Home News Karnataka Police: ಪೋಲಿಸ್ ಇಲಾಖೆಗೆ ಮೇಜರ್ ಸರ್ಜರಿ !! 15 IPS ಅಧಿಕಾರಿಗಳ ವರ್ಗಾವಣೆ!! ದಕ್ಷಿಣ...

Karnataka Police: ಪೋಲಿಸ್ ಇಲಾಖೆಗೆ ಮೇಜರ್ ಸರ್ಜರಿ !! 15 IPS ಅಧಿಕಾರಿಗಳ ವರ್ಗಾವಣೆ!! ದಕ್ಷಿಣ ಕನ್ನಡ SPಯಾಗಿ ಸಿ ಬಿ ರಿಷ್ಯಂತ್

Karnataka Police
Image source- Kannada news

Hindu neighbor gifts plot of land

Hindu neighbour gifts land to Muslim journalist

Karnataka Police:  ರಾಜ್ಯದಲ್ಲಿ ಗ್ಯಾರಂಟಿಗಳ(Guaranty) ತಿಕ್ಕಾಟದ ನಡುವೆಯೇ, ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ(Police department) ಮೇಜರ್ ಸರ್ಜರಿ ಮಾಡಿದ್ದು, 15 ಐಪಿಎಸ್(IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ದಕ್ಷಿಣ ಕನ್ನಡದ (Karnataka Police ) ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‌ಪಿ) ಖಡಕ್ ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್(C B Rishyant) ನೇಮಕ ಮಾಡಲಾಗಿದೆ.

ಅಂದಹಾಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌() ವರಿಷ್ಠಾಧಿಕಾರಿ(Dakshina kannada SP) ವಿಕ್ರಮ್‌ ಅಮಟೆ(Vikram amate) ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ್ದು, ಪ್ರಭಾರ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಐಪಿಎಸ್‌ ಅಧಿಕಾರಿ ರಿಷ್ಯಂತ್‌ ಸಿ.ಬಿ ಅವರನ್ನು ನಿಯೋಜಿಸಲಾಗಿತ್ತು. 2013ನೇ ಸಾಲಿನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿರುವ ರಿಷ್ಯಂತ್ ಮಂಗಳೂರಿನಲ್ಲಿ ಎಎಸ್ಪಿಯಾಗಿ, ಬಾಗಲಕೋಟೆ, ದಾವಣಗೆರೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಅಲ್ಲದೆ ಈ ಹಿಂದೆ ದಾವಣಗೆರೆಯ(Davangere) ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು.

 

ಇದನ್ನು ಓದಿ: Husband – Wife: ಭಾರತಕ್ಕಿಂತ, ಅಮೇರಿಕ ಬೆಸ್ಟ್ ಎಂದು ರಾತ್ರೋ ರಾತ್ರಿ ವಿದೇಶ ಹಾರಿದ ದಂಪತಿಗಳು, ಆದರೆ ಮುಂದೆ ನಡೆದಿದ್ದೇ ಬೇರೆ !