Health tips: ಧಾರಾಕಾರ ಮಳೆಯಲ್ಲಿ ಒದ್ದೆಯಾಗುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಎದುರಾಗುವುದು ಗ್ಯಾರಂಟಿ.!

Health tips This health problem is guaranteed if you get soaked in the rain

Health tips: ನೈಋತ್ಯ ಮಾನ್ಸೂನ್ ನಿಧಾನವಾಗಿ ಮುಂದುವರಿಯುತ್ತಿದ್ದು, ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ, ಪೂರ್ಣ ಪ್ರಮಾಣದ ಮಳೆಯಾಗಲಿದೆ. ಮೊದಲ ತುಂತುರು ಮಳೆಯಲ್ಲಿ ಒದ್ದೆಯಾಗುವುದು ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಶೀತ, ಕೆಮ್ಮು, ಚರ್ಮ ಸಂಬಂಧಿತ ಅಸ್ವಸ್ಥತೆಗಳು, ಕೂದಲು ಉದುರುವಿಕೆ ಇವೆಲ್ಲವೂ ನಿಮ್ಮನ್ನು ಕಾಡುವ ಸಮಸ್ಯೆಗಳಾಗಿವೆ. ಆರೋಗ್ಯರಕ್ಷಣೆಗಾಗಿ (Health tips) ತಜ್ಞರ ಸಲಹೆಗಳನ್ನು ಪಾಲಿಸುವುದು ಸೂಕ್ತ ಅವುಗಳ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ

ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚು :

ಮೊದಲ ಮಳೆಯಲ್ಲಿ ಒದ್ದೆಯಾಗುವುದರಿಂದ ಶೀತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲೂ ಮುಖ್ಯವಾಗಿ ಮೊದಲ ಮಳೆಗೆ ಒದ್ದೆಯಾದ್ರೆ ನೇರವಾಗಿ ಕೂದಲು ಹಾನಿಗೊಳ್ಳುತ್ತದೆ. ಮೊದಲ ಬಾರಿಗೆ ಮಳೆ ಬಂದಾಗ, ನೀರಿನೊಂದಿಗಿನ ವಾತಾವರಣದಲ್ಲಿರುವ ಧೂಳು, ಇತರ ರಾಸಾಯನಿಕ ಸಂಯುಕ್ತಗಳು ಸಹ ಬೀಳುತ್ತವೆ. ಅವು ನಮ್ಮ ದೇಹ ಮತ್ತು ತಲೆಯ ಮೇಲೆ ನೇರವಾಗಿ ಬೀಳುತ್ತವೆ, ಇದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆಯ ಜೊತೆಗೆ ತಲೆಯಲ್ಲಿ ತುರಿಕೆ ಮತ್ತು ಸೋಂಕಿನ ಸಮಸ್ಯೆಗಳು ಉಂಟಾಗಬಹುದು.

ಚರ್ಮದ ಸಮಸ್ಯೆಗಳು:

ಮೊದಲ ಮಳೆನೀರು ಹೆಚ್ಚಿನ ಆಮ್ಲ ಮತ್ತು ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಮೊದಲ ಮಳೆಯಲ್ಲಿ ಒದ್ದೆಯಾಗಿರುವ ಅನೇಕ ಜನರಿಗೆ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಮುಖದ ಮೇಲೆ ಮೊಡವೆಗಳು ಸಹ ಬೀಳುತ್ತದೆ. ರೋಗ ನಿರೋಧಕ ಶಕ್ತಿ ಕುಸಿಯುವ ಅಪಾಯವೂ ಇದೆ.

 

ಇದನ್ನು ಓದಿ: Free Bus New rules: ಉಚಿತ ಬಸ್ ಪ್ರಯಾಣಕ್ಕೆ ಸ್ಟ್ರಿಕ್ಟ್ ರೂಲ್ಸ್ ಸಾಧ್ಯತೆ, ದಿನವೂ ಉಚಿತ ಬಸ್ ಇರಲ್ವಾ, ದಿನ ಬಿಟ್ಟು ದಿನ ಮಾತ್ರವಾ ? 

Leave A Reply

Your email address will not be published.