Shakthi yojane: ಮಹಿಳೆಯರೇ.. ಉಚಿತ ಪ್ರಯಾಣ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಹೋಗಬೇಕೋ ಬೇಗ ಹೋಗಿ ಬನ್ನಿ!! ಯಾಕೆ..? ಏನಾಯ್ತು..? ಕೊನೆಗೂ ಉಲ್ಟಾ ಹೊಡಿತಾ ಸರ್ಕಾರ!!

Shakthi yojane :ಕರ್ನಾಟಕ ಸರ್ಕಾರದ(karnataka Government) ಶಕ್ತಿ ಯೋಜನೆಯ(Shakthi yojane) ಉಚಿತ ಬಸ್‌ ಪ್ರಯಾಣಕ್ಕೆ(Free bus travel) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ. ಬಸ್ ಗಳು ರಶ್ ಆಗಿ ಸಾಗುತ್ತಿವೆ. ಆದರೆ ಇವೆಲ್ಲದರ ನಡುವೆಯೇ ‘ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂಬ ಹೇಳಿಕೆಯೊಂದು ಹೊರಬಿದ್ದಿದೆ.

 

ಕಾಂಗ್ರೆಸ್ ಸರ್ಕಾರದ(Congress Government) ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದು, ಈಗಾಗಲೇ ಕೆಲವೆಡೆ ಅವಾಂತರಗಳು ಆಗಿಹೋಗಿವೆ. ಅಲ್ಲದೆ ದಿನದಿಂದ ದಿನಕ್ಕೆ ಇದರಿಂದ ಸರ್ಕಾರಕ್ಕೆ ಕೋಟಿ, ಕೋಟಿ ಹೊರೆ ಬೀಳುತ್ತಿದೆ. ಇವೆಲ್ಲದರ ನಡುವೆಯೇ ‘ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್(Toor) ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂಬ ಹೇಳಿಕೆಯೊಂದು ಹೊರಬಿದ್ದಿದೆ.

 

ಹೌದು, ಕಾಂಗ್ರೆಸ್(Congress) ಸರ್ಕಾರದ ಪ್ರತಿಯೊಂದು ನಡೆಗಳನ್ನು, ಯೋಜನೆಗಳನ್ನು ಟೀಕಿಸುತ್ತಿರೋ ಬಿಜೆಪಿಯ(BJP) ಮಾಜಿ ಸಚಿವ ಆರ್.ಅಶೋಕ್(R Ashok) ಹೀಗೊಂದು ಹೇಳಿಕೆಯನ್ನು ಹಿರಿಬಿಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

 

“ಮಹಿಳೆಯರೇ ಬೇಗ ಬೇಗ ನೀವಂದುಕೊಂಡಲ್ಲಿಗೆ ಹೋಗಿ, ಬಂದು ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಿ, ಯಾಕೆಂದರೆ ಈ ಫ್ರೀ ಬಸ್ ಪ್ರಯಾಣ ಹೆಚ್ಟು ದಿನ ಇರುವುದಿಲ್ಲ. ಆಮೇಲೆ ನಿಮಗೆ ಅವಕಾಶ ಸಿಗುವುದಿಲ್ಲ. ಖಜಾನೆ ಖಾಲಿಯಾಗುತ್ತಿದೆ, ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆಗ ಎಲ್ಲ ಯೋಜನೆಗಳನ್ನು ಹಿಂದಕ್ಕೆ ಪಡೆಯುತ್ತಾರೆ. ಬೇಗ ನಿಮ್ಮ ಎಲ್ಲ ಹರಕೆಗಳನ್ನು ತೀರಿಸಿಕೊಳ್ಳಿ ಎಂದು ಅವರು ರಾಜ್ಯದ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ :ತುಂಗಾ ನದಿಗೆ ಈಜಲು ತೆರಳಿದ್ದ ನಿಟ್ಟೆ ಕಾಲೇಜಿನ ಉಪನ್ಯಾಸಕರು ನೀರುಪಾಲು !ಉಜಿರೆ ಕಾಲೇಜಿನ ಕೆಮಿಸ್ಟ್ರಿ ಲೆಕ್ಚರರ್ ‘ರ ಪತಿ ಪುನೀತ್ ಓರ್ವರು

 

Leave A Reply

Your email address will not be published.