿರುವ ಫೋಟೋ ಅಪ್ಲೋಡ್ ಮಾಡಿ, ಕೌಂಟರ್ ಕೊಡುತ್ತಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮಹಾಲಕ್ಷ್ಮಿ ಪತಿಯೊಂದಿಗಿನ ಒಂದಲ್ಲ ಒಂದು ಫೋಟೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಈ ಬಾರಿಯೂ ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆ ಹಾಗೂ ಮಗನ ಫೋಟೋ ಹಂಚಿಕೊಂಡಿದ್ದಾರೆ.

ಮಹಾಲಕ್ಷ್ಮಿ ಹಾಗೂ ರವೀಂದರ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಈ ಮೊದಲು ಮಹಾಲಕ್ಷ್ಮಿ ಅನಿಲ್ ಎಂಬಾತನನ್ನು ಮದುವೆಯಾಗಿದ್ದರು. ಇವರಿಬ್ಬರಿಗೆ ಒಬ್ಬ ಮಗನಿದ್ದಾನೆ. ಮದುವೆಯ ನಂತರ ಮೊದಲ ಬಾರಿಗೆ ನಟಿ ಮಗನ ಫೋಟೋ ಹಂಚಿಕೊಂಡಿದ್ದಾರೆ.

ಅಪ್ಪಂದಿರ ದಿನದಂದು ಮಹಾಲಕ್ಷ್ಮಿಯ ಪೋಸ್ಟ್ ವೈರಲ್ ಆಗಿದೆ. ಫೋಟೋದಲ್ಲಿ ಮಹಾಲಕ್ಷ್ಮಿ ತನ್ನ ತಂದೆ ಮತ್ತು ಆಕೆಯ ಮಗನೊಂದಿಗಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಮಗನ ಫೋಟೋಗಳನ್ನು ನೋಡಿ ‘ಇವನು ಮಹಾಲಕ್ಷ್ಮಿಯ ಜೆರಾಕ್ಸ್ ಕಾಪಿ’ ಎಂದು ಕಮೆಂಟ್ ಮಾಡಿದ್ದಾರೆ.

 

ಇದನ್ನು ಓದಿ: Adipurush: ‘ಆದಿಪುರುಷ್’ ರಾಮನ ಪಾತ್ರಕ್ಕೆ ಪ್ರಭಾಸ್‌ ಮೊದಲ ಆಯ್ಕೆ ಅಲ್ಲ !! ಸಂಚಲನ ಮೂಡಿದ ಸಿನಿಮಾ ವಿಮರ್ಶಕ !! 

Leave A Reply

Your email address will not be published.