Prakash Ambedkar: ಔರಂಗಾಜೇಬನ ಸಮಾಧಿಗೆ ತಲೆ ಬಾಗಿ ನೇಮಿಸಿದ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಆಕ್ರೋಶ !

Latest national news Vanchit Bahujan Aghadi president Prakash Ambedkar bows before Aurangzeb’s tomb

Prakash Ambedkar: ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕರಾದ ಪ್ರಕಾಶ್ ಅಂಬೇಡ್ಕರ್ (Prakash Ambedkar) ಅವರು ಶನಿವಾರ ಮುಂಬೈ ನ ಔರಂಗಾಬಾದ್ ಜಿಲ್ಲೆ ಕುಲ್ದಾಬಾದ್‌ನಲ್ಲಿರುವ, ಮೊಗಲ್ ದೊರೆ ಔರಂಗಜೇಬ್‌ ಅವರ ಗೋರಿಗೆ ಪುಷ್ಪನಮನ ಸಲ್ಲಿಸಿ ತಲೆಬಾಗಿ ನಮಸ್ಕರಿಸಿದ ಘಟನೆ ನಡೆದಿದೆ.ಪ್ರಕಾಶ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಬಿ. ಆರ್.ಅಂಬೇಡ್ಕರ್ ಅವರ ಮೊಮ್ಮಗ.

ಈ ಬೆಳವಣಿಗೆ ಕುರಿತ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು, ತೀವ್ರ ರಾಜಕೀಯ ಚರ್ಚೆಗೂ ಆಕ್ರೋಶಕ್ಕೂ ಕಾರಣವಾಗಿದೆ. ಟ್ರಸ್ಟಿಗಳ ಜೊತೆಗೂಡಿ ಅವರು ಗೋರಿಗೆ ಪುಷ್ಪನಮನ ಸಲ್ಲಿಸಿದ್ದು, ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಸದಸ್ಯರು ಪ್ರಕಾಶ್ ಅಂಬೇಡ್ಕರ್ ರನ್ನು ಸನ್ಮಾನಿಸಿದರು.

ಗೋರಿಗೆ ಭೇಟಿ ನೀಡಿ ನಮಸ್ಕರಿಸಿದ ಕುರಿತ ಪ್ರಶ್ನೆಗೆ, `ಔರಂಗಜೇಬ್ ಭಾರತದಲ್ಲಿ 50 ವರ್ಷ ಆಡಳಿತ ನಡೆಸಿದ್ದಾರೆ. ಇತಿಹಾಸದಿಂದ ಇದನ್ನು ತೆಗೆಯಲು ಸಾಧ್ಯವೇ ?’ ಎಂದು ಮರು ಪ್ರಶ್ನಿಸಿದ್ದಾರೆ ಅಂಬೇಡ್ಕರರ ಮೊಮ್ಮಗ. ಔರಂಗಜೇಬ್ ದುರುಳ ಧರ್ಮಾಂಧ ದೊರೆ. ಭಾರತದ ಹಲವು ದೇವಾಲಯಗಳನ್ನು ದ್ವಂಸ ಮಾಡಿದ ಹಿನ್ನೆಲೆಯ ಈ ರಾಜನ ಗೋರಿಗೆ ಎಡಪಂಥೀಯ ಪ್ರಕಾಶ್ ನಮಸ್ಕರಿಸಿದ್ದು ಭಾರೀ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

‘ಔರಂಗಜೇಬ್ ಅಧಿಕಾರಕ್ಕೆ ಬಂದುದು ಹೇಗೆ? ಎಂಬುದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರೇ ವಿವರಿಸಿದ್ದಾರೆ. ಇದಕ್ಕಾಗಿ ನೀವು ಜೈ ಚಂದ್‌ಗೆ ಶಾಪ ಹಾಕಬೇಕು. ಜೈ ಚಂದ್‌ನಿಂದಾಗಿ ಔರಂಗಜೇಬ್ ಅಧಿಕಾರಕ್ಕೆ ಬಂದರು’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ನಾಯಕ, ಸಚಿವ ದಾದಾ ಭುಸೆ ಅವರು, ‘ಎಲ್ಲಿಗೆ ಹೋಗಬೇಕು, ಯಾರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬುದು ಒಬ್ಬರ ವೈಯಕ್ತಿಕವಾದ ಆಯ್ಕೆ. ಆದರೆ, ‘ಧ್ರುವೀಕರಣ’ ಉದ್ದೇಶದಿಂದ ಇದನ್ನು ಮಾಡಿದ್ದರೆ ತಪ್ಪು ಎಂದು ಅವರು ಹೇಳಿದ್ದಾರೆ. ಪ್ರಕಾಶ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ. ವೃತ್ತಿಯಿಂದ ವಕೀಲರಾಗಿರುವ ಅವರು, ಎರಡು ಅವಧಿಗೆ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಅವರು ರಾಜ್ಯಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Door Vastu Tips: ನಿಮ್ಮ ಮನೆಯ ಮುಖ್ಯ ದ್ವಾರದಿಂದಲೇ ಸಮಸ್ಯೆಗಳು ಬರಬಹುದು! ಈ ಸಮಸ್ಯೆ ತೊಡೆದು ಹಾಕಲು ಈ ವಾಸ್ತು ಕ್ರಮ ಅನುಸರಿಸಿ!

Leave A Reply

Your email address will not be published.